ಮಂಡೆಕರ ಬಳಿ ಸೇತುವೆ ಕುಸಿತ: ಘನ ವಾಹನ ಸಂಚಾರ ಸ್ಥಗಿತ
ಉಪ್ಪಿನಂಗಡಿ: ಕಡಬ ಸಮೀಪದ ಸುಂಕದಕಟ್ಟೆ- ಕೊಂಬಾರು ರಸ್ತೆಯ ಮಂಡೆಕರ ಎಂಬಲ್ಲಿ ಸೇತುವೆಯು ಮಧ್ಯದಲ್ಲಿ ಕುಸಿತಗೊಂಡಿದ್ದು, ಇದರಿಂದಾಗಿ ಈ ರಸ್ತೆಯಲ್ಲಿ ಘನ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. 1988- 89ರಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಹತ್ತು ವರ್ಷಗಳ ಹಿಂದೆ ಕುಸಿತಕ್ಕೆ ಒಳಗಾಗಿ ದುರಸ್ತಿ ಮಾಡಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಸೇತುವೆಯು ಮಧ್ಯ ಭಾಗದಲ್ಲೇ ಕುಸಿತಗೊಂಡು ಬಿರುಕು ಬಿಟ್ಟಿದೆ. ಈ ರಸ್ತೆಯಲ್ಲಿ ಘನವಾಹನಗಳು ಸಂಚರಿಸುವುದರಿಂದ ಸೇತುವೆ ಇನ್ನಷ್ಟು ದುರ್ಬಲವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಂಗೆಟ್ಟ ಗ್ರಾಮಸ್ಥರು: ಕುಗ್ರಾಮವಾಗಿರುವ ಕೊಂಬಾರು ಪ್ರದೇಶದ ಜನತೆ ಈ ರಸ್ತೆಯನ್ನು ಬಳಸುತ್ತಿದ್ದು, ಕಳೆದ ಎರಡು ತಿಂಗಳ ಹಿಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸುಂಕದಕಟ್ಟೆಯಿಂದ ಕೊಂಬಾರುವರೆಗೆ ರಸ್ತೆಗೆ ಡಾಂಬರಿಕರಣ ಮಾಡಲಾಗಿತ್ತು. ಇದೀಗ ಸೇತುವೆ ಕುಸಿತದಿಂದ ಜನತೆ ಕಂಗೆಟ್ಟಿದ್ದಾರೆ. ನಾಗರಿಕರ ಮೂಲಭೂತ ಅವಶ್ಯಕತೆಯಾಗಿರುವ ಈ ಸೇತುವೆಯನ್ನು ಕೂಡಲೆ ದುರಸ್ತಿಪಡಿಸಬೇಕು ಎಂದು ಕೊಂಬಾರು ಗ್ರಾ.ಪಂ. ಸದಸ್ಯ ಮಾಯಿಲಪ್ಪ ಪೂಜಾರಿ, ಓಂ ಪ್ರಕಾಶ್ ಆಗ್ರಹಿಸಿದ್ದಾರೆ. ಕಡಬ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮಾರಿ ವಾಸುದೇವನ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಸೇತುವೆಯನ್ನು ಪರಿಶೀಲಿಸಿದರು. ಸಂಬಂಧಪಟ್ಟ ಇಲಾಖೆ ಎಂಜಿನಿಯರ್ ಅವರನ್ನು ಸಂಪರ್ಕಿಸಿ ತ್ವರಿತ ದುರಸ್ತಿಗೆ ನಿರ್ದೇಶನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

