ದಕ್ಷಿಣ ಕನ್ನಡ

ಪೆರ್ನೆ ದುರಂತ; ಸಂತ್ರಸ್ತರಿಗೆ ಸಹಾಯ

Published On :

ಉಪ್ಪಿನಂಗಡಿ: ಮೂರು ತಿಂಗಳ ಹಿಂದೆ ಪೆರ್ನೆಯಲ್ಲಿ ಸಂಭವಿಸಿದ ಅನಿಲ ಟ್ಯಾಂಕರ್ ಅವಘಡದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ನಾಗರಿಕರ ಪರಿಹಾರ ಸಮಿತಿಯಿಂದ ಸಂಗ್ರಹಿಸಲಾದ 11,77,437 ಅನ್ನು ಭಾನುವಾರ ವಿತರಿಸಲಾಯಿತು. ಅನೇಕ ಮನೆ, ಅಂಗಡಿಗಳು ಭಸ್ಮವಾಗಿ 11 ಮಂದಿ ಬಲಿಯಾದ ಈ ದುರಂತದಿಂದ ಬದುಕಿನ ನೆಲೆ ಕಳೆದುಕೊಂಡ ಅದೆಷ್ಟೋ ಮಂದಿಯ ಬದುಕಿಗೆ ನೆರವು ನೀಡಬೇಕೆಂಬ ಉದ್ದೇಶದಿಂದ ನಾಗರಿಕ ಪರಿಹಾರ ಸಮಿತಿ ರಚನೆಗೊಂಡಿತು. ಪರಿಹಾರ ಸಮಿತಿ ಅಧ್ಯಕ್ಷರಾಗಿ, ವಿತರಣೆ ಕಾರ್ಯದ ನೇತೃತ್ವ ವಹಿಸಿದ್ದ ರೈ ಅಸೋಸಿಯೇಟ್ ಮಾಲೀಕ ಅಶೋಕ್ ಕುಮಾರ್ ರೈ ಮಾತನಾಡಿ, ಪೆರ್ನೆ ದುರಂತದಿಂದ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡು ಬದುಕನ್ನೇ ಕತ್ತಲೆಯಲ್ಲಿ ಕಳೆಯುತ್ತಿದ್ದ ಮಂದಿಯ ಬಾಳಿಗೆ ಬೆಳಕಾಗುವ ಅಗತ್ಯವಿತ್ತು. ಈ ಕಾರ್ಯವನ್ನು ಮಾಡಲು ಮುಂದೆ ಬಂದಿರುವ ಸಹೃದಯರ ಸ್ಪಂದನ ನಿಜಕ್ಕೂ ಮೆಚ್ಚುವ ಕಾರ್ಯ. ಈ ಸಾತ್ವಿಕ ಕಾರ್ಯದ ಫಲವಾಗಿ 11 ಲಕ್ಷಕ್ಕೂ ಹೆಚ್ಚು ಸಹಾಯಧನ ಸಂಗ್ರಹವಾಯಿತು ಎಂದರು.

'ಕುತಂತ್ರ ಮಾಡಿ ಶಿವಮೊಗ್ಗ ಒಡೆದರು'
ಶಿವಮೊಗ್ಗ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುತಂತ್ರ ರಾಜಕಾರಣ ಮಾಡಿ ಜಾತಿ ಹೆಸರಿನಲ್ಲಿ ಶಿವಮೊಗ್ಗವನ್ನು ಒಡೆದರು. ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವ ಪರಿಸ್ಥಿತಿ ತಂದಿಟ್ಟರು, ಜಾತಿಗಳ ನಡುವೆ ವಿಷಬೀಜ ಬಿತ್ತಿದರು. ಇದೀಗ ಎಲ್ಲರನ್ನೂ ಒಂದು ಮಾಡುವ ಕೆಲಸ ನಮ್ಮದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಇಲ್ಲಿನ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಡೆದ ಬಿಜೆಪಿ ಶಿವಮೊಗ್ಗ ನಗರ ಸಮಿತಿ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಯ ಶಕ್ತಿ ಈಗಲೂ ಕುಂದಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸೋಲು ಎಲ್ಲರಿಗೂ ಬೇಸರವಿದೆ. ಮತ್ತೆ ಪಕ್ಷವನ್ನು ಸಂಘಟಿಸೋಣ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.