ಆಟೋ ಚಾಲಕಗೆ ಹಲ್ಲೆ ಯತ್ನ; ಮೂಲ್ಕಿ ಬಂದ್
ಮೂಲ್ಕಿ: ರಸ್ತೆ ದುರಸ್ತಿಗೆ ಸಂಬಂಧಿಸಿ ಸೋಮವಾರ ಮೂಲ್ಕಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮನವಿ ಸ್ವೀಕರಿಸಲು ಆಗಮಿಸಿದ ಸಚಿವ ಅಭಯಚಂದ್ರ ಜೈನ್ ಅವರು ಮೂಲ್ಕಿಯ ರಿಕ್ಷಾ ಚಾಲಕ ಪ್ರಶಾಂತ್ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ- ಮಾಲೀಕರ ಸಂಘ ಮಂಗಳವಾರ ಮೂಲ್ಕಿ ಹೋಬಳಿ ಬಂದ್ ಆಚರಿಸಿತು.
ಹೋಬಳಿಯ ನಗರ ಪಂಚಾಯಿತಿ ವ್ಯಾಪ್ತಿಯ ಕಾರ್ನಾಡು, ಕೊಲ್ನಾಡು, ಮೂಲ್ಕಿ, ಬಳ್ಕುಂಜೆ ಪಂಚಾಯಿತಿ, ಕಿನ್ನಿಗೋಳಿ, ಕೆಮ್ರಾಲ್, ಕಿಲ್ಪಾಡಿ, ಐಕಳ, ಮೆನ್ನಬೆಟ್ಟು, ಹಳೆಯಂಗಡಿ, ಪಡಪಣಂಬೂರು ಪಂಚಾಯಿತಿ ವ್ಯಾಪ್ತಿಯಲ್ಲಿ ರಿಕ್ಷಾ ಚಾಲಕರು ಮಂಗಳವಾರ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ರಿಕ್ಷಾವನ್ನು ರಸ್ತೆಗೆ ಇಳಿಸದೆ ಬಂದ್ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಸಚಿವ ಅಭಯಚಂದ್ರ ಜೈನ್ ಅವರು ಘಟನೆ ಕುರಿತು ಕ್ಷಮೆ ಯಾಚಿಸಿದಲ್ಲಿ ಪ್ರಕರಣವನ್ನು ಅಂತ್ಯಗೊಳಿಸಲಾಗುವುದು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ರಿಕ್ಷಾ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಬಿಪಿನ್ ಪ್ರಸಾದ್ ತಿಳಿಸಿದ್ದಾರೆ.
ರಿಕ್ಷಾ ಚಾಲಕರ ಪ್ರತಿಭಟನೆ: ರಿಕ್ಷಾ ಚಾಲಕನ ಮೇಲೆ ಸಚಿವರು ಹಲ್ಲೆಗೆ ಯತ್ನಿಸಿದ್ದಾಗಿ ಆರೋಪಿಸಿ ಮಂಗಳವಾರ ರಿಕ್ಷಾ ಚಾಲಕ-ಮಾಲೀಕರ ಸಂಘದಿಂದ ಮೂಲ್ಕಿಯಲ್ಲಿ ಪ್ರತಿಭಟನೆ ನಡೆಯಿತು.
ಮೂಲ್ಕಿ ವಿಜಯ ಬ್ಯಾಂಕ್ ಬಳಿ ಮೂಲ್ಕಿ ನಾಗರಿಕ ಸಮಿತಿ ನೇತೃತ್ವದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಸೋಮವಾರ ವಿವಿಧ ಸಂಘಸಂಸ್ಥೆಗಳು ಸೇರಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಸಚಿವ ಅಭಯಚಂದ್ರ ಜೈನ್ ಮೂಲ್ಕಿ ರಿಕ್ಷಾ ಚಾಲಕ ಪ್ರಶಾಂತ್ ಮೇಲೆ ಹಲ್ಲೆಗೆ ಯತ್ನಿಸಿದ್ದಾಗಿ ಆರೋಪಿಸಲಾಗಿದೆ. ಇದನ್ನು ಖಂಡಿಸಿ ರಿಕ್ಷಾ ಚಾಲಕ, ಮಾಲೀಕರ ಸಂಘಧ ಕರೆಯಂತೆ ಮೂಲ್ಕಿ ಹೋಬಳಿಯ ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಕಾರ್ನಾಡು, ಕೊಲ್ನಾಡು, ಮೂಲ್ಕಿ, ಬಳ್ಕುಂಜೆ ಪಂಚಾಯಿತಿ, ಕಿನ್ನಿಗೋಳಿ, ಕೆಮ್ರಾಲ್, ಕಿಲ್ಪಾಡಿ, ಐಕಳ, ಮೆನ್ನಬೆಟ್ಟು, ಹಳೆಯಂಗಡಿ, ಪಡಪಣಂಬೂರು ಪಂಚಾಯಿತಿ ವ್ಯಾಪ್ತಿಯಲ್ಲಿ ರಿಕ್ಷಾ ಚಾಲಕರು ಮಂಗಳವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ರಿಕ್ಷಾ ರಸ್ತೆಗೆ ಇಳಿಸದೆ ಪ್ರತಿಭಟಿಸಿದರು.
ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚವ ಹಾಗೂ ಶಾಸಕ ಕೆ. ಅಭಯಚಂದ್ರ ಜೈನ್ ಅವರು ಸೋಮವಾರ ನಡೆದ ಘಟನೆಗೆ ಸಂಬಂಧಪಟ್ಟಂತೆ ಕ್ಷಮೆ ಯಾಚಿಸಿದಲ್ಲಿ ಪ್ರಕರಣ ಅಂತ್ಯಗೊಳಿಸಲಾಗುವುದು.
ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮೂಲ್ಕಿ ರಿಕ್ಷಾ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಬಿಪಿನ್ ಪ್ರಸಾದ್ ತಿಳಿಸಿದರು.
ರಿಕ್ಷಾ ಚಾಲಕರ ಪಟ್ಟಿ ಹಿಡಿದಿಲ್ಲ: ಸಚಿವ ಸ್ಪಷ್ಟನೆ
ಮಂಗಳೂರು: ತನಗೆ, ಪಕ್ಷ ಹಾಗೂ ಮುಖ್ಯಮಂತ್ರಿಗೆ ಧಿಕ್ಕಾರ ಕೂಗಿದಾಗ ಕೋಪಗೊಂಡಿದ್ದು ನಿಜ. ತನ್ನ ಮಾನಹಾನಿ ಮಾಡಿದಾಗ ಗದರಿದ್ದೆ. ಆದರೆ ರಿಕ್ಷಾ ಚಾಲಕರ ಕೊರಳಪಟ್ಟಿ ಹಿಡಿದಿಲ್ಲ, ಹೊಡೆಯಲೂ ಇಲ್ಲ ಎಂದು ಸಚಿವ ಅಭಯಚಂದ್ರ ಜೈನ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎರಡೂ ಕಡೆಯ ಕಾರ್ಯಕರ್ತರ ನಡುವೆ ಅವಾಚ್ಯ ಶಬ್ದಗಳಿಂದ ಮಾತಿನ ಚಕಮಿಕಿ ನಡೆದಿತ್ತು. ಎಲ್ಲಿಯೂ ತಾನು ಉದ್ಧಟತನದಿಂದ ವರ್ತಿಸಿಲ್ಲ. ಆದರೆ ಹೇಳಿದ್ದನ್ನು ಕೇಳಿಕೊಂಡು ಹೋಗುವ ಜಾಯಮಾನ ತನ್ನದಲ್ಲ ಎಂದು ಸಚಿವ ಅಭಯಚಂದ್ರ ಜೈನ್ ಮೂಲ್ಕಿಯಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಸೋಮವಾರ ನಡೆದ ಪ್ರತಿಭಟನೆ ವೇಳೆ ನಡೆದ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

