ನೆಹರು ಮೈದಾನದಲ್ಲಿ ಮಲಗಿದಾತ ಕೊಲೆ
ಮಂಗಳೂರು: ಬೀದಿ ಬದಿ ಬಟ್ಟೆ ವ್ಯಾಪಾರಿಯನ್ನು ನಗರ ಮಧ್ಯದ ನೆಹರು ಮೈದಾನದಲ್ಲಿ ಕೊಲೆ ಮಾಡಿದ್ದಾರೆ. ಶನಿವಾರ ರಾತ್ರಿ ಕೊಲೆ ಮಾಡಿದ್ದು, ಭಾನುವಾರ ಬೆಳಗ್ಗೆ ಯುವಕರು ಕ್ರಿಕೆಟ್ ಆಡಲೆಂದು ಬಂದಾಗ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ.
ಪೊಲೀಸರು, ಶ್ವಾನದಳ ಸ್ಥಳಕ್ಕೆ ಧಾವಿಸಿದ್ದು, ಶವವನ್ನು ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.
ಕೊಲೆಯಾದವರ ಟಿಶರ್ಟ್ ಧರಿಸಿದ್ದು, ಅಂದಾಜು 35 ವರ್ಷ ಪ್ರಾಯ. ದೇಹ ಮತ್ತು ತಲೆ, ಹಣೆಯಲ್ಲಿ ಚೂಪಾದ ಆಯುಧದಿಂದ ಇರಿದ ಗಾಯಗಳಿವೆ.
ಮಂಜೇಶ್ವರ ಮತ್ತು ಉಪ್ಪಳದ ರೈಲು ಟೆಕೆಟ್ಗಳ ಶವದ ಬಳಿ ಪತ್ತೆಯಾಗಿದೆ. ಕೊಲೆಯಾದವರು ಉಪ್ಪಳ, ಮಂಜೇಶ್ವರದವರಾಗಿರಬಹುದು ಅಥವಾ ಕೊಲೆ ಮಾಡಿದವರು ಆ ಪ್ರದೇಶದವರು ಆಗಿರುವ ಸಾಧ್ಯತೆಗಳಿವೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 5.5 ಅಡಿ ಎತ್ತರು, ಎಣ್ಣೆಕಪ್ಪು ಮೈಬಣ್ಣ, ಮಾಸಿದ ಬೂದು ಬಣ್ಣದ ಟಿಶರ್ಟ್, ಮಾಸಿದ ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಹಣೆಯ ಎಡಭಾಗಕ್ಕೆ ಹರಿತವಾದ ಗಾಯವಾಗಿದೆ. ಈತನ ಬಗ್ಗೆ ಮಾಹಿತಿ ಇದ್ದವರು ಪಾಂಡೇಶ್ವರ ಪೊಲೀಸ್ ಠಾಣೆ 2220518 ಸಂಪರ್ಕಿಸಬಹುದು.
ವ್ಯಕ್ತಿ ಆತ್ಮಹತ್ಯೆ
ಮಲ್ಪೆ: ಇಲ್ಲಿನ ಕಲ್ಮಾಡಿ ಹೊಳೆಗೆ ಹಾರಿ ವಿಟ್ಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತರು ವಿಟ್ಲದ ವಿಜಯ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಕಲ್ಮಾಡಿಯ ಸೇತುವರ ಬಳಿ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ತೇಲುತ್ತಿರುವುದು ಪತ್ತೆಯಾಗಿತ್ತು. ಮೃತರಿಗೆ ಸುಮಾರು 53 ವರ್ಷ ವಯಸ್ಸಾಗಬಹುದು. ಮೃತ ದೇಹವು ನೀರಿನಲ್ಲಿರುವಾಗ ಜಲಚರಗಳು 2 ಕಿವಿಗಳಲ್ಲಿ ಬಲಕೈ ತೋರು ಬೆರಳಿನಲ್ಲಿ ಚರ್ಮ ಕಿತ್ತು ತಿಂದು ಗಾಯಗಳಾಗಿರುತ್ತದೆ. ಆತನ ಕಿಸೆಯಲ್ಲಿ ಮೊಬೈಲ್ ಇದ್ದು ಸಿಮ್ ತೆಗೆದು ನಂಬರ್ ಪತ್ತೆ ಹಚ್ಚಿದಾಗ ಅವರು ವಿಟ್ಲದ ವಿಜಯ ಎಂಬುವುದಾಗಿ ತಿಳಿದು ಬಂದಿದೆ. ಅವರು ಜೀವನದಲ್ಲಿ ಜಿಗುಪ್ಸೆಗೊಂಡು ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದಾಗಿ ಜಮೀರ್ ಸಾಹೇಬ್ ಎಂಬವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

