ಪುದು ಗ್ರಾಪಂ ಆಡಳಿತ ಕೈ ಬೆಂಬಲಿತರ ವಶಕ್ಕೆ
ಬಂಟ್ವಾಳ: ಪುದು ಗ್ರಾಪಂಗೆ ನಡೆದ ಚುನಾವಣೆಯ ಮತ ಎಣಿಕೆ ಬುಧವಾರ ಬಂಟ್ವಾಳ ತಾಲೂಕು ಕಚೇರಿಯಲ್ಲಿ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ.
ಒಟ್ಟು 32 ಸ್ಥಾನಗಳ ಪೈಕಿ 22 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ದಾಖಲಿಸಿದರೆ, 9 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಗಳಿಸಿದ್ದಾರೆ, ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ಜಮೀಲಾ ಒಂದು ಸ್ಥಾನ ಗೆಲ್ಲುವ ಮೂಲಕ ಖಾತೆ ತೆರೆದಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು: ಜಾಹಿರಾ ಅಬ್ಬಾಸ್, ವನಿತಾ, ಹೇಮಲತಾ, ಅಖ್ತರ್ ಹುಸೇನ್, ಫೈಝಲ್, ಹಿಲ್ಡಾ ಮಿರಾಂಡಾ, ಆತಿಕಾ, ದುರ್ಗೇಶ್ ಶೆಟ್ಟಿ, ಸುಲೈಮಾನ್, ಅಬ್ದುಲ್ ಖಾದರ್, ನಳಿನಾಕ್ಷಿ, ಲಿಡಿಯಾಪಿಂಟೋ, ಜಯಂತಿ, ಮಹಮ್ಮದ್ ಶರೀಫ್, ಮಹಮ್ಮದ್ ಆಸಿಫ್, ಹಿಲ್ಡಾ ಡಿಸೋಜ, ಲಕ್ಷ್ಮೀ, ವಸಂತಿ ಶೆಟ್ಟಿ, ಅಬ್ದುಲ್ ಲತೀಫ್, ಎಂ.ಕೆ. ಅಬ್ದುಲ್ ಖಾದರ್, ಮನೋರಮಾ, ರಮ್ಲಾನ್.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು: ಗಣೇಶ್, ಜಾನಕಿ, ಮಾಲತಿ, ಜಗದೀಶ್, ಭಾರತಿ(ಅವಿರೋಧ ಆಯ್ಕೆ), ವಸಂತಿ .ಕೆ ಶೆಟ್ಟಿ, ಮನೋಜ್ ಆಚಾರ್ಯ, ಪುಷ್ಪಲತಾ, ಗೀತಾ. ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತ ಎಣಿಕೆ ಕಾರ್ಯ ಸಂಜೆ 5 ಗಂಟೆಯವರೆಗೂ ಮುಂದುವರಿದಿತ್ತು. ಬಂಟ್ವಾಳ ತಹಸೀಲ್ದಾರ್ ಮಲ್ಲೇಸ್ವಾಮಿ ಮತ ಎಣಿಕೆಯ ಮೇಲುಸ್ತುವಾರಿ ವಹಿಸಿದ್ದರು.
ಮಾತಿನ ಚಕಮಕಿ: ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರ ಘೋಷಣೆ ಕೂಗುತ್ತಿದ್ದ ವೇಳೆ ಗುಂಪುಗಳ ನಡುವೆ ತಳ್ಳಾಟ ನಡೆದು ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಬಂದೋಬಸ್ತಿನಲ್ಲಿದ್ದ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಮಹೇಶ್ ಪ್ರಸಾದ್ ಹಾಗೂ ನಗರ ಠಾಣಾಧಿಕಾರಿ ಶೇಖರ್ ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಗುಂಪು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ವಿಜಯೋತ್ಸವ: ಗೆಲುವು ಸಾಧಿಸಿದ ನೂತನ ಸದಸ್ಯರನ್ನು ಆಯಾಯ ಪಕ್ಷಗಳ ಕಾರ್ಯಕರ್ತರು ಮುಖಂಡರು ತೆರೆದ ವಾಹನಗಳಲ್ಲಿ ಬಿ.ಸಿ. ರೋಡು ತಾಲೂಕು ಕಚೇರಿಯಿಂದ ಫರಂಗಿಪೇಟೆವರೆಗೆ ಮೆವರಣಿಗೆಯ ಮೂಲಕ ಕರೆದೊಯ್ದರು. ಎಣಿಕೆ ಸಂದರ್ಭ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಶಾಸಕ ಯು.ಟಿ. ಖಾದರ್, ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಅಶ್ವನಿಕುಮಾರ್, ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮತ್ತಿತರರು ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಒಂದು ಮತದ ಅಂತರದ ಜಯ...: ಪುದು ಗ್ರಾಮಪಂಚಾಯತ್ನ ಹತ್ತನೇ ಮೈಲಿಗಲ್ಲು ವಾರ್ಡ್ನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಅಬ್ದುಲ್ ಲತೀಫ್ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಮಹಮ್ಮದ್ ಹನೀಫ್ ವಿರುದ್ಧ ಕೇವಲ 1 ಮತದ ಅಂತರದಿಂದ ವಿಜಯಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

