ಕೇಸರಿ ಬಟ್ಟೆ ಬಿಡೋಲ್ಲ: ವಿಜಯನಾಥ ಶೆಟ್ಟಿ
ಮಂಗಳೂರು: ಕಾಂಗ್ರೆಸ್ ಸೇರಿದ ಮೇಲೆ ಪಕ್ಷವನ್ನು ಪ್ರತಿನಿಧಿಸುವ ಸಮವಸ್ತ್ರ ಧರಿಸಬೇಕೇ ವಿನಃ ಕೇಸರಿ ಬಟ್ಟೆಯನ್ನಲ್ಲ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಬಹಿರಂಗವಾಗಿ ಆಕ್ಷೇಪಿಸಿರುವುದಕ್ಕೆ ಹೊಸದಾಗಿ ಕಾಂಗ್ರೆಸ್ಗೆ ಸೇರ್ಪಡೆಯಾದ ವಿಜಯನಾಥ ಶೆಟ್ಟಿ ಕೇಸರಿ ಬಟ್ಟೆ ತೊಡುವುದನ್ನು ಸಮರ್ಥಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ತನ್ನತನವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುವ ಮೂಲಕ ಪೂಜಾರಿ ಮಾತಿಗೆ ಟಾಂಗ್ ನೀಡಿದ್ದು, ಕೇಸರಿ ಬಟ್ಟೆ ಸಮಾಜದ ಅವಿಭಾಜ್ಯ ಅಂಗ, ಅದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ವಿನಂತಿಸಿದ್ದಾರೆ. ಅಲ್ಲದೆ ತಾನು ಮುಂದೆಯೂ ಕೇಸರಿ ಬಟ್ಟೆ ತೊಡುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಸೇರ್ಪಡೆ ವೇಳೆ ನಮ್ಮ ಸಂಸ್ಕೃತಿಯ ಪ್ರತೀಕವಾದ ಕೇಸರಿ ಬಟ್ಟೆ ತೊಡಲು ಅವಕಾಶ ನೀಡಬೇಕು ಎಂದು ಹೇಳಿಯೇ ಸೇರಿದ್ದೆ. ನಂತರವೂ ಪಕ್ಷದ ಕಾರ್ಯಕ್ರಮಗಳಲ್ಲಿ ಕೇಸರಿ ಬಟ್ಟೆಯಲ್ಲೇ ಪಾಲ್ಗೊಂಡಿದ್ದೆ. ಆಗೆಲ್ಲ ಯಾರೂ ವಿರೋಧಿಸಿಲ್ಲ. ಆದರೆ ಈಚೆಗೆ ವಿವೇಕಾನಂದರ 150ನೇ ಜಯಂತಿ ದಿನಾಚರಣೆಯಲ್ಲಿ ಪೂಜಾರಿ ಅವರು ಬಹಿರಂಗವಾಗಿಯೇ ಆಕ್ಷೇಪಿಸಿದ್ದರು. ಆದರೆ ಅವರ ಬಗ್ಗೆ ತನಗೆ ಅಪಾರ ಗೌರವವಿದ್ದು, ತಾನು ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಸಂಘಟನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಕೇಸರಿ ಬಟ್ಟೆ ವಿಚಾರದ ವಿವಾದವನ್ನು ಇಲ್ಲಿಗೇ ಮುಕ್ತಾಯಗೊಳಿಸಬೇಕು ಎಂದು ವಿಜಯನಾಥ ಶೆಟ್ಟಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

