ಗೋಡ್ಖಿಂಡಿ 'ಕೃಷ್ಣ' ಫ್ಯೂಶನ್ಗೆ ವಿಟ್ಲ ಜನತೆ ಮಂತ್ರಮುಗ್ಧ
ವಿಟ್ಲ: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ವೇಣುನಾದಕ್ಕೆ ಇತ್ತೀಚೆಗೆ ವಿಟ್ಲದ ಆಸ್ತಿಕ ಸಮೂಹ ಮಂತ್ರಮುಗ್ಧವಾಗಿಯಿತು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ವಿಟ್ಲದ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಸಭಾಭವನದ ರವಿವರ್ಮ ಅರಸು ವೇದಿಕೆಯಲ್ಲಿ ಗೋಡ್ಗಿಂಡಿ 'ಕೃಷ್ಣ' ಫ್ಯೂಶನ್ ತಂಡದಿಂದ ಎರಡೂವರೆ ಗಂಟೆ ಕಾಲ ಫ್ಯೂಶನ್ ಕಛೇರಿ ನಡೆಯಿತು.
ಸಭೆಯ ತುಂಬಾ ಸದ್ದು ಗದ್ದಲಗಳಿದ್ದರೂ ಗೋಡ್ಕಿಂಡಿ ಕಾರ್ಯಕ್ರಮ ಪ್ರಾರಂಭವಾದ ತಕ್ಷಣ ಸದ್ದಡಗಿ ಪ್ರದರ್ಶನ ಯಶಸ್ವಿಯೆನಿಸಿತು. ಕದ್ರಿ ಗೋಪಾಲಲ್ನಾಥ್ ಜತೆ ಜುಗಲ್ ಬಂದಿಯಲ್ಲಿ ನುಡಿಸಿದ 'ರಾಗ್ರಂಗ್' ಧ್ವನಿಯನ್ನು ಕಾರ್ಯಕ್ರಮದಲ್ಲಿ ನುಡಿಸುತ್ತಿದ್ದಂತೆ ಪುಟ್ಟ ಮಕ್ಕಳು ಕುಳಿತಲ್ಲೇ ಎದ್ದು ನಿಂತು ಹೆಜ್ಜೆ ಹಾಕುತ್ತಿದ್ದರು.
ಪ್ರೇಕ್ಷಕರೆಡೆ ನಡಿಗೆ...: ರಾಗ್ 'ಪಹಾಡಿ' ರಾಗನಲ್ಲಿ ವಿವಿಧ ಜನಪದ ಹಾಡುಗಳನ್ನು ನುಡಿಸುತ್ತಾ ವೇದಿಕೆಯಿಂದ ಸಭೀಕರ ಬಳಿಗೆ ನಡೆದು ಎಲ್ಲರೂ ಹರ್ಷಚಿತ್ತರಾಗಿಸಿದರು. ಬೇರೆ ಬೇರೆ ರಾಗ ಮಾಲಿಕೆಗಳನ್ನು ನುಡಿಸಿ ಸೇರಿದ ಸಾವಿರಾರು ಜನರಲ್ಲಿ ಹರ್ಷೋದ್ಗಾರ ಮೂಡುವಂತೆ ಮಾಡಿದರು. ಪ್ರತಿ ಹಾಡು ಮುಗಿದ ತಕ್ಷಣ ಜನಸ್ತೋಮ ಎದ್ದು ನಿಂತು ಗೌರವ ಸೂಚಿಸಿತು. ತಬಲಾದಲ್ಲಿ ಪ್ರವೀಣ್ ಅವರ ಅಣ್ಣ ಕಿರಣ್ ಗೋಡ್ಕಿಂಡಿ, ಕೀ ಬೋರ್ಡ್ ವಾದಕರಾಗಿ ಉಮೇಶ್ ಬೆಂಗಳೂರು ಮತ್ತು ಪದ್ಮನಾಭ ಕಾಮತ್ ಸಹಕಾರ ನೀಡಿದರು. ಸಭಾಂಗಣದಲ್ಲಿ ಸುಮಾರು 30,000ಕ್ಕೂ ಅಧಿಕ ಸಭಿಕರಿದ್ದರು.
ವಾಮದಪದವು: ಇಂದು ರಾಜ್ಯ ಮಟ್ಟದ ಮಹಿಳಾಗೋಷ್ಠಿ
ಬಂಟ್ವಾಳ: ತಾಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವತಿಯಿಂದ ಸೋಮವಾರ ಬೆಳಗ್ಗೆ ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾ ಹಕ್ಕುಗಳ ಬಗ್ಗೆ ರಾಜ್ಯಮಟ್ಟದ ವಿಚಾರ ಗೋಷ್ಠಿ ನಡೆಯಲಿದೆ.
ಶಾಸಕ ಬಿ. ರಮಾನಾಥ ರೈ ಗೋಷ್ಠಿ ಉದ್ಘಾಟಿಸಲಿದ್ದು, ಪ್ರಾಂಶುಪಾಲ ಪ್ರೊ.ಕೆ.ಪಿ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸುವರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯ ಪ್ರಕಾಶ್, ಉಜಿರೆ ಎಸ್ಡಿಎಂ ಕಾಲೇಜಿನ ಡಾ. ಶಾಲಿಪ್ ಎ.ಪಿ., ಮಂಗಳೂರು ಸರ್ಕಾರಿ ಮಹಿಳಾ ಕಾಲೇಜಿನ ಡಾ. ಜೋಶ್ನಾ ಮಹೇಶ್, ಮಂಗಳೂರು ವೆಲೊರೆಡ್ ಸಂಸ್ಥೆಯ ಕಸ್ತೂರಿ, ಕಾರ್ಕಳ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಸ್. ವರ್ಮಾ ಮತ್ತಿತರರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
30 ಸಾಧಕರಿಗೆ ಟ್ಯಾಲೆಂಟ್ ಮಿಲಾದ್ ಪ್ರಶಸ್ತಿ
ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ 30 ಸಾಧಕರಿಗೆ ಪ್ರಶಸ್ತಿ ನೀಡಲಿದ್ದು, ಅರ್ಹರಿಂದ ಅರ್ಜಿ ಅಹ್ವಾನಿಸಿದೆ. ಜೀವಮಾನ ಸಾಧನೆ ಪ್ರಶಸ್ತಿ, ಉತ್ತಮ ಸಮಾಜ ಸೇವಕ ಪ್ರಶಸ್ತಿ, ಸದ್ಭಾವನೆ ಪ್ರಶಸ್ತಿ, ಉತ್ತಮ ಮಾಧ್ಯಮ ಪ್ರತಿನಿಧಿ ಪ್ರಶಸ್ತಿ, ಪರಿಸರ ಮಿತ್ರ ಪ್ರಶಸ್ತಿ, ಆರೋಗ್ಯ ಮಿತ್ರ ಪ್ರಶಸ್ತಿ, ಚೈತನ್ಯ ಪ್ರಶಸ್ತಿ, ಜನಜಾಗೃತಿ ಪ್ರಶಸ್ತಿ, ಪ್ರಾಮಾಣಿಕ ಚಾಲಕ ಪ್ರಶಸ್ತಿ, ಸ್ವಾವಲಂಬನೆ ಪ್ರಶಸ್ತಿ (ಮಹಿಳೆಯರಿಗೆ) ನೀಡಲಾಗುವುದು ಎಂದು ಕಾರ್ಯಾಧ್ಯಕ್ಷ ರಿಯಾಝ್ ಕಣ್ಣೂರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಏ.21ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಫೆ.28ರ ಒಳಗೆ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು, ಸಂಶ, ಸಂಸ್ಥೆಗಳು ಪ್ರಶಸ್ತಿಗೆ ಶಿಫಾರಸು ಮಾಡಬಹುದು. ಹೆಚ್ಚಿನ ಮಾಹಿತಿಗೆ ಸಂಸ್ಥೆ (0824-4267883)ಯನ್ನು ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸೈದುದ್ದೀನ್ ಬಜಪೆ, ಅಬ್ದುಲ್ ಸಲಾಂ ಪೆರ್ನೆ, ಬಿ.ಎ.ಅಕ್ಬರ್ ಅಲಿ, ಮಹಮ್ಮದ್ ರಫೀಕ್ ಇದ್ದರು.
ರಾಷ್ಟ್ರಮಟ್ಟಕ್ಕೆ ಹಿರಿಯರ ಕ್ರೀಡಾ ಸಂಘದ ಐವರು ಆಯ್ಕೆ
ಪುತ್ತೂರು: ತಮಿಳುನಾಡು ಮಾಸ್ಟರ್ಸ್ ಅಥ್ಲೆಟಿಕ್ಸ್ ವತಿಯಿಂದ ತಮಿಳುನಾಡಿನ ಕಡಲೂರಿನಲ್ಲಿ ಇತ್ತೀಚೆಗೆ ಎರಡನೇ ದಕ್ಷಿಣ ವಿಭಾಗ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್- 2013 ರಲ್ಲಿ ಭಾಗವಹಿಸಿದ ಪುತ್ತೂರು ತಾಲೂಕು ಹಿರಿಯರ ಕ್ರೀಡಾ ಸಂಘದ ಐವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದಕ್ಷಿಣ ವಿಭಾಗ ಮಾಸ್ಟರ್ಸ್ ಅಥ್ಲ್ಲೆಟಿಕ್ ಚಾಂಪಿಯನ್ನಲ್ಲಿ ಕುಶಾಲಪ್ಪ ಗೌಡ ಕೆ. (60ರ ವಯೋವಾನ) 1500 ಓಟ (ದ್ವಿ), 5000 ಓಟ (ದ್ವಿ), ಚಕ್ರ ಎಸೆತ (ದ್ವಿ), 4್ಢ400 ರೀಲೆ (ಪ್ರ), ತ್ರಿವಿದ ಜಿಗಿತ (ತೃ) ಸ್ಥಾನ ಪಡೆದು ಕೊಂಡಿದ್ದಾರೆ. ಲಕ್ಷ್ಮಣ ಕರಂದ್ಲಾಜೆ (35ರ ವಯೋವಾನ) ಗುಂಡೆಸತ (ಪ್ರ), ಚಕ್ರ ಎಸೆತ (ದ್ವಿ), ಜಾವೆಲಿನ್ (ದ್ವಿ), ಹ್ಯಾಮರ್ ಥ್ರೋ (ದ್ವಿ) ಸ್ಥಾನ ಪಡೆದುಕೊಂಡಿದ್ದಾರೆ. ವೂಹಿನಿ ಎನ್. (40ರ ವಯೋವಾನ) ಗುಂಡೆಸತ (ಪ್ರ), ಚಕ್ರ ಎಸೆತ (ದ್ವಿ), ಸ್ಥಾನ ಪಡೆದುಕೊಂಡಿದ್ದಾರೆ. ಹೇಮಾ ನಾಗೇಶ್ ರೈ (45 ರ ವಯೋವಾನ) ಜಾವೆಲಿನ್ (ಪ್ರ), ಲಾಂಗ್ಜಂಪ್ (ಪ್ರ), 100 ಓಟ (ದ್ವಿ), 200 ಓಟ (ದ್ವಿ), 4್ಢ400 ರೀಲೆ (ಪ್ರ) ಸ್ಥಾನ ಪಡೆದುಕೊಂಡಿದ್ದಾರೆ. ಗಿರಿಶಂಕರ ಸುಲಾಯ (40 ರ ವಯೋವಾನ) ತ್ರಿವಿಧ ಜಿಗಿತ (ಪ್ರ), 100 ಮೀ. ಹರ್ಡಲ್ (ಪ್ರ), 4್ಢ400 ರೀಲೆ (ಪ್ರ), ಪೋಲ್ವಾಲ್ (ತೃ) ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

