ದಕ್ಷಿಣ ಕನ್ನಡ

ವಶೀಕರಣ ಹುಡಿ ನೀಡಿ ಚಿನ್ನಾಭರಣ ಅಪಹರಣ

Published On :

ಸುಳ್ಯ: ವಶೀಕರಣ ಹುಡಿ ನೀಡಿ ಕಿವಿಯಲ್ಲಿದ್ದ ಬೆಂಡೋಲೆಯನ್ನು ಅಪಹರಿಸಿದ ಘಟನೆ ಸುಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವರದಿಯಾಗಿದೆ. ಅಡ್ಕಾರ್ ಗುಂಡ್ಯಡ್ಕ ನಿವಾಸಿ ತಾಹಿರಾ ಹಾಗೂ ಇಬ್ರಾಹಿಂ ಮುಸ್ಲಿಯಾರ್ ದಂಪತಿ ಪುತ್ರಿ ಮೊಹ್ಸೀನಾ ನ.28ರಂದು ಕಾಲು ನೋವಿಗೆ ಚಿಕಿತ್ಸೆಗೆಂದು ಸುಳ್ಯ ಪ್ರಾಥಮಿಕ ಕೇಂದ್ರಕ್ಕೆ ತನ್ನ ತಾಯಿಯೊಂದಿಗೆ ಬಂದಿದ್ದಳು. ವೈದ್ಯರು ಆಕೆಗೆ ಎರಡು ಇಂಜೆಕ್ಷನ್ ಅವಶ್ಯಕತೆ ಇದೆ ಎಂದು ತಿಳಿಸಿ ಒಂದು ಇಂಜಕ್ಷನ್ ಕೊಟ್ಟು ಅರ್ಧತಾಸು ವಾರ್ಡ್‌ನಲ್ಲಿ ವಿಶ್ರಾಂತಿ ಪಡೆದು ಮತ್ತೆ ಬರುವಂತೆ ತಿಳಿಸಿದರು. ಅದರಂತೆ ಆಕೆ ಅರ್ಧಗಂಟೆ ಕಳೆದು ಮತ್ತೆ ಇಂಜಕ್ಷನ್ ಪಡೆಯಲೆಂದು ಬರುತ್ತಿರುದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ನಾನು ನಿಮ್ಮ ದೂರದ ಸಂಬಂಧಿ, ಇಬ್ರಾಹಿಂ ಮುಸ್ಲಿಯಾರ್ ನನಗೆ ತುಂಬಾ ಹತ್ತಿರದವರು, ಅವರ ಜತೆ ಹತ್ತಿರದ ಒಡನಾಟ ಇದೆ ಎಂದು ಹೇಳಿಕೊಂಡಿದ್ದಾನೆ. ಹಾಗೂ ತಾಹಿರಾ ಮತ್ತು ಮೊಹ್ಸೀನಾ ನಮಗೆ ನಿಮ್ಮ ಪರಿಚಯ ಇಲ್ಲ ಎಂದರೆನ್ನಲಾಗಿದೆ. ಅಷ್ಟರಲ್ಲಿ ಅಪರಿಚಿತ ವ್ಯಕ್ತಿಯು ತನ್ನ ಪ್ಯಾಂಟಿನಿಂದ ಏನೋ ಒಂದು ಹುಡಿಯನ್ನು ಹೊರತೆಗೆದು ನಿಮ್ಮ ಕಿವಿಯಲ್ಲಿರುವ ಓಲೆಯನ್ನು ಕೊಡಿ ಮತ್ತೆ ತಂದುಕೊಡುತ್ತೇನೆ ಎಂದು ಹೇಳಿದ್ದಾನೆ. ತಾಹಿರಾ ತಮ್ಮ ಮಗಳ ಕಿವಿಯಲ್ಲಿದ್ದ ಅರ್ಧ ಪವನ್ ತೂಕದ ಓಲೆಯನ್ನು ಆತನಿಗೆ ತೆಗೆದುಕೊಟ್ಟಿದ್ದಾರೆ. ಕೆಲಕಾಲ ತಾವೆಲ್ಲಿದ್ದೇವೆ ಎಂಬ ಅರಿವೇ ಇಲ್ಲದಂತಿದ್ದ ತಾಯಿ ಮತ್ತು ಮಗಳು ಆಸ್ಪತ್ರೆಯ ಒಳಗೆ ಅತ್ತಿಂದಿತ್ತ ತಿರುಗುತ್ತಿದ್ದರು ಎನ್ನಲಾಗಿದೆ. ಸ್ವಲ್ಪ ಹೊತ್ತಿನ ನಂತರ ಸಾಮಾನ್ಯ ಸ್ಥಿತಿಗೆ ಮರಳಿದ ಅವರು ಅಪರಿಚಿತ ವ್ಯಕ್ತಿಗಾಗಿ ಹುಡುಕಾಡಿದ್ದು ಆತ ನಾಪತ್ತೆಯಾಗಿದ್ದ.
ಮರುಕಳಿಸಿದ ಘಟನೆ: ಈ ಘಟನೆ ನಡೆದು ಎರಡು ದಿನದ ಬಳಿಕ ಇಂಥದ್ದೇ ಘಟನೆ ಮತ್ತೆ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಶನಿವಾರ ಪ್ರಾಥಮಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಅಡ್ಕಾರ್ ಕಾಲೋನಿ ನಿವಾಸಿ ಮಹಿಳೆಯೊಬ್ಬರ ಕಿವಿಯಲ್ಲಿದ್ದ ಓಲೆಯನ್ನು ಅಪರಿಚಿತನೊಬ್ಬ ಇದೇ ರೀತಿ ಎಗರಿಸಿದ್ದಾನೆ. ಈ ಘಟನೆ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.