ದಕ್ಷಿಣ ಕನ್ನಡ

ಶಿವರಾಜ್ ಕೊಲೆ ಸೂತ್ರಧಾರಿ ಸೆರೆಗೆ ಆಗ್ರಹಿಸಿ ಪ್ರತಿಭಟನೆ

Published On :

ಮಂಗಳೂರು: ಕೋಡಿಕಲ್ ಶಿವರಾಜ್ ಕೊಲೆಗೈದ ಹಂತಕರನ್ನು ಬಂಧಿಸುವಂತೆ ಮತ್ತು ನಗರದಲ್ಲಿ ಡ್ರಗ್ಸ್ ಜಾಲ ಬಯಲಿಗೆ ಎಳೆಯುವಂತೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಹಿಂಜಾವೇ ದಕ್ಷಿಣ ಪ್ರಾಂತ ಸಂಚಾಲಕ ಉಲ್ಲಾಸ್ ಮಾತನಾಡಿ, ಹೋಮ್ ಸ್ಟೇ ದಾಳಿ ನಡೆಸಿದವರನ್ನು ಬಂಧಿಸಿದ್ದಾರೆ, ಆದರೆ ಪತ್ರಕರ್ತನ ಮೇಲೆ ಕೇಸು ಹಿಂದೆಗೆದುಕೊಂಡ ಸರ್ಕಾರಕ್ಕೆ ಪಾರ್ಟಿ ಹೆಸರಲ್ಲಿ ಡ್ರಗ್ಸ್ ಸರಬರಾಜು ಮಾಡುವವರನ್ನು ಬಂಧಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಶಿವರಾಜ್ ಕೊಲೆ ಪ್ರಕರಣದಲ್ಲಿ ಪಾಲ್ಗೊಂಡಿರುವವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ರಾಜಕೀಯ ಶಕ್ತಿಗಳ ಒತ್ತಡಕ್ಕೆ ಮಣಿದು ಇಬ್ಬರು ಆರೋಪಿಗಳನ್ನು ಮಾತ್ರ ಬಂಧಿಸಿದ್ದು, ಸೂತ್ರಧಾರಿಯನ್ನು ಬಂಧಿಸಿಲ್ಲ. ಪ್ರಕರಣದಲ್ಲಿ ಸರಿಯಾದ ಚಾರ್ಜ್‌ಶೀಟ್ ಕೂಡಾ ಹಾಕದೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ಹಿಂಜಾವೇ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್ ಮಾತನಾಡಿ,  ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ, ಅವರನ್ನು ಹಿಂಜಾವೇ ಹಾಗೂ ಸಾರ್ವಜನಿಕರು ಹಿಡಿದುಕೊಟ್ಟಿದ್ದಾರೆ. ಹೀಗಿದ್ದರೂ ಪೊಲೀಸರು ಆ ಆರೋಪಿಗಳು ಬಾಯಿಬಿಟ್ಟಿರುವಂತೆ ಸೂತ್ರಧಾರಿಯನ್ನು ಬಂಧಿಸಿಲ್ಲ. ಆರೋಪಿಗಳು ಸಿಕ್ಕಿದ ಬಳಿಕವೂ ಕೊಲೆ ರಹಸ್ಯ ಭೇದಿಸಲು ಸಾಧ್ಯವಾಗದೆ ಇದ್ದರೆ ಪೊಲೀಸ್ ಇಲಾಖೆ ಇದ್ದರೂ ನಿರುಪಯೋಗಿಯಾದಂತೆ ಎಂದರು.
ಹಿಂಜಾವೆ ಮಂಗಳೂರು ವಿಭಾಗ ಅಧ್ಯಕ್ಷ ವಾಸುದೇವ ಗೌಡ, ರಾಜಮೂಲ್ಯ, ಶಕುಂತಳ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.