ಅನ್ನಬ್ರಹ್ಮನ ಪೂಜೆ ಸಿದ್ಧತೆಗಾಗಿ...
ಉಡುಪಿಯ ಕೃಷ್ಣನ ಇನ್ನೊಂದು ಹೆಸರು ಅನ್ನಬ್ರಹ್ಮ, ಇಲ್ಲಿನ ಅನಾದಿಕಾಲದಿಂದಲೂ ನಿತ್ಯ ಕೃಷ್ಣಪ್ರಸಾದ ರೂಪದಲ್ಲಿ ಅನ್ನದಾನ ನಡೆಯುತ್ತದೆ. ಕೃಷ್ಣಮಠದಲ್ಲಿ ಕೃಷ್ಣನ ಪೂಜೆಯ ಅಧಿಕಾರ 2 ವರ್ಷಗಳಿಗೊಮ್ಮೆ ಬದಲಾಗುತ್ತದೆ, ಆಗ ಹೊಸದಾಗಿ ಅಧಿಕಾರ ಸ್ವೀಕರಿಸಿದ ಮಠಕ್ಕೆ ಸಾವಿರಾರು ಮಂದಿಗೆ ಅನ್ನದಾನ ಮಾಡುವುದು ದೊಡ್ಡ ಸವಾಲು ಆಗಿರುತ್ತದೆ. ಅದನ್ನು ಸಮರ್ಪಕವಾಗಿ ನಿರ್ವಹಿಸಲು ಪೂರ್ವಭಾವಿಯಾಗಿ 4 ಮುಹೂರ್ತಗಳನ್ನು ನಡೆಸಲಾಗುತ್ತದೆ. ನಿತ್ಯ ಊಟಕ್ಕೆ ಬೇಕಾದ ಬಾಳೆ ಎಲೆಗಳಿಗಾಗಿ ಬಾಳೆಯ ಗಿಡಗಳನ್ನು ನೆಡುವ ಬಾಳೆ ಮುಹೂರ್ತ, ಅನ್ನ ತಯಾರಿಗೆ ಬೇಕಾದ ಅಕ್ಕಿ ಸಂಗ್ರಹಿಸುವ ಅಕ್ಕಿ ಮುಹೂರ್ತ, ಅನ್ನ ಬೇಯಿಸಲು ಬೇಕಾದ ಕಟ್ಟಿಗೆ ಸಂಗ್ರಹದ ಕಟ್ಟಿಗೆ ಮುಹೂರ್ತ, ಮಳೆಗಾಲದಲ್ಲಿ ಬೇಕಾಗುವ ಅಕ್ಕಿಗಾಗಿ ಬತ್ತ ಸಂಗ್ರಹಿಸುವ ಬತ್ತದ ಮುಹೂರ್ತಗಳನ್ನು ನಡೆಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

