ದಕ್ಷಿಣ ಕನ್ನಡ

ಕಲಬೆರಕೆ ಮದ್ಯ ಮಾರಾಟ: ಆರೋಪಿ ಖುಲಾಸೆ

Published On :

ಸುಳ್ಯ: ಕಲಬೆರಕೆ ಮದ್ಯ ಮಾರಾಟ ಆರೋಪಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಬೆಳ್ಳಾರೆಯಲ್ಲಿ ಎಂ. ಮಾಧವ ಗೌಡ ಎಂಬವರ ಮಾಲೀಕತ್ವದ ಕಾವೇರಿ ಬಾರ್‌ನಲ್ಲಿ ನೌಕರ ಸಂತೋಷ್ ರೈ ಎಂಬಾತ ನಿಗದಿತ ಸಮಯಕ್ಕಿಂತ ಮೊದಲೇ ಮದ್ಯ ವ್ಯವಹಾರ ನಡೆಸಿದ್ದಾರೆ ಮತ್ತು ಗ್ರಾಹಕರಿಗೆ ಚಿಲ್ಲರೆಯಾಗಿ ನೀಡುತ್ತಿದ್ದ ಮದ್ಯವನ್ನು ಕಲಬೆರಕೆಯಾಗಿ ಮರಾಟ ಮಾಡಿ ಸನ್ನದ್ನ ಷರತ್ತು ಉಲ್ಲಂಘಿಸಿರುತ್ತಾರೆ ಎಂದು ಆರೋಪಿಸಿ ಅಂದಿನ ಸುಳ್ಯ ಅಬಕಾರಿ ಉಪ ನಿರೀಕ್ಷಕಿ ಗೀತಾ ಸಿ. ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸುಳ್ಯ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಳ್ಯ ನ್ಯಾಯಾಲಯದ ನ್ಯಾಯಧೀಶರಾದ ಸಿ.ಕೆ. ಬಸವರಾಜ್ ಆರೋಪಿತರ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ. ಆರೋಪಿ ಪರವಾಗಿ ಸುಳ್ಯದ ವಕೀಲರಾದ ಎಂ. ವೆಂಕಪ್ಪ ಗೌಡ, ಚಂಪಾ ಎ. ಗೌಡ, ಬಿ.ಜಿ. ರಾಜೇಶ ಮತ್ತು ಚರಣ್‌ರಾಜ್ ಕೆ.ಎಂ. ವಾದಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.