ದಕ್ಷಿಣ ಕನ್ನಡ

ಅಡಕೆ ನಿಷೇಧ ವಿರುದ್ಧ ಪ್ರತಿಭಟನೆ

Published On :

ಮಂಗಳೂರು: ಅಡಕೆಯಲ್ಲಿ ಹಾನಿಕಾರಕ ಅಂಶ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ ಕಾರ್ಯಕರ್ತರು ರಾವ್ ಆ್ಯಂಡ್ ರಾವ್ ಸರ್ಕಲ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರೈತ ಸಂಘ ಮುಖಂಡ ಯಾದವ ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾಕ ಅಡಕೆ ನಿಷೇಧಿಸಲು ಹೊರಟಿದೆ. ರಾಜ್ಯ ಸರ್ಕಾರ ಮನೆ ನಿವೇಶನ, ಹಕ್ಕು ಪತ್ರ, ಅಕ್ರಮ, ಸಕ್ರಮ ಸರಿಯಾಗಿ ಮಾಡುತ್ತಿಲ್ಲ. ಸರ್ಕಾರ ದೇಶದ ಬೆನ್ನೆಲುಬನ್ನು ಮುರಿಯಲು ಯತ್ನಿಸುತ್ತಿದೆ. ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ವಾಸುದೇವ ಉಚ್ಚಿಲ್, ನೋಣಯ್ಯ ಗೌಡ ಭಾಗವಹಿಸಿದ್ದರು.
--
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಮಂಗಳೂರು: ಪಾಕ್ ಯುದ್ಧದಲ್ಲಿ ಗೆದ್ದ ನೆನಪಿನ ವಿಜಯ್ ದಿವಸ ಅಂಗವಾಗಿ ಕದ್ರಿ ಹಿಲ್ಸ್ ಬಳಿಯ ಹುತಾತ್ಮ ಗೋಪುರ ಬಳಿ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
 ಜಿಲ್ಲಾ ನಿವೃತ್ತ ಸೈನಿಕರ ಸಂಘ, ಲಯನ್ಸ್ ಕ್ಲಬ್, ಎಡಪದವು ಭೂತನಾಥೇಶ್ವರ ಟ್ರಸ್ಟ್ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು. ಪ್ರಭಾರ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಲಯನ್ಸ್ ಗವರ್ನರ್ ಕೆ.ಸಿ.ಪ್ರಭು, ಭೂತನಾಥೇಶ್ವರ ಟ್ರಸ್ಟ್ ಅಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ, ನಿವೃತ್ತ ಯೋಧರ ಸಂಘ ಅಧ್ಯಕ್ಷಕೆ.ಸಿ. ಭಂಡಾರಿ ಪುಷ್ಪ ಗುಚ್ಚ ಅರ್ಪಿಸಿದರು.
 ಐಜಿಪಿ ಪ್ರತಾಪ್ ರೆಡ್ಡಿ ಮಾತನಾಡಿ, ಸೈನಿಕರ ತ್ಯಾಗ ಬಲಿದಾನದಿಂದ ಇಂದು ದೇಶ ಸಮೃದ್ಧಿಯಾಗಿದೆ. ಸೈನಿಕರು ವೈಯಕ್ತಿಕ ಬದುಕು ಬದಿಗಿರಿಸಿ ದೇಶವಾಸಿಗಳ ಸೇವೆಯಲ್ಲಿ ತೊಡಗಿದ್ದಾರೆ. ಅವರಿಗೆ ನಾವು ಸದಾ ಕೃತಜ್ಞರಾಗಿರಬೇಕು ಎಂದರು.
 ಯಾವುದೇ ಕಾರ್ಯಕ್ರಮಗಳಾಗಲಿ ನಾವು ಚಿತ್ರ ತಾರೆಯರನ್ನು ಆಹ್ವಾನಿಸುತ್ತೇವೆ. ಮಾಜಿ ಯೋಧರನ್ನು ಆಹ್ವಾನಿಸಿ ಗೌರವಿಸುವ ಕಾರ್ಯ ನಡೆಯುತ್ತಿಲ್ಲ. ನಾವು ನೆಮ್ಮದಿಯಿಂದ ಬದುಕಲು ಕಾರಣ ಇದೇ ಸೈನಿಕರು.  ನಿವೃತ್ತ ಸೈನಿಕರು ಸೇರಿ ಕಟ್ಟಡ ನಿರ್ಮಾಣಕ್ಕೆ ಮನ ಮಾಡಿದರೆ ಸರ್ಕಾರ ಕೇವಲ 5 ಸೆಂಟ್ಸ್ ಜಾಗ ಮಂಜೂರು ಮಾಡಿದೆ, ಹಣಕಾಸಿನ ನೆರವು ನೀಡಿಲ್ಲ ಎಂಬ ವಿಚಾರ ಕೇಳುವಾಗ ನೋವಾಗುತ್ತದೆ. ನಿವೃತ್ತ ಯೋಧರು ತಮ್ಮ ಪಿಂಚಣಿ ಹಣದಿಂದ ಕಟ್ಟಡ ಪೂರ್ಣಗೊಳಿಸಲು ಮುಂದಾಗಿದ್ದಾರೆ, ದೇಶಕ್ಕಾಗಿ ಸರ್ವಸ್ವ ಅರ್ಪಿಸಿದ ಸೈನಿಕರಿಗಾಗಿ ನಾವು ನಮ್ಮ ಕೈಲಾದ ಸಹಾಯ ಮಾಡೋಣ ಎಂದು ಹೇಳಿದರು. ಇದೇ ಸಂದರ್ಭ ನಿವೃತ್ತ ಯೋಧರೊಬ್ಬರು 1ಲಕ್ಷ ನೀಡುವುದಾಗಿ ಘೋಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.