ನಕಲಿ ಪೊಲೀಸರಿಂದ ಇಬ್ಬರಿಗೆ ವಂಚನೆ
ಮಂಗಳೂರು: ನಗರದ ರಥಬೀದಿ ಹಾಗೂ ಲಾಲ್‌ಭಾಗ್‌ನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ನಕಲಿ ಪೊಲೀಸರಿಂದ ಇಬ್ಬರು ವಂಚನೆಗೀಡಾದ ಘಟನೆ ಗುರುವಾರ ನಡೆದಿದೆ.
ಕಾರ್‌ಸ್ಟ್ರೀಟ್ ಶಾಲಾ ಗೇಟಿನ ಬಳಿ ನಿಂತಿದ್ದ ಶಿಕ್ಷಕಿ ಬಳಿಗೆ ಬಂದ ಖಾಕಿ ದಿರಿಸು ಧಿರಿಸಿದ ನಕಲಿ ಪೊಲೀಸರು ನಿಮ್ಮ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಇನ್ಸ್‌ಪೆಕ್ಟರ್‌ರಲ್ಲಿ ಮಾತನಾಡಬೇಕು. ಬಸ್ ನಿಲ್ದಾಣಕ್ಕೆ ಬಂದು ಮಾತನಾಡಿ ಎಂದಿದ್ದರು. ಈ ಮಾತನ್ನು ನಂಬಿದ ಶಿಕ್ಷಕಿ ಅವರ ಜತೆ ಹೊರಡಲು ಮುಂದಾದರು. ಆಗ ಇನ್ನೊಬ್ಬ ಧರಿಸಿದ ಚಿನ್ನಾಭರಣ ನೀಡುವಂತೆ ಗದರಿಸಿದ ಎನ್ನಲಾಗಿದೆ. ಇದಕ್ಕೆ ಶಿಕ್ಷಕಿ ವಿರೋಧ ವ್ಯಕ್ತಪಡಿಸಿದಾಗ, ಆತ ಬಂಧಿಸುವ ಬೆದರಿಕೆ ಒಡ್ಡಿದ್ದ. ಇದರಿಂದ ಭೀತಿಗೊಂಡ ಶಿಕ್ಷಕಿ ತನ್ನಲ್ಲಿದ್ದ ಬಳೆ, ಕರಿಮಣಿ ಸರ ಸೇರಿದಂತೆ 109 ಗ್ರಾಂ ಚಿನ್ನಾಭರಣ ನೀಡಿದ್ದರು. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಅಧಿಕಾರಿಗೆ ವಂಚಿಸಿದರು: ಲಾಲ್‌ಭಾಗ್‌ನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಬ್ಯಾಂಕಿನ ನಿವೃತ್ತ ಅಧಿಕಾರಿ ಉಮೇಶ್ ರೆಡ್ಡಿ ಎಂಬವರಿಗೆ ನಕಲಿ ಪೊಲೀಸರು ವಂಚಿಸಿದ ಘಟನೆ ಸಂಭವಿಸಿದೆ.
ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ತೆರಳಿದ್ದಾಗ ಅಲ್ಲಿಗೆ ಬಂದ ಅಪರಿಚಿತ ಪೊಲೀಸ್ ವೇಷಧಾರಿಗಳು, ನಾವು ಪೊಲೀಸರು, ನೀವು ಇಂದಿನ ಪತ್ರಿಕೆಯಲ್ಲಿ ಇಲ್ಲಿ ಮಗುವಿನ ಕೊಲೆಯಾದ ವರದಿ ನೋಡಿದ್ದೀರಾ? ನೀವು ಚಿನ್ನಾಭರಣ ಧರಿಸಿ ಓಡಾಡುವಂತಿಲ್ಲ ಎಂದಿದ್ದರು. ಇದನ್ನು ನಂಬಿದ ಉಮೇಶ್ ರೆಡ್ಡಿ ಸರ ಮತ್ತು ಚಿನ್ನದ ಉಂಗುರವನ್ನು ತೆಗೆದು ಅವರ ಶರ್ಟ್ ಕಿಸೆಯಲ್ಲಿ ಹಾಕಿದ್ದರು. ಅದನ್ನು ಪ್ಯಾಂಟ್ ಕಿಸೆಯಲ್ಲಿ ಹಾಕುವಂತೆ ಸೂಚಿಸಿದ ಪೊಲೀಸರು ಬಳಿಕ ತಾವೇ ಒಂದು ಲಕೋಟೆಯಲ್ಲಿ ಪ್ಯಾಂಟ್ ಕಿಸೆಗೆ ಹಾಕಿದ್ದರು. ಸ್ವಲ್ಪ ಹೊತ್ತಿನಲ್ಲಿ ಲಕೋಟೆ ತೆರೆದು ನೋಡಿದಾಗ ಚಿನ್ನಾಭರಣ ಅದರಲ್ಲಿ ಇರಲಿಲ್ಲ. ಕಳವಾದ 35 ಗ್ರಾಂ ಸೊತ್ತಿನ ಮೌಲ್ಯ ರು. 90 ಸಾವಿರ ಎನ್ನಲಾಗಿದೆ. ಬರ್ಕೆ ಪೊಲೀಸರಿಗೆ ದೂರು ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

