ದಕ್ಷಿಣ ಕನ್ನಡ

ವೃದ್ಧೆ ಭವಾನಿ ಕೊಲೆ ಆರೋಪಿಗಳ ಸೆರೆಗೆ ಆಗ್ರಹ: ಪ್ರತಿಭಟನೆ

Published On :

ಮಂಗಳೂರು: ಶಕ್ತಿನಗರ ಕಾಲನಿ ಭವಾನಿ ಕೊಲೆ ಪ್ರಕರಣ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ತುಳುನಾಡ ರಕ್ಷಣೆ ವೇದಿಕೆ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ, ಮಹಾಕಾಳಿ ಗುಡ್ಡೆ ಬಳಿ ರಾತ್ರಿ ವೃದ್ಧೆಯ ಚಿನ್ನಾಭರಣ ದರೋಡೆ ಮಾಡಿ. ತಲೆಗೆ ಹೊಡೆದು ಕೊಲೆ ಮಾಡಿ 20 ದಿನ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಕೆಲವು ಪ್ರಕರಣಗಳಲ್ಲಿ ರಾಜಕಾರಣಿಗಳು ಪೊಲೀಸ್ ಇಲಾಖೆ ಕೆಲಸಗಳಲ್ಲಿ ಮೂಗುತೂರಿಸುವ ಕೆಲಸ ಮಾಡುವುದರಿಂದ ಆರೋಪಿಗಳ ಬಂಧನ ಆಗುತ್ತಿಲ್ಲ. ಸಣ್ಣಪುಟ್ಟ ಪ್ರಕರಣಗಳಲ್ಲಿ ಆರೋಪಿಗಳನ್ನು ತಕ್ಷಣ ಬಂಧಿಸುವ ಪೊಲೀಸರು ಗಂಭೀರ ಪ್ರಕರಣದಲ್ಲಿ ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಸಣ್ಣಪುಟ್ಟ ಹಲ್ಲೆಗಳಿಗೆ ಬೀದಿಗೆ ಬಂದು ಪ್ರತಿಭಟಿಸುವ ತಥಾಕಥಿತ ಸಂಘಟನೆಗಳು ವೃದ್ಧೆ ಭವಾನಿ ಕೊಲೆ ಪ್ರಕರಣದಲ್ಲಿ ತುಟಿ ಬಿಚ್ಚುವುದಿಲ್ಲ ಎಂದು ಟೀಕಿಸಿದರು. ಶಕ್ತಿನಗರ ಪರಿಸರದಲ್ಲಿ ಅಪರಾಧ ಕೃತ್ಯಳು ಹೆಚ್ಚಾಗುತ್ತಿದ್ದು, ಇದಕ್ಕೆ ಪರಿಸರದಲ್ಲಿ ಗಾಂಜಾ ಮತ್ತು ಮಾದಕ ದ್ರವ್ಯ ಪೂರೈಕೆ ಜಾಲ ಸಕ್ರಿಯವಾಗಿರುವುದೇ ಕಾರಣ ಎಂದರು.
ಪ್ರಕರಣದ ತನಿಖೆಗೆ ಸಿಐಡಿ ಅಥವಾ ಸಿಬಿಐಗೆ ಒಪ್ಪಿಸಬೇಕು ಎಂದು ಕೇಳುತ್ತಿಲ್ಲ, ಆದರೆ ಪೊಲೀಸರು ನಿಷ್ಪಕ್ಷವಾಗಿ ತನಿಖೆ ನಡೆಸಲು ಜನಪ್ರತಿನಿಧಿಗಳು ಅನುವು ಮಾಡಿಕೊಡಬೇಕು ಎಂದು ವಿನಂತಿಸಿದರು.
ಮಾಜಿ ಕಾರ್ಪೊರೇಟರ್ ಅಝೀಝ್, ರಕ್ಷಿತ್ ಶೆಟ್ಟಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.