ಮಲೆಕುಡಿಯರಿಗೆ ಉದ್ಯೋಗಕ್ಕೆ ವಿರೋಧ
ಮಂಗಳೂರು: ಆದಿವಾಸಿ ಬುಡಕಟ್ಟು ಕುಟುಂಬಗಳ ಯುವಕರನ್ನು ಗೃಹರಕ್ಷಕ ದಳಕ್ಕೆ ಸೇರಿಸುವ ಪೊಲೀಸರ ಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಡಿವೈಎಫ್‌ಐ ಖಂಡಿಸಿದೆ. ಈಗಾಗಲೇ 21 ಮಲೆಕುಡಿಯ ಯುವಕರನ್ನು ಗೃಹರಕ್ಷಕ ದಳಕ್ಕೆ ಸೇರಿಸಿಕೊಳ್ಳಲಾಗಿದ್ದು, ಮತ್ತಷ್ಟು ಯುವಕರನ್ನು ಸೇರಿಸಿಕೊಳ್ಳುವುದರಿಂದ ಪೊಲೀಸ್ ಮತ್ತು ಆದಿವಾಸಿಗಳ ನಡುವಿನ ಸಂಪರ್ಕ ಹೆಚ್ಚಾಗಲಿದೆ ಎಂಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಹೇಳಿಕೆಯನ್ನು ಡಿವೈಎಫ್‌ಐ ವಿರೋಧಿಸಿದೆ. ಗೃಹ ರಕ್ಷಕದಳ ಎಂಬುದು ಒಂದು ಉದ್ಯೋಗವೇ ಅಲ್ಲ. ಆ ಕೆಲಸದಲ್ಲಿ ನಿರಂತರತೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರಿಗೆ 300 ಕನಿಷ್ಠ ವೇತನ ಇರುವಾಗ 250 ನೀಡಿ ಗೃಹರಕ್ಷಕ ದಳಕ್ಕೆ ಸೇರಿಸಿಕೊಳ್ಳುತ್ತೇವೆ ಎಂಬುದು ಸಾಧನೆಯೇ ಅಲ್ಲ ಎಂದು ಡಿವೈಎಫ್‌ಐ ಟೀಕಿಸಿದೆ. ಮಲೆಕುಡಿಯರಿಗೆ ಈ ನೇಮಕದಲ್ಲಿ ವಿಶೇಷ ಪ್ರಾಶಸ್ತ್ಯ ನೀಡಿದ್ದೇವೆ ಎಂಬ ರೀತಿ ನಾಟಕವಾಡುವ ಎಸ್ಪಿ ತಮ್ಮ ನಾಟಕ ನಿಲ್ಲಿಸಬೇಕು. ಗೃಹರಕ್ಷಕ ದಳಕ್ಕೆ ಸೇರಲು ಯಾರಿಗೂ ಯಾವುದೇ ಶಿಫಾರಸುಗಳ ಅಗತ್ಯವಿಲ್ಲ. ಯಾವುದೇ ನಿರುದ್ಯೋಗಿಗಳು ಬೇಕಾದರು ಸೇರಬಹುದು ಎಂದಿದೆ. ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಮಲೆಕುಡಿಯ ಸಮುದಾಯದ ಮೇಲೆ ನಿಜವಾದ ಕಾಳಜಿಯಿದ್ದರೆ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಲೆಕುಡಿಯರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು, ವಿಠಲ ಮಲೆಕುಡಿಯರಂಥ ಉನ್ನತ ಶಿಕ್ಷಣ ಪಡೆಯುವ ಹಂಬಲವಿರುವ ಯುವಕರನ್ನು ಶಿಕ್ಷಣ ವಂಚಿತರಾಗಿ ಮಾಡುವ ಕೃತ್ಯ ನಿಲ್ಲಿಸಬೇಕು. ಇದನ್ನೆಲ್ಲ ಬಿಟ್ಟು ಮಲೆಕುಡಿಯರ ಭವಿಷ್ಯದ ಜತೆ ಚೆಲ್ಲಾಟವಾಡಬಾರದು ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

