ಹಫ್ತಾ ವಸೂಲಿಗಾಗಿ ಶೂಟೌಟ್, ಮೋದಿ ಬ್ಯಾನರ್ ಹರಿದಿದ್ದರು
ಮಂಗಳೂರು: ವೈದ್ಯಕೀಯ ವಿದ್ಯಾರ್ಥಿನಿಯನ್ನು ಗೆಳೆಯನಿಂದಲೇ ಬಲವಂತವಾಗಿ ಅತ್ಯಾಚಾರ ನಡೆಸಿ ಚಿತ್ರೀಕರಿಸಿದ ವಿಕೃತ ಪಾತಕಿಗಳ ವಿರುದ್ಧ ಶೂಟೌಟ್, ನರೇಂದ್ರ ಮೋದಿ ಬ್ಯಾನರ್ ಹರಿದದ್ದು ಸಹಿತ 20ಕ್ಕೂ ಹೆಚ್ಚು ಪ್ರಕರಣಗಳಿವೆ.
ಆರೋಪಿ ಸಫ್ವಾನ್, ಮುಕ್ಕ ನಿವಾಸಿ ಸಂಶುದ್ದೀನ್, ಸಮೀರ್ ಆತ್ಮೀಯ ಗೆಳೆಯರಾಗಿದ್ದು, ಕೊಲೆ, ದರೋಡೆ, ಬ್ಲ್ಯಾಕ್ಮೇಲ್ ಒಟ್ಟಾಗಿಯೇ ಮಾಡುತ್ತಿದ್ದರು. ಸಫ್ವಾನ್ ವಿರುದ್ಧ ಪಡುಬಿದ್ರಿ, ಮೂಡುಬಿದರೆ, ಮಂಗಳೂರು, ಕೊಣಾಜೆ, ಉಡುಪಿ ಠಾಣೆಗಳಲ್ಲಿ ಕೊಲೆ, ಲೂಟಿ, ದರೋಡೆ ಸಹಿತ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಹಳೆಯಂಗಡಿ ಉದ್ಯಮಿ ಶಾಂತಾರಾಮ ಶೆಟ್ಟಿ ಕಾರು ಚಾಲಕ ಪ್ರವೀಣ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, 4 ವರ್ಷ ನ್ಯಾಯಾಂಗ ಬಂಧನದಲ್ಲಿದ್ದ. ಕಳೆದ ವರ್ಷವಷ್ಟೇ ಬಿಡುಗಡೆಯಾಗಿದ್ದ.
ಸಂಶುದ್ದೀನ್ ವಿರುದ್ಧ 10 ಪ್ರಕರಣ, ಸಮೀರ್ ವಿರುದ್ಧ ಮೂರು ಪ್ರಕರಣಗಳಿವೆ. ನವಾಜ್ ವಿರುದ್ಧ ಎರಡು ವರ್ಷಗಳ ಹಿಂದೆ ಕದ್ರಿಯಲ್ಲಿ ಬಿಲ್ಡರ್ ಮೇಲೆ ಗುಂಡು ಹಾರಿಸಿದ ಪ್ರಕರಣವಿದ್ದು, ಕೊಣಾಜೆ ಠಾಣೆಯಲ್ಲಿಯೇ ನಾಲ್ಕು ಪ್ರಕರಣಗಳಿವೆ. ಮುಡಿಪಲ್ಲಿ ನರೇಂದ್ರ ಮೋದಿ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ಹರಿದು, ಲಾರಿ ಚಾಲಕನಿಗೆ ಹಲ್ಲೆ ನಡೆಸಿ ರಾದ್ಧಾಂತ ಮಾಡಿದ್ದ.
ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ: ವೈದ್ಯಕೀಯ ವಿದ್ಯಾರ್ಥಿನಿಯನ್ನು ಅಪಹರಿಸಿ ಗೆಳೆಯನಿಂದಲೇ ಬಲವಂತವಾಗಿ ಅತ್ಯಾಚಾರ ನಡೆಸಿದ ಆರೋಪಿಗಳ ವೈದ್ಯಕೀಯ ಪರೀಕ್ಷೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ. ಆರೋಪಿಗಳ ಮುಖದ ಮೇಲಿನ ಮಾಸ್ಕ್ ಇನ್ನೂ ತೆರೆದಿಲ್ಲ. ಏಕೆಂದರೆ ಸಂತ್ರಸ್ತೆ ವೈದ್ಯಕೀಯ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಇಬ್ಬರು ತಮ್ಮ ತಮ್ಮ ಊರಿಗೆ ತೆರಳಿದ್ದಾರೆ. ಹೀಗಾಗಿ ಆರೋಪಿಗಳ ಗುರುತು ಪತ್ತೆ ಪರೇಡ್ ಆದ ಬಳಿಕವೇ ಅವರ ಮಾಸ್ಕ್ ತೆಗೆಯಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

