ಶಂಕಿತ ಡೆಂಘೀ ಜ್ವರಕ್ಕೆ ಇಬ್ಬರು ಬಾಲಕಿಯರು ಬಲಿ
ಶ್ರೀರಂಗಪಟ್ಟಣ: ಶಂಕಿತ ಡೆಂಘೀ ಜ್ವರದಿಂದ ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗಂಜಾಂ ಮತ್ತು ಹಂಪಾಪುರ ಗ್ರಾಮಗಳಲ್ಲಿ ನಡೆದಿದೆ. ಗಂಜಾಂ ಗ್ರಾಮದ ಅಂಬೇಡ್ಕರ್ ರಸ್ತೆಯಲ್ಲಿ ವಾಸವಿದ್ದ ಕೌಸರ್ ಮತ್ತು ಚಾಂದ್ ಪಾಷರ ಪುತ್ರಿ ಕುಲ್ನಮ್ ಭಾನು(4), ತಾಲೂಕಿನ ಹಂಪಾಪುರ ಗ್ರಾಮದ ಸುರೇಶ್ ಮತ್ತು ವಸಂತ ದಂಪತಿಗಳ ಪುತ್ರಿ ಮಾನಸ (5) ಶಂಕಿತ ಡೆಂಘೀ ಜ್ವರದಿಂದ ಮೃತರಾದ ಬಾಲಕಿಯರು. ಕುಲ್ನಮ್ ಭಾನು ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮಾನಸ ಮೈಸೂರಿನ ಕೊಲಂಬಿಯ ಏಷಿಯಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ತೋಳ ದಾಳಿ: 22
ಕುರಿ ಮರಿ ಸಾವು
ಗದಗ: ದೊಡ್ಡಿಯಲ್ಲಿದ್ದ ಕುರಿಮರಿಗಳ ಮೇಲೆ ತೋಳ ದಾಳಿ ಮಾಡಿ 22 ಕುರಿಮರಿಗಳನ್ನು ಕೊಂದುಹಾಕಿದ ಘಟನೆ ಭಾನುವಾರ ಸಂಜೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಂಬಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕುರಿಮರಿಗಳು ಬೀರಪ್ಪ ಪೂಜಾರ ಹಾಗೂ ಶಿವಪುತ್ರಪ್ಪ ಕಾತರಕಿ ಎಂಬುವವರಿಗೆ ಸೇರಿದವು ಎನ್ನಲಾಗಿದ್ದು, ಭಾನುವಾರ ಸಂಜೆ ತೋಳ ದಾಳಿ ನಡೆಸಿದೆ.
ಸೋಮವಾರಪೇಟೆ ಪತ್ರಕರ್ತರ ಸಂಘ ಮಹಾಸಭೆ
ಸೋಮವಾರಪೇಟೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಇಲ್ಲಿನ ಪತ್ರಿಕಾ ಭವನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷ ಸಯ್ಯದ್ ಇರ್ಫಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪತ್ರಕರ್ತರ ಸಂಘದಿಂದ ವೀಕ್ಷಕರಾಗಿ ಆಗಮಿಸಿದ್ದ ಪಳೆಯಂಡ ಪಾರ್ಥ ಚಿಣ್ಣಪ್ಪ, ರಾಜ್ಯ ಸಂಘದ ನಿರ್ದೇಶಕ ಎಸ್. ಮಹೇಶ್, ತಾಲೂಕು ಸಂಘದ ಉಪಾಧ್ಯಕ್ಷ ಎಸ್.ಜಿ. ನರೇಶ್ವಂದ್ರ ಇದ್ದರು. ಸಂಘದ ಕಾರ್ಯದರ್ಶಿ ದಿನೇಶ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ವಿಜಯ್ ಹಾನಗಲ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

