ಇಂದು, ನಾಳೆ ರೈತರ ಸಂವಾದ, ವಿಚಾರ ಸಂಕಿರಣ
ಸುಬ್ರಹ್ಮಣ್ಯ: ಕೃಷಿ ವಲಯಕ್ಕೆ ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನಗಳು ಲಗ್ಗೆ ಇಟ್ಟಿದ್ದು ರೈತರಲ್ಲಿ ಇತ್ತೀಚಿನ ತಂತ್ರಜ್ಞಾನದ ಕುರಿತು ಸ್ಪಷ್ಟ ಅರಿವು ಮತ್ತು ಈ ಬಗ್ಗೆ ಜಾಗೃತಿ ಮುಖ್ಯ. ಈ ನಿಟ್ಟಿನಲ್ಲಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ. ಸಂಶೋಧನ ಕೇಂದ್ರವಾದ ನೆಟ್ಟಣ ಸಮೀಪದ ಕಿದುವಿನಲ್ಲಿ ತೆಂಗು, ಅಡಕೆ ಮತ್ತು ಕೊಕ್ಕೋ ಕೃಷಿಯ ನುರಿತ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು 17 ಮತ್ತು 18ರಂದು ಹಮ್ಮಿಕೊಂಡಿದೆ.
ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಸಂಸ್ಥೆ ವಿಟ್ಲ ಇದರ ಮುಖ್ಯಸ್ಥ ಡಾ. ಕೆ.ಎಸ್. ಆನಂದ್, ಈ ಸಂವಾದದಲ್ಲಿ ಹೊಸ ತಂತ್ರಜ್ಞಾನದ ಬಗ್ಗೆ ಅರಿವು. ತೆಂಗು,ಅಡಕೆ ಕೃಷಿಯಿಂದ ಬರುವ ಲಾಭವನ್ನು ಹೆಚ್ಚಿಸುವುದು ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಲಾಗುವುದು ಎಂದು ಹೇಳಿದರು.
ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ.ಜೋರ್ಜ್ ವಿ ಥೋಮಸ್ ನಿರ್ದೇಶಕರು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ ಕಾಸರಗೋಡು, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಪೂಜಾರಿ, ಪುತ್ತೂರು ತಾಪಂ ಅಧ್ಯಕ್ಷೆ ಶಶಿಪ್ರಭಾ, ಗುತ್ತಿಗಾರು ಜಿ.ಪಂ ಸದಸ್ಯ ದೇವರಾಜ್ ಕೆ.ಎಸ್. ಕಡಬ ಜಿಪಂ ಸದಸ್ಯೆ ಕುಮಾರಿ ವಾಸುದೇವನ್, ಎಸ್.ಕೆ.ಡಿ.ಆರ್.ಡಿ.ಪಿ ಕಾರ್ಯಕಾರಿ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಬಿಳಿನೆಲೆ, ಗ್ರಾಪಂ ಅಧ್ಯಕ್ಷೆ ಶಾರದಾ, ತಾಪಂ ಸದಸ್ಯೆ ಸರೋಜಿನಿ ಜಯಪ್ರಕಾಶ್ ಉಪಸ್ಥಿತರಿರುವರು.
ಕೊಕ್ಕೋ ವಿಚಾರ ಸಂಕಿರಣ: ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ, ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿ ಇದರ ಪ್ರಾಯೋಜಕತ್ವದಲ್ಲಿ ಕೊಕ್ಕೋ ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆ ಕುರಿತು ಡಿ.18ರಂದು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಮಾಜಿ ಸಿಎಂ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಕೃಷ್ಣಪ್ರಸಾದ್ ಮಡ್ತಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಕೆ.ಎಸ್. ಆನಂದ್ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ವೆಂಕಟೇಶ್ ಎನ್. ಹುಬ್ಬಳ್ಳಿ, ಎಚ್.ಎಂ. ಕೃಷ್ಣಕುಮಾರ್ ಭಾಗವಹಿಸಲಿದ್ದಾರೆ. ಡಾ. ಪಿ.ಎಲ್. ಸರೋಜ್, ಡಾ.ಎಚ್.ಪಿ. ಮಹೇಶ್ವರಪ್ಪ, ಡಾ. ಕೆ. ಮುರಳೀಧರನ್, ಡಾ. ಎನ್. ಯದುಕುಮಾರ್ ಉಪಸ್ಥಿತರಿರುವರು ಎಂದು ಅವರು ಹೇಳಿದರು.
ಡಾ.ಸಿ. ತಂಬನ್, ಡಾ.ಎಂ. ಅಲಗಾರ್, ಶ್ಯಾಮ್ ಪ್ರಸಾದ್ ಕಾಸರಗೋಡು ಹಾಗೂ ನಾಗೇಶ್ ಕೈಕಂಬ, ಡಾ. ನಾಗರಾಜ್, ವಿಜ್ಞಾನಿ ಡಾ. ಜಗನ್ನಾಥನ್, ಗೋಪಾಲ ಕೃಷ್ಣ ಕಿದು ಕೇಂದ್ರ ಹಾಗೂ ಮೋಹನ ಸೋನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

