ದಕ್ಷಿಣ ಕನ್ನಡ

ಪಾತಕಿ ರಶೀದ್ ಮಲಬಾರಿಗೆ ಶಿಕ್ಷೆ

Published On :

ಮಂಗಳೂರು: ವರುಣ್ ಗಾಂಧಿ ಮತ್ತು ಪ್ರಮೋದ್ ಮುತಾಲಿಕ್ ಕೊಲೆಗೆ ಸಂಚು ರೂಪಿಸಿದ ಆರೋಪದಡಿ 4 ವರ್ಷದ ಹಿಂದೆ ಜೈಲು ಸೇರಿರುವ ಪಾತಕಿ ರಶೀದ್ ಮಲಬಾರಿಗೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಜಿಲ್ಲಾ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
 ಶಿಕ್ಷೆ ಪ್ರಮಾಣವನ್ನು ಆ.28ರಂದು ಪ್ರಕಟಿಸಲಿದೆ. 1998ರಲ್ಲಿ ಪಣಂಬೂರಲ್ಲಿ ಚೋಟಾರಾಜನ್‌ನ ಇಬ್ಬರು ಸಹಚರನ್ನು ಕೊಂದ ಪ್ರಕರಣ ವಿಚಾರಣೆ ಕೂಡಾ ಮುಗಿದಿದ್ದು, ಆ.29ರಂದು ಕೋರ್ಟ್ ತೀರ್ಪು ನೀಡಲಿದೆ.
ಮಲಬಾರಿ ಸಹಚರ, ಪಿಸ್ತೂಲ್ ಹೊಂದಿದ್ದ ಮೊಹಮದ್ ಹಾಸೀಮ್‌ಗೂ ಕೋರ್ಟ್ ಶಿಕ್ಷೆ ವಿಧಿಸಿದೆ.
 ಇಬ್ಬರು ಗಣ್ಯರ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ 2009ರಲ್ಲಿ ಅಂದಿನ ಡಿಸಿಐಬಿ ಇನ್‌ಸ್ಪೆಕ್ಟರ್ ಎಚ್.ಎನ್. ವೆಂಕಟೇಶ್ ಪ್ರಸನ್ನ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದರು.
 ಈತನ ಬಳಿಯಿಂದ 9ಎಂ.ಎಂ. ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈತನ ಜತೆಯಲ್ಲಿ ಸಹಚರ ಸೊಹೈಲ್ ಇಸ್ಮಾಯಿಲ್ ಬಂಧಿಸಲಾಗಿತ್ತು. ಇದಕ್ಕೆ ಮೊದಲು ಇತರ ಸಹಚರರಾದ ಹಾಸಿಂ, ಸಯಾಫ್, ಇಬ್ಬು ಅಲಿಯಾಸ್ ಇಸುಬು ಸೆರೆ ಸಿಕ್ಕಿದ್ದರು. ಅವರಿಂದಲೂ 9 ಎಂ.ಎಂ. ಪಿಸ್ತೂಲ್ ವಶಪಡಿಸಿಕೊಳ್ಳಲಾಗಿತ್ತು. ಶಸ್ತ್ರಾಸ್ತ್ರ ಹೊಂದಿರುವ ಬಗ್ಗೆ ಮಾತ್ರ ಅಪರಾಧ ಸಾಬೀತಾಗಿದ್ದು, ಶಿಕ್ಷೆ ವಿಧಿಸಲಾಗಿದ್ದು, ಶಿಕ್ಷೆ ಪ್ರಮಾಣ ಇನ್ನಷ್ಟೇ ಘೋಷಿಸಬೇಕಾಗಿದೆ. 2000ದಲ್ಲಿ ನಡೆದ ಚೋಟಾ ರಾಜನ್ ಹತ್ಯಾ ಯತ್ನ 2001ರಲ್ಲಿ ಚೋಟಾರಾಜನ್ ಸಹಚರ ಬಾಳು ಡೋಂಗ್ರೆ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ.
ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ, ಮಂಜುನಾಥ್ ಭಟ್ ಪಡ್ನೆ ವಾದಿಸಿದ್ದರು.
 ಆರೋಪಿ ಪರವಾಗಿ ವಕೀಲ ಪುರುಷೋತ್ತಮ ಪೂಜಾರಿ ವಾದಿಸಿದ್ದರು. ರಶೀದ್ ಮಲಬಾರಿ ನಿರಪರಾಧಿ, ಆತನನ್ನು ವಿನಾಕಾರಣ ಬಂಧಿಸಿದ್ದಾರೆ ಎಂದು ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಮಾನವಹಕ್ಕು ಆಯೋಗಕ್ಕೆ ಅನೇಕ ದೂರುಗಳನ್ನು ಬೆಂಬಲಿಗರ ಮೂಲಕ ಮಲಬಾರಿ ನೀಡಿಸಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.