ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

ಕಡಲಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಮಲ್ಪೆ:
ಇಲ್ಲಿನ ಸಮುದ್ರ ತೀರದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಅಭಿಷೇಕ್ ಅಗ್ನಿಹೋತ್ರಿ (19) ಮೃತ ವಿದ್ಯಾರ್ಥಿ. ಈತ ಮೂಲತಃ ದೆಹಲಿ ನಿವಾಸಿಯಾಗಿದ್ದು, ಮಣಿಪಾಲ ವಿ.ವಿ.ಯಲ್ಲಿ ಪ್ರಥಮ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ.ಭಾನುವಾರ ಸಂಜೆ ರಜೆ ಕಳೆಯಲು ಗೆಳೆಯರೊಂದಿಗೆ ಮಲ್ಪೆ ಸಮುದ್ರ ತೀರಕ್ಕೆ ಹೋಗಿದ್ದು, ಸಂಜೆ 6 ಗಂಟೆಗೆ ಸಮುದ್ರ ಅಲೆಗಳೊಂದಿಗೆ ಅಟವಾಡುತ್ತಿದ್ದ ಅಭಿಷೇಕ್ ನೀರಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದ. ನಂತರ ಸ್ಥಳೀಯ ಮೀನುಗಾರರು ಶೋಧ ನಡೆಸಿ ಆತನನ್ನು ಮೇಲಕ್ಕೆ ತಂದರಾದರೂ ಅದಾಗಲೇ ಆತ ಮೃತಪಟ್ಟಿದ್ದ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹ ಗುರುತು ಪತ್ತೆಗೆ ಮನವಿ
ಮಂಗಳೂರು:
ವೆನ್‌ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರಿಲ್ಲದ ಮೃತ ಶರೀರಗಳಿದ್ದು, ಸಂಬಂಧಪಟ್ಟವರು ಮೂರು ದಿನದೊಳಗೆ ವಿಲೇವಾರಿಗೊಳಿಸುವಂತೆ ಆಸ್ಪತ್ರೆ ವೈದ್ಯಾಧಿಕಾರಿ ಹೇಳಿದ್ದಾರೆ. ಬಾಗಲಕೋಟೆ ನವನಗರದ ಲಕ್ಷ್ಮಣರ ಮಗ ವಿಠಲ(45) ಆ. 12 ರಂದು ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆ. 14 ಮೃತಪಟ್ಟಿದ್ದಾರೆ. 68 ವರ್ಷದ ಅಪರಿಚಿತ ವ್ಯಕ್ತಿ ಒಳರೋಗಿಯಾಗಿ ದಾಖಲಾಗಿದ್ದು, ಆ. 15 ರಂದು ಮೃತಪಟ್ಟಿದ್ದಾರೆ. ಕಾರವಾರ ಬೈಕೂರು ಅರ್ಗ ನಿವಾಸಿ ಚಂದ್ರಹಾಸ(40) ಆ. 8 ರಂದು ದಾಖಲಾಗಿದ್ದು, ಆ.15 ರಂದು ಮರಣ ಹೊಂದಿದ್ದಾರೆ. ಹಾಸನದ ಕೊಪ್ಪಳ ಜಯನಗರ ಅನಂತ ಭಾಗ್ಯರಾಯ ಎಂಬವರ ಪತ್ನಿ ಆಶಾ(42) ಜು. 27 ರಂದು ದಾಖಲಾಗಿದ್ದು, ಆ. 19 ರಂದು ಮೃತಪಟ್ಟಿದ್ದಾರೆ. ಉಡುಪಿ ಕಾರ್ಕಳ ಬಜಗೋಳಿ ನಿವಾಸಿ ರಾಮಣ್ಣ ಶೆಟ್ಟಿ(61) ಆ. 20 ರಂದು ಮರಣ ಹೊಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.