ದಕ್ಷಿಣ ಕನ್ನಡ

ರೈಲ್ವೆ ಯೋಜನೆ ತ್ವರಿತ ಜಾರಿಗೆ ಸಚಿವ ಖರ್ಗೆಗೆ ನಳಿನ್ ಮನವಿ

Published On :

ಮಂಗಳೂರು: ನೈಋತ್ಯ ರೇಲ್ವೆ ಮತ್ತು ಕೊಂಕಣ ರೇಲ್ವೆ ಸೇರಿಸಿ ಮಂಗಳೂರು ವಿಭಾಗ ರಚನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ದೆಹಲಿಯಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಸಲ್ಲಿಸಿದರು.
ಹಾಸನ-ಮಂಗಳೂರು ರೇಲ್ವೆ ಅಭಿವೃದ್ಧಿ ನಿಗಮ(ಎಚ್‌ಎಂಆರ್‌ಡಿಸಿ)ಒಪ್ಪಂದ ಪ್ರಕಾರ ಈ ಮಾರ್ಗದಲ್ಲಿ ಹಾಲಿ 3 ರೈಲಿಗಿಂತ ಹೆಚ್ಚಿನ ರೈಲು ಸಂಚಾರಕ್ಕೆ ಅವಕಾಶವಿಲ್ಲ. ಆದ್ದರಿಂದ ಈ ಒಪ್ಪಂದಕ್ಕೆ ತಿದ್ದುಪಡಿ ತರಬೇಕು. ಬೆಂಗಳೂರು-ಮಂಗಳೂರು ವಯಾ ಅರಸೀಕೆರೆ ಮಾರ್ಗವಾಗಿ 21 ಕೋಚ್‌ಗಳ ಹೊಸ ರೈಲು ಪ್ರಾರಂಭಿಸಬೇಕು. ಬಜೆಟ್‌ನಲ್ಲಿ ಘೋಷಿಸಿದ ಯಶವಂತಪುರ-ಮಂಗಳೂರು ಹೊಸ ರೈಲು ಸಂಚಾರವನ್ನು ವಯಾ ಸೇಲಂ ಬದಲು ಅರಸೀಕೆರೆ ಮಾರ್ಗವಾಗಿ ಪ್ರಾರಂಭಿಸಬೇಕು. ಯಶವಂತಪುರ-ಕಾರವಾರ ನಿತ್ಯ ರೈಲು ಸಂಚಾರ, ಮಂಗಳೂರು-ಪುತ್ತೂರು-ಸುಬ್ರಹ್ಮಣ್ಯ ಮಾರ್ಗದಲ್ಲಿ ಡೆಮು ರೈಲು ಶುರುವಾಗಬೇಕು, ಪ್ರತಿನಿತ್ಯ ಕಬಕ ಪುತ್ತೂರು ಹಾಗೂ ಚೆರ್ವತ್ತೂರು ರೈಲು ಬೆಳಗ್ಗೆ 9ಕ್ಕೆ ಮಂಗಳೂರು ತಲುಪುವಂತಾಗಬೇಕು. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 4 ಮತ್ತು 5ನೇ ಫ್ಲಾಟ್‌ಫಾರಂ ರಚಿಸಬೇಕು ಇತ್ಯಾದಿ ಬೇಡಿಕೆಯನ್ನು ಸಚಿವರಿಗೆ ಸಲ್ಲಿಸಿದರು. ಈ ಕುರಿತು ರೇಲ್ವೆ ಸಲಹಾ ಸಮಿತಿ ಸದಸ್ಯ ಸುದರ್ಶನ ಪುತ್ತೂರು ಈಗಾಗಲೇ ರೇಲ್ವೆ ಸಚಿವರಿಗೆ, ಸಂಸದರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ನಿಡ್ಡೋಡಿಗೆ ತಂಡ ಕಳುಹಿಸಿ: ಮೂಡುಬಿದಿರೆಯ ನಿಡ್ಡೋಡಿಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಮೊದಲು ಸ್ಥಳೀಯರ ಅಭಿಪ್ರಾಯ ಸಂಗ್ರಹಕ್ಕೆ ತಜ್ಞರ ತಂಡ ಕಳುಹಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಇಂಧನ ಸಚಿವರ ಗಮನ ಸೆಳೆದಿದ್ದು, ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಎಲ್ಲರ ವಿರೋಧವಿದೆ. ಯುಪಿಸಿಎಲ್‌ನಂತೆ ಇಲ್ಲಿಯೂ ತೊಂದರೆ ತಲೆದೋರಲಿದೆ. ಆದ್ದರಿಂದ ಯೋಜನೆ ಜಾರಿಗೊಳಿಸುವ ವಿಚಾರದಲ್ಲಿ ಮರು ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.