ಜಿಲ್ಲಾ ಮಟ್ಟದ ಕಬಡ್ಡಿ; ಆಳ್ವಾಸ್ ಪ್ರಥಮ
ಸುಬ್ರಹ್ಮಣ್ಯ: ಕಬಡ್ಡಿ ನಮ್ಮ ಮಣ್ಣಿನ ಕ್ರೀಡೆ. ಇಂದು ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮ್ಮ ಹಳ್ಳಿಯ ಕೀರ್ತಿ. ಕ್ರೀಡಾ ಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಮಂಗಳೂರು ವಿವಿ ಮಟ್ಟದ ಮಾಜಿ ಕಬಡ್ಡಿ ಆಟಗಾರ, ಪತ್ರಕರ್ತ ಎನ್. ಮಂಜುನಾಥ ರಾವ್ ಸುಬ್ರಹ್ಮಣ್ಯ ಹೇಳಿದರು.
ಅವರು ಪಂಜದ ಪಾಂಡಿಗದ್ದೆ ಕಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಶನಿವಾರ ಸಂಜೆ ಜರುಗಿದ ಜಿಲ್ಲಾ ಮಟ್ಟದ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪಂದ್ಯಾವಳಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜೆ.ಸಿ. ರವಿ ಕಕ್ಕೆಪದವು ಚಾಲನೆ ನೀಡಿದರು. ಯುವ ಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ ಮೇಲ್ಮನೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಅಖಿಲ ಭಾರತ ಅಯ್ಯಪ್ಪ ಸ್ವಾಮಿ ಸಮಿತಿ ಸುಬ್ರಹ್ಮಣ್ಯ ಇದರ ಅಧ್ಯಕ್ಷ ಉಮೇಶ್ ಕೆ.ಎನ್ ಹಾಗೂ ಯುವ ಶಕ್ತಿ ಗೆಳೆಯರ ಬಳಗದ ಕಾರ್ಯದರ್ಶಿ ವಾಚ್ಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಲಿತಾಂಶ: ಪಂದ್ಯಾಟವು ಕೋಟಿ ಮತ್ತು ಚೆನ್ನಯ ಹೆಸರಿನ ಎರಡು ಅಂಕಣದಲ್ಲಿ ನಡೆಯಿತು. ದಕ್ಷಿಣ ಜಿಲ್ಲೆಯ ಒಟ್ಟು 33 ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ಮೂಡುಬಿದಿರೆ ತಂಡ(ಪ್ರಥಮ), ನವ ಯುಗ ಕುಕ್ಕಜೆ (ದ್ವಿತೀಯ), ಯುವ ಶಕ್ತಿ ಗೆಳೆಯರ ಬಳಗ ಎ (ತೃತೀಯ), ಕೆಎಫ್ಡಿಸಿ ಸುಳ್ಯ (ಚತುರ್ಥ) ಸ್ಥಾನಗಳಿಸಿತು. ಸರ್ವಾಂಗೀಣ ಆಟಗಾರನಾಗಿ ಆಳ್ವಾಸ್ ಮೂಡುಬಿದಿರೆ ತಂಡದ ಜಸ್ವಂತ್ ಸಂಪ್ಯಾಡಿ, ಉತ್ತಮ ದಾಳಿಗಾರನಾಗಿ ನವ ಯುಗ ಕುಕ್ಕಜೆ ತಂಡದ ನೌಷದ್, ಉತ್ತಮ ಹಿಡಿತಗಾರನಾಗಿ ಕೆಎಫ್ಡಿಸಿ ಸುಳ್ಯ ತಂಡ ಪ್ರಶಾಂತ್ ವೈಯಕ್ತಿಕ ಬಹುಮಾನ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

