ಕನ್ನಡಸಿರಿ ಸನ್ಮಾನ, ಗೌರವ, ಅಭಿನಂದನೆ
ಸುಬ್ರಹ್ಮಣ್ಯ: ಏನೆಕಲ್‌ನಲ್ಲಿ ಭಾನುವಾರ ನಡೆದ ಸುಳ್ಯ ತಾಲೂಕು ಮಟ್ಟದ 18ನೇ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿ ಸಾಧನೆ ಮೆರೆದ ಸುಮಾರು 23 ಪ್ರತಿಭಾನ್ವಿತರಿಗೆ ಹಾಗೂ ಎರಡು ಸಂಸ್ಥೆಗಳಿಗೆ ಕನ್ನಡಸಿರಿ ಸನ್ಮಾನ, ಗೌರವ ಮತ್ತು ಅಭಿನಂದನೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷ ಡಾ.ಕೆ.ವಿ. ಚಿದಾನಂದ ಪ್ರಶಸ್ತಿ ಪ್ರದಾನ ಮಾಡಿದರು.
ಕನ್ನಡ ಸಿರಿ ಸನ್ಮಾನವನ್ನು ಲಕ್ಷ್ಮೀಶ ಚೊಕ್ಕಾಡಿ (ಸಾಹಿತ್ಯ), ಆನಂದ ಗೌಡ ಪೆರ್ಲ (ಜಾನಪದ ಸಾಹಿತ್ಯ), ಗೋಪಾಲಕೃಷ್ಣ ಭಟ್ ಮಲೆಯಾಳ (ಯಕ್ಷಗಾನ), ಜಯಪ್ರಕಾಶ್ ಮೊಂಟಡ್ಕ (ರಂಗಭೂಮಿ), ರಾಮ ಮುತ್ಲಾಜೆ (ಭೂತಾರಾಧನೆ), ಶೇಷಪ್ಪ ಗೌಡ ಕಿನ್ನಿಕುಮೇರಿ (ಶಿಕ್ಷಣ), ಪಿ.ಕೆ. ಉಮೇಶ್ ಸುಳ್ಯ (ಮುದ್ರಣ ವಿನ್ಯಾಸ), ಸತ್ಯಮೂರ್ತಿ ಮೇಲ್ಕಟ್ಟ (ಆರ್ಯಭಟ ಪ್ರಶಸ್ತಿ ಪುರಸ್ಕೃತ), ರವೀಂದ್ರ ಕುಮಾರ್ ರುದ್ರಪಾದ (ಹೈನುಗಾರಿಕೆ), ನೇಹ ಎಚ್. (ರಾಷ್ಟ್ರೀಯ ಕ್ರೀಡಾಪಟು), ಭರತ್ ಬೀದಿಗುಡ್ಡೆ (ಸಾರಿಗೆ) ಕನ್ನಡ ಸಿರಿ ಸನ್ಮಾನ ಪಡೆದುಕೊಂಡರು. ದೇವತಾರ್ಚನೆಗೆ ಸುಬ್ರಾಯ ಅಸ್ರಣ್ಣ, ಸುಂದರ ಮಾಸ್ತರ್, ಮುತ್ತಪ್ಪ ಮಾಸ್ತರ್, ನೇಮಣ್ಣ ಮಾಸ್ತರ್ ಅಧ್ಯಾಪನ ಕ್ಷೇತ್ರಕ್ಕೆ ಕನ್ನಡ ಸಿರಿ ಗೌರವ ಸ್ವೀಕರಿಸಿದರು.
ಯುವ ಸಾಧಕರಿಗೆ ಅಭಿನಂದನೆ: ಯುವ ಸಾಧಕರಾದ ಅರುಣಾ ಕೋಟೆ (ಕನ್ನಡ ಮಾಧ್ಯಮ ಶಿಕ್ಷಣ), ಸಹನಾ ಮಲ್ಲಾರ (ರಾಷ್ಟ್ರೀಯ ಕ್ರೀಡಾಪಟು), ನಿಶಾ ಉಪ್ಪಳಿಕೆ (ರಾಷ್ಟ್ರೀಯ ಕ್ರೀಡಾಪಟು), ವೇದವ ಪಲ್ಲೋಡಿ (ಉನ್ನತ ಶಿಕ್ಷಣ), ಸೃಜನಾ ಮಲ್ಲಾರ (ಕನ್ನಡದಲ್ಲಿ ಅತ್ಯಧಿಕ ಅಂಕ), ಚೈತನ್ಯ ಬೂಧಿಪಳ್ಳ, ಧೃತಿ ಮುಂಡೋಡಿ (ಸೂಪರ್ ದಿಕ್ಕೆಲ್‌ಗಾಗಿ ರಾಷ್ಟ್ರ ಪ್ರಶಸ್ತಿ), ಸ್ವಂತಿಕಾ ಸಾಹಿತ್ಯ ಸಾಂಸ್ಕೃತಿಕ ಬಳಗ ಸುಳ್ಯ (ಪುಸ್ತಕ ಸಂಸ್ಕೃತಿ- ಸಾಹಿತ್ಯ ಪ್ರಸಾರ), ಸ್ನೇಹ ಕನ್ನಡ ಮಾಧ್ಯಮ ಶಾಲೆ (ಕನ್ನಡ ಮಾಧ್ಯಮ ಶಿಕ್ಷಣ ಪ್ರಗತಿ) ಇವರನ್ನು ಕನ್ನಡ ಸಿರಿ ಅಭಿನಂದನೆಯಡಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

