ದಕ್ಷಿಣ ಕನ್ನಡ

ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗೆ ಡಾ. ಸಂಶುದ್ದೀನ್ ಸಾರಥ್ಯ

Published On :

ವಿಟ್ಲ: ಅಮೆರಿಕಾದ ಸ್ಕಿನೋವ್ ಪಬ್ಲಿಕೇಶನ್ಸ್ ಆರಂಭಿಸಿರುವ ಜರ್ನಲ್ ಆಫ್ ಸಿಂಗಲ್ ಮಲೆಕ್ಯೂಲ್ ರಿಸರ್ಚ್ ಎಂಬ ನೂತನ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗೆ ಪ್ರಧಾನ ಸಂಪಾದಕರಾಗಿ
ವಿಟ್ಲ ಮೂಲದ ಡಾ. ಸಂಶುದ್ದೀನ್ ಆಯ್ಕೆಯಾಗಿದ್ದಾರೆ.
 ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಬಿ. ನಾರಾಯಣ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಇವರು ಮಂಡಿಸಿದ 'ಸಿಂತೆಸಿಸ್ ಆಂಡ್ ಸ್ಟ್ರಕ್ಚರಲ್ ಸ್ಟಡೀಸ್ ಆಫ್ ಸಮ್ ನ್ಯೂ ನೈಟ್ರೋಜನ್ ಕಂಟೈನಿಂಗ್ ಹೆಟಿರೋ ಸೈಕ್ಲಿಕ್ ಕಂಪೌಂಡ್ಸ್‌' ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ ಡಾಕ್ಟರೇಟ್ ಪದವಿ ನೀಡಿತ್ತು.
 ಇವರು ಕೈಗಾ ಅಣುಸ್ಥಾವರ ಪ್ರಾಯೋಜಿತ ಪ್ರಾಜೆಕ್ಟ್‌ನಲ್ಲಿ ಕೈಗಾ ಸುತ್ತಮುತ್ತಲಿನ ಜಲಮಾದರಿಗಳ ರಸಾಯನಾಂಶಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅಲ್ಲದೆ, ತಮ್ಮ ಸ್ನಾತಕೋತ್ತರ ಪದವಿ ಬಳಿಕ ಬೆಂಗಳೂರಿನ ಹೈಕಲ್ ಫಾರ್ಮಾಸ್ಯೂಟಿಕಲ್ಸ್‌ನಲ್ಲಿ ರೀಸರ್ಚ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
 ವಿಟ್ಲ ಸೆರೆಂತಿಮಠದ ಹಾಜಿ ಕುಂಞಪ್ಪ-ಅವ್ವಾಬಿ ದಂಪತಿ ಪುತ್ರ ಸಂಶುದ್ದೀನ್, ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ರಸಾಯನ ಶಾಸ್ತ್ರ ಕೋರ್ಸ್ ಸಂಯೋಜಕರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.