ದಕ್ಷಿಣ ಕನ್ನಡ

ಗುಲಾಮನ ಸ್ಥಿತಿಯಲ್ಲಿ ಕನ್ನಡ: ಜೋಗಿ

Published On :

ವಿದ್ಯಾಗಿರಿ, ಮೂಡುಬಿದಿರೆ:  ಇಂದು ಅಮ್ಮಾ, ತಾಯೇ ಎಂದು ಬಾಯಿ ತುಂಬಾ ಕನ್ನಡ ನುಡಿಯುವುದು ಭಿಕ್ಷುಕ ಮಾತ್ರ. ಆಂಗ್ಲ ಭಾಷೆಯು ಗುಮಾಸ್ತಗಿರಿಯ ಭಾಷೆಯಾಗಿದ್ದು, ಈಗ ಕನ್ನಡ ಭಾಷೆ ಗುಲಾಮನಾಗುತ್ತಿದೆ ಎಂಬ ಆತಂಕ ವ್ಯಕ್ತಪಡಸಿದವರು ಸಾಹಿತಿ ಜೋಗಿ.
 ವಿದ್ಯಾರ್ಥಿ ಚಿಂತನ ಕಾರ್ಯಕ್ರಮದಲ್ಲಿ 'ಕನ್ನಡ- ಇಂಗ್ಲಿಷ್ ಮುಖಾಮುಖಿ' ವಿಚಾರಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಅವರು ಮಾತನಾಡಿದರು. ಕನ್ನಡ, ಆಂಗ್ಲ ಭಾಷೆ ಸಮನ್ವಯ ಮಾಡುವುದು ಮುಳುಗುತ್ತಿರುವ ಟೈಟಾನಿಕ್ನಲ್ಲಿ ತನಗೊಂದು ವಿಂಡೋ ಸೀಟ್ ಕೊಡಿ ಎಂದ ಹಾಗೆ ಎಂದರು. ಈ ಜಗತ್ತಿನಲ್ಲಿ ಒಂದು ಭಾಷೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಸಂಘಟನೆ ಕಟ್ಟಿಕೊಂಡು ಹೋರಾಡುತ್ತಿದೆ ಎಂದರೆ ಅದು ಕನ್ನಡ ಭಾಷೆ. ಇಂದು ನಾವು ಕ್ರಿಯಾಶೀಲವಾಗಿ ಸಾಹಿತ್ಯ ಕೃಷಿ ಮಾಡಬೇಕಾದರೆ ಸಾಧ್ಯವಾಗುವುದು ಮಾತೃ ಭಾಷೆಯಲ್ಲಿ ಮಾತ್ರ ಎಂದು ಅಭಿಪ್ರಾಯಪಟ್ಟರು.
ಪದ್ಮಾ ಭಟ್ ಉಜಿರೆ ಮಾತನಾಡಿ, ಕನ್ನಡ ರಾಜ್ಯೋತ್ಸವ ರಜೆ ಪಡೆಯುವಲ್ಲಿ ಎಲ್ಲರೂ ಫಲಾನುಭವಿಗಳು. ಆದರೆ, ತಾನೆಷ್ಟು ಕನ್ನಡಕ್ಕೆ ಕೊಡುಗೆ ನೀಡಿದ್ದೇನೆ ಎಂದು ಯಾರೂ ಯೋಚಿಸುವುದಿಲ್ಲ. ಇಂಗ್ಲಿಷ್ ಎಂದರೆ ಉದ್ಯೋಗದ ಮಾತು ಹಾಸುಹೊಕ್ಕಾಗಿರುವುದು ದುರಂತ ಎಂದರು.
 ರಿಹಾಬ್ ಶಾಹಿನ್ ಬೇಗಂ ಮಾತನಾಡಿ, ನಮಗೆ ಕನ್ನಡ ಭಾಷೆಯೂ ಬೇಕು, ಆಂಗ್ಲ ಭಾಷೆಯೂ ಬೇಕು. ಆದರೆ, ಎರಡು ಭಾಷೆ ಮಿಶ್ರಣ ಬೇಡ.ಇಂದು ಕನ್ನಡ ಚಿತ್ರಗೀತೆಗಳು ಕಂಗ್ಲಿಷ್ಮಯವಾಗಿದೆ ಎಂದು ವಿಷಾದಿಸಿದರು.
-ದೀಕ್ಷಾ ಹೆಗ್ಡೆ ಎಚ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.