ಸಿಪಿಐ ಹಿರಿಯ ಸದಸ್ಯ ಪಿ. ಚಂದ್ರಶೇಖರ್ ನಿಧನ
ಬಂಟ್ವಾಳ: ಸಿಪಿಐನ ಹಿರಿಯ ಸದಸ್ಯ, ಪುದು ಗ್ರಾಮದ ಕುಮ್ಡೇಲು ನಿವಾಸಿ ಕಾಮ್ರೇಡ್ ಪಿ. ಚಂದ್ರಶೇಖರ್ ಟೈಲರ್(61) ಗುರುವಾರ ಬೆಳಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ನಗರದ ಆಸ್ವತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ.
ಪಿ. ಚಂದ್ರಶೇಖರ ಅವರು ಹಲವು ದಶಕಗಳ ಕಾಲದಿಂದ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಕೆಲಸಮಾಡಿಕೊಂಡು ಬಂದಿದ್ದು ರೈತ ಮತ್ತು ಕಾರ್ಮಿಕ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಂಟ್ವಾಳ ತಾಲೂಕಿನಾದ್ಯಂತ ಕಮ್ಯೂನಿಸ್ಟ್ ಪಕ್ಷ ಹಮ್ಮಿಕೊಂಡಿದ್ದ ಭೂ ಹೋರಾಟ, ನಿವೇಶನ ರಹಿತರಿಗೆ ಭೂಮಿ ಕೊಡಿಸುವ ಹೋರಾಟ ಚಳುವಳಿಗಳಲ್ಲಿ ಪಾಲ್ಗೊಂಡಿದ್ದರು. ಪುದು ಗ್ರಾಪಂ ಸದಸ್ಯರಾಗಿದ್ದರು. ರಂಗಭೂಮಿಯಲ್ಲಿ ನಾಟಕ ರಚನೆಕಾರರಾಗಿದ್ದು ನಟರಾಗಿಯೂ ಅಭಿನಯಿಸಿದ್ದಾರೆ. ಅವರು ರಚಿಸಿ ನಟಿಸಿದ 'ಬೆರಿಬುಡಂದಿ ಪಾಪ' ಮತ್ತು 'ನಿರಾಶೆ' ಎಂಬ 2 ನಾಟಕಗಳು ತುಂಬಾ ಜನಪ್ರಿಯತೆ ಪಡೆದಿವೆ. ಹಲವು ನಾಟಕಗಳಲ್ಲಿ ಸ್ರೀ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಸಂತಾಪ: ಸಿಪಿಐನ ಹಿರಿಯ ಮುಖಂಡ ಬಿ. ವಿಶ್ವನಾಥ ನಾಯಕ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ. ಸಂಜೀವ, ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ. ಶೇಖರ್, ಡಿ. ಹೆನ್ರಿ ಲೋಬೋ, ಸುರೇಶ್ ಕುಮಾರ್, ಬಿ. ಬಾಬು ಭಂಡಾರಿ ಹಾಗೂ ಸಿಪಿಐ ಜಿಲ್ಲಾ ಮುಖಂಡ ಎಸ್.ಸಿ. ಅಂಚನ್, ಪುರಸಭಾ ಮಾಜಿ ಅಧ್ಯಕ್ಷ ಪಿ. ವಿಠಲ ಬಂಗೇರ, ಕೆ. ಈಶ್ವರ್, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ವಿ. ಸೀತಾರಾಮ್, ಎಂ. ಕರುಣಾಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಸ್ತಾ ಜೈನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ವಿಟ್ಲ: ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಹಸ್ತಾ ಎಸ್. ಜೈನ್, ಕೇರಳದ ಪಾಲ್ಘಾಟ್ನಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಈಕೆ ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಚೇತನ್ ಜೈನ್ ಮತ್ತು ಮಮತಾ ಎಸ್. ಜೈನ್ ಪುತ್ರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

