3ರಂದು 'ವೃಕ್ಷ ಲಕ್ಷ ಆಂದೋಲನ' ಚಾಲನೆ
ಮಂಗಳೂರು: ಪ್ರತ್ಯೊಬ್ಬರಲ್ಲೂ ಪರಿಸರ ಸಂರಕ್ಷಣೆ ಕಾಳಜಿ ಹಾಗೂ ಸಸಿ ನೆಡುವ ಬಗ್ಗೆ ಅರಿವು ಮೂಡಿಸಲು ಆ.3ರಂದು ಮಂಗಳೂರಿನ ಪುರಭವನದಲ್ಲಿ ರಾಜ್ಯ ಮಟ್ಟದ 'ವೃಕ್ಷ ಲಕ್ಷ ಆಂದೋಲನ'ಕ್ಕೆ ಚಾಲನೆ ಸಿಗಲಿದೆ.
ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಇದಕ್ಕೆ ಚಾಲನೆ ನೀಡುವರು ಎಂದು ಜಿಲ್ಲಾಧಿಕಾರಿ ಪ್ರಕಾಶ್ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಇಲಾಖೆ ಸಭೆಯಲ್ಲಿ ಸೂಚನೆ ಹೇಳಿದ್ದಾರೆ.
ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ಹಾಗೂ ವಿವಿಧ ಕಂಪನಿಗಳ ಸಹಕಾರದಿಂದ ಐದಾರು ಸಾವಿರದಷ್ಟು ಸಸಿಗಳನ್ನು ನಡೆಲಾಗಿದ್ದು, ಸಸಿ ಬೆಳೆಸುವುದು ಅರಣ್ಯ ಇಲಾಖೆಯ ನಿರಂತರ ಕೆಲಸ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಓ.ಪಾಲಯ್ಯ ಮಾಹಿತಿ ನೀಡಿದರು. ಆ.3ರಂದು ಸಾವಿರದಷ್ಟು ಮಕ್ಕಳು, 500 ಮಂದಿ ಸಾರ್ವಜನಿಕರು ಹಾಗೂ ಗ್ರಾಮ ಅರಣ್ಯ ಸಮಿತಿಯವರು ಸಮಾರಂಭದಲ್ಲಿ ಭಾಗವಹಿಸುವರು ಎಂದು ಸಭೆಗೆ ತಿಳಿಸಲಾಯಿತು.
ಎನ್ಎಂಪಿಟಿಯವರು ಈಗಾಗಲೇ 20 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಎನ್ಎಸ್ಎಸ್ನಿಂದ ವಿವಿಯಲ್ಲಿ ಸಾವಿರದಷ್ಟು ಸಸಿ ನೆಡಲಾಗಿದೆ ಎಂದು ಎನ್ಎಸ್ಎಸ್ ಸಂಯೋಜಕಿ ವಿನಿತಾ ರೈ ತಿಳಿಸಿದರು. ಕಾರ್ಯಕ್ರಮದಲ್ಲಿ ಎಂಆರ್ಪಿಎಲ್, ಎಂಸಿಎಫ್, ಎಸ್ಇಝಡ್, ಎನ್ಎಸ್ಎಸ್, ಎನ್ಸಿಸಿ ಮಂದಿ ಭಾಗವಹಿಸುವರು.
ಅಪರ ಜಿಲ್ಲಾಧಿಕಾರಿ ದಯಾನಂದ್, ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪದ್ಮನಾಭ ಗೌಡ, ಆರ್ಎಫ್ಒ ಕ್ಲಿಫರ್ಡ್ ಲೋಬೋ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

