ಅಂಧ ವಿದ್ಯಾರ್ಥಿಗಳ ಸಿಡಿ ಬಿಡುಗಡೆ
ಬೆಳ್ತಂಗಡಿ: ಅಂಧ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಧ್ವನಿತಟ್ಟೆ (ಸಿಡಿ)ಯನ್ನು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಇತ್ತೀಚೆಗೆ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಆರ್ಥಿಕ ನೆರವಿನೊಂದಿಗೆ ನವಚೇತನ ಕಾರ್ಯಕ್ರಮದಡಿ ಮೈಸೂರಿನ ಶುಭೋದಯ ಚಾರಿಟೇಬಲ್ ಟ್ರಸ್ಟ್ ರಾಜ್ಯಾದ್ಯಂತ ಇರುವ ಅಂಧ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಧ್ವನಿ ಮುದ್ರಿತ ವಾಯ್ಸ್ ಬಾಕ್ಸ್‌ನ್ನು ರು. 3.50 ಲಕ್ಷ ವೆಚ್ಚದಲ್ಲಿ ತಯಾರಿಸಿ ನೀಡಲಾಗುತ್ತಿದೆ.
ಈಗಾಗಲೇ ಭದ್ರಾವತಿ ತಾಲೂಕಿನ ಶಿವಭದ್ರ ಟ್ರಸ್ಟ್ ತರಂಗ- ಕಿವುಡ ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಚಿತ್ರದುರ್ಗ ತಾಲೂಕಿನ ಗಾರೆಹಟ್ಟಿಯ ಶ್ರೀಬಸವೇಶ್ವರ ವಿದ್ಯಾಸಂಸ್ಥೆ, ಬೆಂಗಳೂರು ಜೀವನಹಳ್ಳಿಯ ಸ್ನೇಹದೀಪ ಅಂಗವಿಕಲ ಸಂಸ್ಥೆ ಮತ್ತು ಬೆಂಗಳೂರು, ಕಮ್ಮನಹಳ್ಳಿ, ಆರ್.ಎಸ್. ಪಾಳ್ಯಾದ ಬಾರ್ತಿಮೇಯಸ್ ಸೊಸೈಟಿ ಫಾರ್ ದಿ ಬ್ಲೈಂಡ್ ಸಂಸ್ಥೆಗೆ ಅನುದಾನ ನೀಡಲಾಗಿದ್ದು, ಒಟ್ಟು 25 ನವಚೇತನ ಕಾರ್ಯಕ್ರಮಗಳಿಗೆ ರು. 26.20 ಲಕ್ಷ ಮೊತ್ತವನ್ನು ವಿನಿಯೋಗಿಸಲಾಗಿದೆ.
ಇದರಿಂದಾಗಿ ಒಟ್ಟು 9,000 ಅಂಗವಿಕಲ ಮಕ್ಕಳು ಪ್ರಯೋಜನ ಪಡೆದಿದ್ದಾರೆ ಎಂದು ಸಮುದಾಯ ವಿಭಾಗದ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ.
ಬಿಡುಗಡೆಯ ಸಂದರ್ಭ ಶುಭೋದಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಡಾ.ಜಿ. ಬಾಲಾಜಿ, ಅಧ್ಯಕ್ಷ ವಿ. ಗೋಪಾಲಕೃಷ್ಣ, ಸಮುದಾಯ ಅಭಿವೃದ್ಧಿ ವಿಭಾಗದ ಅನುಷ್ಠಾನ ಅಧಿಕಾರಿ ಜಿ.ಗಣೇಶ್ ಭಟ್ ಮತ್ತು ಕಿರಿಯ ಅಭಿಯಂತರ ಪುಷ್ಪರಾಜ್ ಇದ್ದರು. ಈ ಧ್ವನಿತಟ್ಟೆಯ ಪ್ರಯೋಜನ ಪಡೆದುಕೊಳ್ಳುವವರು ಡಾ.ಜಿ. ಬಾಲಾಜಿ- 8050226670 ಅವರನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

