ದಕ್ಷಿಣ ಕನ್ನಡ

ಗ್ರಾಪಂ ಅಧ್ಯಕ್ಷ ಮೇಲೆ ಹಲ್ಲೆ: ಖಂಡನೆ

Published On :

ಬಂಟ್ವಾಳ: ಉಡುಪಿ ಜಿಲ್ಲೆಯ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ದ.ಕ. ಜಿಲ್ಲಾ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟ ಖಂಡಿಸಿದೆ. ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಒಕ್ಕೂಟದ ಅಧ್ಯಕ್ಷ ದೇವದಾಸ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಒಕ್ಕೂಟದ ವಿಶೇಷ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಉಡುಪಿ ಒಕ್ಕೂಟ ವತಿಯಿಂದ ಪ್ರಕರಣದ ವಿರುದ್ಧ ನಡೆಯುವ ಹೋರಾಟಕ್ಕೆ ಬೆಂಬಲ ನೀಡಲು ತೀರ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ದೇವದಾಸ ಭಂಡಾರಿ ಹೇಳಿದರು. ಜಿಲ್ಲಾ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ, ಕೋಶಾಧಿಕಾರಿ ಸೂಫಿ ಕುಂಝಿ, ತಾಲೂಕು ಒಕ್ಕೂಟ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಬಂಟ್ವಾಳ, ಮುರಲೀಧರ ರೈ, ಸಂತೋಷ್ ಜಾಕೆ, ಜಿಲ್ಲಾ ಸುಗ್ರಾಮ ಮಹಿಳಾ ಜನಪ್ರತಿನಿಧಿಗಳ ಸಂಘದ ಅಧ್ಯಕ್ಷೆ ವೃಂದಾ ಪೂಜಾರಿ, ಪ್ರಮುಖರಾದ ಪ್ರಭಾಕರ ಪ್ರಭು, ಆಸ್ಕರ್ ಅಲಿ, ಶಶಿಕಲಾ ಚೌಟ, ರಮಾನಾಥ ವಿಟ್ಲ, ಚಂದ್ರಶೇಖರ ಭಂಡಾರಿ, ಹರೀಶ್ಚಂದ್ರ ನಾಯ್ಕ, ಕಮಲಾಕ್ಷ ಪೂಜಾರಿ, ಬಾರತಿ ಚೌಟ ಇದ್ದರು.
ವಿದ್ಯಾರ್ಥಿಗಳ ಹೊಡೆದಾಟ
ವಿಟ್ಲ: ಕನ್ಯಾನ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಬುಧವಾರ ಹೊಡೆದಾಟ ನಡೆದಿದೆ. 11 ವಿದ್ಯಾರ್ಥಿಗಳ ಮೇಲೆ ಮುಚ್ಚಳಿಕೆ ಪತ್ರ ಬರೆಸಿಕೊಂಡು ರಾಜಿ ಸಂಧಾನ ನಡೆಸಿ, ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ. ವಾರ್ಷಿಕ ಕ್ರೀಡಾಕೂಟ ಸಂದರ್ಭ ಕ್ಷುಲ್ಲಕ ಕಾರಣಕ್ಕಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ವಿಟ್ಲ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಪತ್ರಿಕಾ ಏಜೆಂಟ್ ವಿಶ್ವನಾಥ ಶೆಣೈ ನಿಧನ
ಕಾಪು: ಇಲ್ಲಿನ ಪತ್ರಿಕಾ ಏಜೆಂಟ್ ಆಗಿದ್ದ ವಿಶ್ವನಾಥ ಶೆಣೈ (75) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಕಳೆದ 60 ವರ್ಷಗಳಿಂದ ವಿವಿಧ ಪತ್ರಿಕೆಗಳ ಮಾರಾಟಗಾರರಾಗಿ ಜನಾನುರಾಗಿಯಾಗಿದ್ದ ಶೆಣೈ 12 ವರ್ಷಗಳಿಂದ 'ಕನ್ನಡಪ್ರಭ' ಪತ್ರಿಕೆಯ ಏಜೆಂಟರಾಗಿದ್ದರು. ಸಮಾಜಸೇವಕರಾಗಿ ಜನಾನುರಾಗಿಯಾಗಿದ್ದ ಅವರು, ಕಾಪು ಮಾರಿಗುಡಿ, ವೆಂಕಟರಮಣ ದೇವಸ್ಥಾನ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು. ಮೃತರಿಗೆ ಪತ್ನಿ, ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣಮಕ್ಕಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.