15ರಿಂದ ಕಾರಂತ ನೆನಪಿನ ನಾಟಕೋತ್ಸವ
ಬಂಟ್ವಾಳ: ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿ ಆಶ್ರಯದಲ್ಲಿ ಫೆ.15ರಿಂದ 17ರವರೆಗೆ ಕುಕ್ಕಾಜೆ ಹಿ.ಪ್ರಾ. ಶಾಲಾ ವಠಾರದಲ್ಲಿ ಬಿ.ವಿ. ಕಾರಂತ ನೆನಪಿನ ನಾಟಕೋತ್ಸವ ನಡೆಯಲಿದೆ.
ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ವಿವರ ನೀಡಿದರು. ಭಾರತೀಯ ರಂಗಭೂಮಿಗೆ ಹೊಸಭಾಷ್ಯ ಬರೆದ ಬಿ.ವಿ. ಕಾರಂತರ ಹುಟ್ಟೂರು ಮಂಚಿಗ್ರಾಮವನ್ನು ಸಾಂಸ್ಕೃತಿಕ ಗ್ರಾಮವಾಗಿಸಬೇಕೆನ್ನುವ ಆಶಯದಲ್ಲಿ ಟ್ರಸ್ಟ್, ಕಾರಂತರ ಹೆಸರಿನಲ್ಲಿ ವಿವಿಧ ಚಟುವಟಿಕೆಗಳನ್ನು ಕಳೆದ ಐದು ವರ್ಷಗಳಿಂದ ನಡೆಸುತ್ತಾ ಬಂದಿದೆ. ಈ ಬಾರಿ ಐದನೇ ವರ್ಷದ ನಾಟಕೋತ್ಸವವನ್ನು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸಮಸಾಂಪ್ರತಿ ವಿಟ್ಲ ಇವರ ಸಹಯೋಗದಲ್ಲಿ ಮೂರು ದಿನ ಆಯೋಜಿಸಲಾಗಿದೆ. ಫೆ.15 ರಂದು ಸಂಜೆ ನಾಟಕೋತ್ಸವಕ್ಕೆ ಚಾಲನೆ ದೊರಕಲಿದ್ದು, ಶಿವಮೊಗ್ಗ ರಂಗಾಯಣದ ನಿರ್ದೇಶಕ ಹೊ.ನ. ಸತ್ಯ ಉದ್ಘಾಟಿಸುವರು. ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಟಿ. ಅನಂತಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ಸದಸ್ಯರಾದ ಶೀನ ನಾಡೋಳಿ ಭಾಗವಹಿಸಲಿದ್ದಾರೆ.
ಬಳಿಕ ಮೈಸೂರು ರಂಗಾಯಣದ ಕಲಾವಿದರಿಂದ 'ಪುಗಳೆಂದಿ ಪ್ರಹಸನ' (ರಚನೆ: ನಿರ್ದೇಶನ- ಪ್ರಸನ್ನ) ನಾಟಕ ಪ್ರದರ್ಶನಗೊಳ್ಳಲಿದೆ. ಫೆ.16 ರಂದು ಸಂಜೆ ವಿಟ್ಲ ಕನ್ನಡ ಸಂಘದ ಅಧ್ಯಕ್ಷ ಅನಂತಕೃಷ್ಣ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ರಂಗಾಯಣದ ನಿರ್ದೇಶಕ ಡಾ. ಬಿ.ವಿ. ರಾಜಾರಾಮ್, ಸಂಚಯಗಿರಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಂ ಪೂಜಾರಿ, ಕಂದೂರು ಶಂಕರ ಐತಾಳರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಬಳಿಕ ಮೈಸೂರು ರಂಗಾಯಣ ಕಲಾವಿದರಿಂದ ಏನ್ ಹುಚ್ಚೂರೀ, ಯಾಕಿಂಗಾಡ್ತೀರಿ (ರಚನೆ, ನಿರ್ದೇಶನ- ಪ್ರಸನ್ನ) ನಾಟಕ ಪ್ರದರ್ಶನಗೊಳ್ಳಲಿದೆ. ಫೆ.17ರ ಸಂಜೆ ನಾಟಕೋತ್ಸವ ಸಮಾರೋಪಗೊಳ್ಳಲಿದ್ದು, ಸಂಜೆ 5 ಗಂಟೆಗೆ ವಿಟ್ಲದ ಸಮಸಾಂಪ್ರತಿ ರಂಗ ತಂಡದಿಂದ ಮೂರ್ತಿ ದೇರಾಜೆ ನಿರ್ದೇಶನದಲ್ಲಿ 'ರಂಗಗೀತೆಗಳ ಗಾಯನ' ಕಾರ್ಯಕ್ರಮ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

