ಭಾಷಾ ಶಿಕ್ಷಕ ಹುದ್ದೆಗೆ ತರಾತುರಿ ಕೌನ್ಸೆಲಿಂಗ್!
ಬಂಟ್ವಾಳ: 2013ನೇ ಸಾಲಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕ ಗ್ರೇಡ್-2 ಹುದ್ದೆಗೆ ಅಕ್ರಮವಾಗಿ ಬಡ್ತಿ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ತರಾತುರಿಯಲ್ಲಿ ಕೌನ್ಸೆಲಿಂಗ್ ನಡೆಸಿದೆ.
ಕನ್ನಡ ಭಾಷಾ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಕರ್ನಾಟಕ ರಾಜ್ಯ ಪತ್ರದಲ್ಲಿ ಇರುವ ನಿಯಮಗಳನ್ನು ಉಲ್ಲಂಘಿಸಿ ಅರ್ಹತೆ ಇಲ್ಲದವರ ಹೆಸರನ್ನು ಅಂತಿಮ ಜ್ಯೇಷ್ಠತಾ ಪಟ್ಟಿಯಲ್ಲಿ ನಮೂದಿಸಿರುವುದಾಗಿ ನೊಂದ ಶಿಕ್ಷಕರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು.
ಆಕ್ಷೇಪಣೆಗೂ ಅವಕಾಶ ನೀಡದೆ ತರಾತುರಿಯಲ್ಲಿ ಕೌನ್ಸೆಲಿಂಗ್ಗೆ ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ನ್ಯಾಯ ಕೊಡಿಸುವಂತೆ ನೊಂದ ಶಿಕ್ಷಕರು ಕಳೆದ ಬುಧವಾರ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಕಾರಿ ತುಳಸಿ ಮದ್ದಿನೇನಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಮಗಾಗಿರುವ ಅನ್ಯಾಯವನ್ನು ಅವರಲ್ಲಿ ತೋಡಿಕೊಂಡಿದ್ದರು.
ಗುರುವಾರ ಬೆಳಗ್ಗೆ (ಕೌನ್ಸೆಲಿಂಗ್ ದಿನ) ತನ್ನ ಕಚೇರಿಗೆ ಬಂದು ಭೇಟಿ ಮಾಡಿ, ಸಮಸ್ಯೆ ಪರಿಹರಿಸುವುದಾಗಿ ನೊಂದ ಶಿಕ್ಷಕರಿಗೆ ಸಿ.ಎಸ್. ಭರವಸೆಯನ್ನೂ ನೀಡಿದ್ದರು. ಆದರೆ ಗುರುವಾರ ಅವರನ್ನು ಭೇಟಿಯಾಗಲು ತೆರಳಿದ ವೇಳೆ ಅವರು ಕಚೇರಿಗೆ ಬಂದಿರಲಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಮೊಬೈಲ್ ಸ್ವಿಚ್ಟ್ ಆಪ್ ಆಗಿತ್ತು ಎಂದು ಅನ್ಯಾಯಕ್ಕೊಳಗಾಗಿರುವ ಶಿಕ್ಷಕರು ದೂರಿದ್ದಾರೆ.
ಇದೀಗ ಅರ್ಹತೆ ಇಲ್ಲದ ಮೂವರು ಶಿಕ್ಷಕರಿಗೆ ನೇರ ಕೌನ್ಸೆಲಿಂಗ್ ಮಾಡಲಾಗಿದೆ. ಅರ್ಹತೆ ಇರುವ ಮೂವರು ಶಿಕ್ಷಕರು ಅನ್ಯಾಯದಿಂದ ಅಸಮಾಧಾನಗೊಂಡಿದ್ದು ನ್ಯಾಯಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಇಲ್ಲಿ ಮಾತ್ರ ಯಾಕೆ ಈಗ...?
ರಾಜ್ಯಾದ್ಯಂತ ಏಕಕಾಲದಲ್ಲಿ ಕೌನ್ಸೆಲಿಂಗ್ ನಡೆಸುವಂತೆ ಶಿಕ್ಷಣ ಇಲಾಖೆಯ ಸುತ್ತೋಲೆ ಇದ್ದು, ಉಳಿದ ಜಿಲ್ಲೆಗಳಲ್ಲಿ ಕಳೆದ ಮಾರ್ಚ್ನಲ್ಲೇ ಈ ಪ್ರಕ್ರಿಯೆಗಳು ನಡೆದಿವೆ. ಆದರೆ ದ.ಕ.ಜಿಲ್ಲೆಯಲ್ಲಿ ಮಾತ್ರ ಡಿ.23ರ ತಾರೀಕಿಗೆ ಅಂತಿಮ ಜ್ಯೇಷ್ಠತಾ ಪಟ್ಟಿ ತಯಾರಿಸಿ 24, 25 ಸರ್ಕಾರಿ ರಜಾ ಕಳೆದು ಡಿ.26ರ ಪೂರ್ವಾಹ್ನವೇ ಕೌನ್ಸೆಲಿಂಗ್ ಮುಗಿಸಲಾಗಿದೆ. ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರಲ್ಲಿ ವಿವರ ಕೇಳಿದರೆ, ಡಿ.30ರೊಳಗಾಗಿ ಮುಗಿಸಬೇಕಲ್ವಾ...? ಎಂಬ ಉತ್ತರ ಬಂದಿದೆ. ಬುಧವಾರದ ಪತ್ರಿಕೆಯಲ್ಲಿ ಈ 'ಅಕ್ರಮ ಬಡ್ತಿ'ಯ ವರದಿ ಪ್ರಕಟವಾಗುತ್ತಲೇ, ವಿವಿಧ ಭಾಷಾ ಶಿಕ್ಷಕರು ದೂರವಾಣಿ ಕರೆ ಮಾಡಿ ತಮ್ಮ ಸಮಸ್ಯೆಗಳ ಬಗ್ಗೆ ಅಲವತ್ತುಕೊಂಡಿದ್ದಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದರೆ ನೊಂದವರಿಗೆ ನ್ಯಾಯ ದೊರಕೀತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

