ಅಪಘಾತ: ಯುವಕ ಸಾವು
ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಸನಿಹದ ಕಾಶಿಬೆಟ್ಟು ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಮೂಲತಃ ಶೃಂಗೇರಿ- ಕೊಪ್ಪದ ಪ್ರಸ್ತುತ ಉಜಿರೆ ಅತ್ತಾಜೆ ಎಂಬಲ್ಲಿನ ರೂಪಿನ್ ಪಿರೇರಾ (22) ಮೃತರು. ಇವರು ಬೈಕ್ನಲ್ಲಿ ಬೆಳ್ತಂಗಡಿಯಿಂದ ಉಜಿರೆ ಕಡೆಗೆ ಹೋಗುತ್ತಿದ್ದಾಗ ಉಜಿರೆ ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಟೆಂಪೋದ ಚಕ್ರಕ್ಕೆ ಸಿಲುಕಿ ಮಾರು ದೂರ ಎಳೆಯಲ್ಪಟ್ಟರು. ತಲೆಗೆ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭ ಕೊನೆಯುಸಿರೆಳೆದರು. ಸಹ ಸವಾರರಾಗಿದ್ದ ಸಫಾನ್ ಮತ್ತು ರಿಚರ್ಡ್ ಹೇಡ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕ್ರಿಸ್ಮಸ್ಗೆಂದು ಮಡಂತ್ಯಾರುವಿನಲ್ಲಿ ಬಟ್ಟೆ ಖರೀದಿಸಿ ವಾಪಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರೂಪಿನ್ ಬೆಳ್ತಂಗಡಿಯ ಹಣಕಾಸು ಸಂಸ್ಥೆಯಲ್ಲಿ ಪ್ರಬಂಧಕರಾಗಿದ್ದರು. ರೂಪಿನ್ರ ತಂದೆ ತಾಯಿ ವಿದೇಶದಲ್ಲಿದ್ದು ಉಜಿರೆ ಅತ್ತಾಜೆಯಲ್ಲಿರುವ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದರು.
ಅಪಘಾತ ನಡೆದ ಸ್ಥಳ ವಾಹನ ದಟ್ಟಣೆಯಿಂದ ಕೂಡಿದ್ದರೂ, ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಯಾವ ವಾಹನದವರು ಮುಂದೆ ಬರಲಿಲ್ಲ. ಎಲ್ಲರೂ ಆ್ಯಂಬುಲೆನ್ಸ್ಗೆ ಕರೆ ಮಾಡುತ್ತಿದ್ದರು. ಬೆಳ್ತಂಗಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಎರಡೂ ಆ್ಯಂಬುಲೆನ್ಸ್ಗಳು ಬೇರೆ ಸೇವೆಯಲ್ಲಿದ್ದವು. ಇದರಿಂದಾಗಿ ಸ್ಥಳಕ್ಕೆ ಬೇರೆ ಆ್ಯಂಬುಲೆನ್ಸ್ ಬಂದಾಗ ಸಮಯ ಮೀರಿತ್ತು. ಆ್ಯಂಬುಲೆನ್ಸ್ ಬಂದಾಗ ಘಟನಾ ಸ್ಥಳದಲ್ಲಿದ್ದ ಧರ್ಮಸ್ಥಳದ ಮಹಿಳಾ ಆರೋಗ್ಯ ನಿವೃತ್ತ ಸಹಾಯಕಿಯೊಬ್ಬರು ಜೀವನ್ಮರಣದ ಸ್ಥಿತಿಯಲ್ಲಿದ್ದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

