ದಕ್ಷಿಣ ಕನ್ನಡ

ವೃದ್ಧ ನಾಪತ್ತೆ

Published On :

ಮಂಗಳೂರು: ನಗರದ ಸಿಟಿ ಪ್ರೆಸ್ ನಿವಾಸಿ ರಾಮಚಂದ್ರ ಶೆಣೈ(60)ನ.2ರಿಂದ ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಮಾಯಾದರ್ಶಿನಿ ಎಂಬ ಹೊಟೇಲ್‌ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಇವರು ನಿತ್ಯ ಮನೆಗೆ ಪಾನಮತ್ತರಾಗಿ ಬರುತ್ತಿದ್ದರು. ಈ ಬಗ್ಗೆ ಸಾಕಷ್ಟು ಬುದ್ಧಿಹೇಳಿದರೂ ಪ್ರಯೋಜನವಾಗಲಿಲ್ಲ. ಪಾನಮತ್ತನಾಗಿ ಮನೆಗೆ ಬರುವುದಕ್ಕೆ ಆಕ್ಷೇಪಿಸಿದ ಬಳಿಕ ಅವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕವಿತಾ ಶೆಣೈ ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ.
ಹೈದಂಗೂರು ಪರಿಸರದಲ್ಲಿ ಹುಲಿ, ಚಿರತೆ
ಸುಳ್ಯ: ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ಮತ್ತು ಹೈದಂಗೂರು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಹುಲಿ ಮತ್ತು ಚಿರತೆ ಕಾಣಸಿಕ್ಕಿದ್ದು ಊರವರಲ್ಲಿ ಆತಂಕಕ್ಕೆ ಎಡೆಮಾಡಿದೆ.   ಕೊಡಪಾಲ ಸುಬ್ರಹ್ಮಣ್ಯ ಪ್ರಸಾದ್ ಎಂಬವರು ತಮ್ಮ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮನೆಯ ಸಮೀಪ ರಸ್ತೆಯಲ್ಲಿ 12 ಮೀಟರ್ ಅಂತರದಲ್ಲಿ ಹುಲಿ ರಸ್ತೆಗೆ ನೆಗೆದು ಕಾಡಿನ ಕಡೆಗೆ ಹೋಗುವುದು ಕಂಡು ಬಂತು. ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪ್ರಾಣಿಯ ಹೆಜ್ಜೆ ಗುರುತಿನ ಪರಿಶೀಲನೆ ನಡೆಸಿದರು.  ಸುಳ್ಯದಿಂದ ಮರ್ಕಂಜಕ್ಕೆ ಹೋಗುತ್ತಿದ್ದ ಸರ್ವಿಸ್ ವ್ಯಾನ್‌ನಲ್ಲಿ ಇದ್ದವರಿಗೂ ಹುಲಿ ರಸ್ತೆ ದಾಟಿ ಹೈದಂಗೂರು ಕಡೆ ಹೋಗುವುದು ಕಂಡು ಬಂದಿದೆ. ಅವರು ಹೈದಂಗೂರು ಪರಿಸರದವರಿಗೆ ಫೋನ್ ಮಾಡಿ ತಿಳಿಸಿದರು. ರಾತ್ರಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪಟಾಕಿ ಸಿಡಿಸಿದರು. ಮರ್ಕಂಜ ಗ್ರಾಮದ ಹೈದಂಗೂರಿನ ಬೋಜಪ್ಪ ಗೌಡ ಎಂಬವರ ನಾಯಿ ರಾತ್ರಿ ಜೋರಾಗಿ ಬೊಗಳುತ್ತಿದ್ದು, ಸ್ವಲ್ಪ ಹೊತ್ತಿನ ಬಳಿಕ ನಾಯಿಯ ಕೂಗು ಕೇಳದಿದ್ದಾಗ ಮನೆಯವರು ಹೊರಗಡೆ ಬಂದು ನೋಡಿದರೆ ನಾಯಿ ನಾಪತ್ತೆಯಾಗಿದ್ದು, ಹುಲಿ ಅದನ್ನು ಕೊಂಡುಹೋಗಿರಬಹುದು ಎಂದು ಹೇಳಲಾಗುತ್ತಿದೆ.
ದಾಸರಬೈಲಿನಲ್ಲಿ ಚಿರತೆ: ಮೈರಾಜೆ ರಾಮಚಂದ್ರ ಭಟ್ ಎಂಬವರು ಜೀಪ್‌ನಲ್ಲಿ ಬರುತ್ತಿದ್ದಾಗ ದಾಸರಬೈಲು ಶಾಲಾ ಬಳಿ ಕಾಡಿನಲ್ಲಿ ಚಿರತೆ ಇದ್ದುದನ್ನು ಕಂಡಿದ್ದಾರೆ. ಮರ್ಕಂಜ ಗ್ರಾಮದ ದಾಸರಬೈಲು ಬಳಿ ಹಗಲಿನಲ್ಲಿ ಚಿರತೆಯನ್ನು ಕಂಡಿದ್ದ ಕಾರಣ ಮತ್ತು ಕೊಡಪಾಲದಲ್ಲಿ ರಾತ್ರಿ ಹುಲಿಯು ಕಾಣಸಿಕ್ಕಿದೆ. ಹೈದಂಗೂರಿನಲ್ಲಿ ನಾಯಿಯನ್ನು ಕೊಂಡು ಹೋಗಿರುವುದು ಹುಲಿಯಂತೆ ಕಂಡಿರುವ ಚಿರತೆ ಆಗಿರಬಹುದೇ ಎಂದು ಜನರಾಡಿಕೊಳ್ಳುತ್ತಿದ್ದಂತೆ ಮತ್ತೆ ಹುಲಿ ಪ್ರತ್ಯಕ್ಷವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.