ದಕ್ಷಿಣ ಕನ್ನಡ

ಭೂಮಿ ಕೊಡಿ, ಅಧಿಕಾರ ಬಿಡಿ: ಪ್ರತಿಭಟನೆ

Published On :

ಸುಳ್ಯ:  ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಪಕ್ಷದ ವಿವಿಧ ಘಟಕಗಳ ಆಶ್ರಯದಲ್ಲಿ ಅಕ್ರಮ ಸಕ್ರಮ ಯೋಜನೆ ಲೋಪದೋಷಗಳನ್ನು ಖಂಡಿಸಿ, ಭೂಮಿ ಕೊಡಿ- ಅಧಿಕಾರ ಬಿಡಿ ಹಕ್ಕೊತ್ತಾಯ ಪ್ರತಿಭಟನೆ ತಾಲೂಕು ಕಚೇರಿ ಎದುರು ಶುಕ್ರವಾರ ನಡೆಯಿತು.
ಅಕ್ರಮ ಸಕ್ರಮದಲ್ಲಿ ಅರ್ಹರಿಗೆ ಕೂಡಲೇ ಭೂಮಿ ಮಂಜೂರು ಮಾಡುವುದು. ತಾಲೂಕು ಕಚೇರಿ ದಲ್ಲಾಳಿಗಳಿಂದ ತುಂಬಿದ್ದು,  ತಹಸೀಲ್ದಾರ್ ಚೇಂಬರ್‌ನಲ್ಲಿ ದಲ್ಲಾಳಿಗಳು ಕುಳಿತು ಕಾರ್ಯಭಾರ ನಡೆಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ತಾಲೂಕು ಕಚೇರಿಯಲ್ಲಿ ಆದ ಅವ್ಯವಹಾರದ ಬಗ್ಗೆ ಮೇಲಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದು ಆ ಕುರಿತು ಕೈಗೊಂಡ ತೀರ್ಮಾನದ ಬಗ್ಗೆ ಲಿಖಿತವಾಗಿ ತಿಳಿಸಬೇಕು. ಕಚೇರಿ ಸಿಬ್ಬಂದಿ ಸಾರ್ವಜನಿಕರ ಕೆಲಸ ಮಾಡದೇ ದಲ್ಲಾಳಿಗಳ ಜತೆ  ವ್ಯವಹರಿಸುವುದನ್ನು ನಿಲ್ಲಿಸಬೇಕು ಇನ್ನಿತರ ಬೇಡಿಕೆಗಳನ್ನು ಮುಂದಿರಿಸಿ ಪ್ರತಿಭಟನೆ ನಡೆಯಿತು.
ತಾಲೂಕು ಕಚೇರಿ ಗೇಟಿನ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಬಳಿಕ ಕಚೇರಿಯ ಒಳಗೆ ಕುಳಿತಿದ್ದ ಸಹಾಯಕ ಕಮಿಷನರ್ ಎಚ್. ಪ್ರಸನ್ನ ಅವರಲ್ಲಿಗೆ ನಾಯಕರ ನಿಯೋಗವೊಂದು ಹೋಗಿ ಸ್ಥಳಕ್ಕೆ ಬಂದು ತಮ್ಮ ಮನವಿ ಸ್ವೀಕರಿಸುವಂತೆ ಹೇಳಿದರು. ಈ ವೇಳೆ ಎ.ಸಿ.ಯವರು ಉದ್ಧಟತನದ ಉತ್ತರ ನೀಡಿದ್ದರೆಂದು ಆರೋಪಿಸಿದ ಅವರು ಕಾರ್ಯಕರ್ತರೊಂದಿಗೆ ಸಹಾಯಕ ಕಮಿಷನರ್ ವಿರುದ್ಧ ಧಿಕ್ಕಾರ ಕೂಗಿ ಕಚೇರಿಗೆ ಮುತ್ತಿಗೆ ಹಾಕಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಎಚ್.ವಿ. ಸುದರ್ಶನ್ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಉಪವಿಭಾಗಾಧಿಕಾರಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾಗುವುದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ಜಿ.ಪಂ. ಸದಸ್ಯ ಕೆ.ಎಸ್. ದೇವರಾಜ್, ಸರಸ್ವತಿ ಕಾಮತ್, ಮಾಜಿ ಜಿ.ಪಂ. ಸದಸ್ಯೆ ರಾಜೀವಿ ಆರ್. ರೈ, ಕೆಪಿಸಿಸಿ ಸದಸ್ಯ ಡಾ. ರಘು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.