31ರಂದು ಅಬ್ಬಕ್ಕ ಟಿವಿ ಚಾನೆಲ್ ಚಾಲನೆ
ಮಂಗಳೂರು: ದೇರಳಕಟ್ಟೆ ಚಿರಂಜೀವಿ ಟವರ್ಸ್ನಲ್ಲಿರುವ ವಿಲ್ ಪವರ್ ಮೀಡಿಯ ಅವರಿಂದ ಉಳ್ಳಾಲ ಅಬ್ಬಕ್ಕ ಹೆಸಲ್ಲಿ ಜ.31ರಂದು ಸ್ಥಳೀಯ ಚಾನೆಲ್ ಆರಂಭಗೊಳ್ಳಲಿದೆ. ಕೊಲ್ಯ ಕುಲಾಲ ಮಂದಿರದಲ್ಲಿ ಒಡಿಯೂರು ಮಾತಾನಂದಮಯಿ ಉದ್ಘಾಟಿಸುವರು. ಉದ್ಯಮಿ ಡಾ.ಜಿ.ಶಂಕರ್ ಚಾನೆಲ್ ಲೋಕಾರ್ಪಣೆ ಮಾಡುವರು ಎಂದು ಕಾರ್ಯಕ್ರಮ ನಿರ್ದೇಶಕ ಶಶಿಧರ್ ಪೊಯ್ಯತ್ತಬೈಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿಟ್ಟೆ ವಿವಿ ಕುಲಪತಿ ಎನ್.ವಿನಯ್ ಹೆಗ್ಡೆ ಲಾಂಛನ ಅನಾವರಣಗೊಳಿಸುವರು. ಮುಂಬೈ ಉದ್ಯಮಿ ಸುರೇಶ್ ಕಾಂಚನ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎನ್.ಯೋಗೀಶ್ ಭಟ್, ಕೃಷ್ಣ ಜೆ.ಪಾಲೆಮಾರ್, ಯು.ಟಿ.ಖಾದರ್, ರಮಾನಾಥ ರೈ, ಮೋನಪ್ಪ ಭಂಡಾರಿ, ವಸಂತ ಬಂಗೇರ, ಅಭಯಚಂದ್ರ ಜೈನ್, ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಸಚಿವ ವಿ.ಧನಂಜಯ ಕುಮಾರ್, ಜೆಡಿಎಸ್ ಮುಖಂಡ ಸದಾನಂದ ಶೆಟ್ಟಿ, ಅಜಿತ್ ಕುಮಾರ್ ರೈ ಮೊದಲಾದವರು ಭಾಗವಹಿಸುವರು. ತೊಕ್ಕೊಟ್ಟು ಸಿಸಿಎನ್ ವ್ಯಾಪ್ತಿಯ ಕಲ್ಲಾಪು, ತೊಕ್ಕೊಟ್ಟು, ಬೀರಿ, ತಲಪಾಡಿ, ದೇರಳಕಟ್ಟೆ, ಮುಡಿಪು, ಬೊಳ್ಯಾರು, ಇರಾ, ಕೇರಳದ ಮಂಜೇಶ್ವರ ವ್ಯಾಪ್ತಿಯಲ್ಲಿ ವಾಹಿನಿ ಪ್ರಸಾರವಾಗಲಿದೆ. ಪುತ್ತೂರು ಪಿಸಿಎನ್, ಕಾಸರಗೋಡು ಕೆಸಿಸಿ ವ್ಯಾಪ್ತಿಯಲ್ಲಿ ಚಾನೆಲ್ ಪ್ರಸಾರಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ತಾಂತ್ರಿಕ ನಿರ್ದೇಶಕಿ ಅಶ್ವಿನಿ ಹರೀಶ್ ನಾಯಕ್, ಮಾರುಕಟ್ಟೆ ನಿರ್ದೇಶಕ ಸುಪ್ರೀತ್ ಭಂಡಾರಿ, ಮಾರುಕಟ್ಟೆ ವ್ಯವಸ್ಥಾಪಕ ಗಣೇಶ್ ತಲಪಾಡಿ, ಸುದ್ದಿ ಸಂಪಾದಕ ಗಂಗಾಧರ ಪಿಲಿಯೂರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

