ಪ್ರೊ. ತಿಮ್ಮೇಗೌಡ ಬೆಂವಿವಿ ಕುಲಪತಿ
ಬೆಂಗಳೂರು: ಅಂತೂ ಇಂತು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕವಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ರಸಾಯನಾಸ್ತ್ರ ವಿಭಾಗದ ಪ್ರೊಫೆಸರ್ ಬಿ. ತಿಮ್ಮೇಗೌಡ ಅವರನ್ನು ಕುಲಪತಿ ಹುದ್ದೆಗೆ ನೇಮಕ ಮಾಡಿ ರಾಜ್ಯಪಾಲರು ಮಂಗಳವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ಬಿ. ತಿಮ್ಮೇಗೌಡ ಅವರು ಎಂಎಸ್ಸಿ ಪದವೀಧರರಾಗಿದ್ದು, ಶಾರೀರಿಕ ಆಂಗಿಕ ರಸಾಯನಶಾಸ್ತ್ರ ಕುರಿತ ವಿಷಯದಲ್ಲಿ ಸಂಶೋಧನೆ ಮಾಡಿದ್ದಾರೆ. 31 ವಿದ್ಯಾರ್ಥಿಗಳಿಗೆ ಅವರು ಪಿಎಚ್‌ಡಿ ಮಾರ್ಗದರ್ಶಕರಾಗಿದ್ದಾರೆ. ರಾಜಭವನದಿಂದ ಅಧಿಕೃತ ಆದೇಶ ಹೊರಬಂದ ತಕ್ಷಣ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ವಿವಿ ಕುಲಪತಿ ಹುದ್ದೆಗೆ ನೇಮಕವಾಗಿರುವುದು ಸಂತಸ ತಂದಿದೆ. ಬುಧವಾರ(ಫೆ.5) ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದರು ವಿವಿಯನ್ನು ಅಭಿವೃದ್ಧಿ ಪಥದ ಕಡೆ ಕೊಂಡೊಯ್ಯುವ ಬಗ್ಗೆ ನಾನು ಚಿಂತಿಸುತ್ತೇನೆ. ಬೇರೆ ವಿಶ್ವವಿದ್ಯಾಲಯ ಅಭಿವೃದ್ಧಿ ಆಗಿದೆಯೋ ಅಥವಾ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ. ಆದರೆ, ಬೆಂಗಳೂರು ವಿವಿಯನ್ನು ಒಂದು ಮಾದರಿ ವಿವಿಯಾಗಿ ಮಾಡುವುದರ ಬಗ್ಗೆ ಹೆಚ್ಚಿನ ಗಮನಹರಿಸುತ್ತೇನೆ ಎಂದರು.
ವಿವಿಯಲ್ಲಿ ಆಡಳಿತ ಸುಧಾರಣೆಗೊಳ್ಳಬೇಕಾದ ಅವಶ್ಯಕತೆ ಇದೆ. ನಾನು ಕುಲಪತಿಯಾಗಿ ನೇಮಕವಾದ ಸಮಯದಲ್ಲೇ ವಿವಿ ಇಬ್ಭಾಗಗೊಳ್ಳುತ್ತಿರುವುದರಿಂದ ಈ ಕುರಿತು ಚರ್ಚಿಸಬೇಕಾದ ಅವಶ್ಯಕತೆ ಇದೆ ಎಂದರು.
ಕುಲಪತಿ ಹುದ್ದೆ ನಾಲ್ಕು ವರ್ಷಗಳ ಅವಧಿ ಹೊಂದಿರುತ್ತದೆ. ಈವರೆಗೆ ಹಂಗಾಮಿ ಕುಲಪತಿಯಾಗಿದ್ದ ಡಾ.ಎನ್. ರಂಗಸ್ವಾಮಿ ಅವರು ಇನ್ನು ಮುಂದೆ ಆರ್ಥಶಾಸ್ತ್ರ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

