7 ಗಂಟೆ ನಡೆಯಿತು ಸರ್ಪ ಸಮರ!
ಕುಂದಾಪುರ: ಕೋಟೇಶ್ವರದ ಕಿನಾರಾ ರಸ್ತೆ ಬಳಿಯ ತೆಂಗಿನ ತೋಪಿನಲ್ಲಿ ಗುರುವಾರ ಮುಂಜಾನೆ ನಡೆದ ಭೀಕರ ಸರ್ಪ ಸಮರ ಸ್ಥಳೀಯರಲ್ಲಿ ಭಯ ಮೂಡಿಸಿತು.
ಗಣೇಶ ಉಡುಪ ಎಂಬವರ ತೆಂಗಿನ ತೋಟದಲ್ಲಿ ನಸುಕಿನ 5 ಗಂಟೆಗೆ ಸುಮಾರು ಐದಾರು ಅಡಿ ಉದ್ದದ ಎರಡು ನಾಗರ ಹಾವುಗಳು ದ್ವೇಷದಿಂದ ಕಚ್ಚಾಡುತ್ತಿದ್ದವು. ಸಾಕು ನಾಯಿ ಬೊಗಳುವುದನ್ನು ಅನುಸರಿಸಿ ಹೋದ ಗಣೇಶ್ ಅವರು ಸರ್ಪಸಮರ ನೋಡಿ ಸ್ತಂಭೀಭೂತರಾದರು. ಹತ್ತಿರ ಹೋಗುವ ಧೈರ್ಯ ಬರಲಿಲ್ಲ. ಅವುಗಳ ರೋಷಾವೇಶ, ಕಚ್ಚಾಟ ಎಂಥವರನ್ನೂ ಭಯಗೊಳಿಸುವಂತಿತ್ತು.
ತಕ್ಷಣ ಉಡುಪ ಅವರು ಕೋಟೇಶ್ವರದ ಉರಗ ತಜ್ಞ 'ಹಾವ್ಐತಾಳ' ಎಂದೇ ಖ್ಯಾತಿ ಪಡೆದ ಶ್ರೀಧರ ಐತಾಳರಿಗೆ ಕರೆ ಮಾಡಿದ್ದಾರೆ. ಅವರು ಸ್ಥಳಕ್ಕಾಗಮಿಸಿದಾಗ ಸರ್ಪಗಳು ಪರಸ್ಪರ ಸುತ್ತಿಕೊಂಡು ಹೆಡೆಯಲ್ಲಿ ಹೋರಾಟ ನಡೆಸುತ್ತಿದ್ದವು. ಹೆಡೆ ಮೇಲೆ ಕಚ್ಚಾಡುತ್ತಿದ್ದ ಅವುಗಳನ್ನು ಹರಸಾಹಸದಿಂದ ಬೇರ್ಪಡಿಸಿದರು.
200 ಮೀ. ದೂರ ಮಾಡಿದರೂ ಮತ್ತೆ ಎರಡೂ ಸರ್ಪಗಳು ಒಂದಾಗಿ ಕದನ ಪ್ರಾರಂಭಿಸಿಯೇ ಬಿಟ್ಟವು. ಇವುಗಳಿಂದ ಐತಾಳರೇ ಗಾಬರಿಗೊಂಡರು. ಹೀಗೇ ಬಿಟ್ಟರೆ ಎರಡೂ ಹಾವುಗಳ ಸಾಯುತ್ತವೆ ಎಂದು ಗಣೇಶ ಉಡುಪ, ಶಶಿಧರ ಪೂಜಾರಿ ಮತ್ತಿತರರ ನೆರವಿನಿಂದ ಮಧ್ಯಾಹ್ನ 12ರ ವೇಳೆಗೆ ಮತ್ತೊಮ್ಮೆ ಸರ್ಪಗಳನ್ನು ಬೇರ್ಪಡಿಸಿ ಬೇರೆ ಬೇರೆ ಕೊಡಗಳಲ್ಲಿ ತುಂಬಿದರು. ಎರಡನ್ನೂ ಅಭಯಾರಣ್ಯಕ್ಕೆ ಒಯ್ದು ನಾಲ್ಕೈದು ಕಿಲೋ ಮೀಟರ್ಗಳ ಅಂತರದಲ್ಲಿ ಬಿಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

