ದಕ್ಷಿಣ ಕನ್ನಡ

ಕಟೀಲು ದೇವಿಗೆ ತಿಂಗಳೊಂದರಲ್ಲೇ 3,500 ಹರಕೆ ಸೀರೆ ಸಮರ್ಪಣೆ

Published On :

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮೇ ತಿಂಗಳೊಂದರಲ್ಲೇ 3,500 ಸೀರೆ ಭಕ್ತರಿಂದ ಹರಕೆ ರೂಪದಲ್ಲಿ ಸಲ್ಲಿಕೆಯಾಗಿದ್ದು,   ಒಂದು ದಿನದಲ್ಲಿ 260 ಸೀರೆ ಅರ್ಪಣೆಯಾಗಿ ದಾಖಲೆಯಾಗಿದೆ.  ದೇವಳದಲ್ಲಿ ಶ್ರಾವಣ ಮಾಸ ಹಾಗೂ ಅಕ್ಷಯ ತದಿಗೆ ಬರುವಂತಹ ಮೇ ತಿಂಗಳಿನಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೀರೆಯನ್ನು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ, ಮದುವೆ, ಆರೋಗ್ಯ ಮತ್ತಿತರ ಕಾರಣಗಳಿಗಾಗಿ ಹರಕೆ ರೂಪದಲ್ಲಿ ನೀಡುತ್ತಾರೆ.
ವರ್ಷಕ್ಕೆ 20 ಸಾವಿರದಷ್ಟು ಸೀರೆ: ವರ್ಷಕ್ಕೆ ಸುಮಾರು 18,000 ದಿಂದ 20,000 ದಷ್ಟು ಸೀರೆಗಳು ಹರಕೆಯ ರೂಪದಲ್ಲಿ ಬರುತ್ತದೆ. ಈ ಸೀರೆಗಳನ್ನು ರಂಗ ಪೂಜೆ, ಮಹಾ ಅನ್ನಸಂತರ್ಪಣೆ ಹಾಗೂ ವಿಶೇಷ ಸೇವೆ ಸಲ್ಲಿಸಿದ ಭಕ್ತರಿಗೆ ಮತ್ತು ದೇವಳಕ್ಕೆ ಬರುವ ಅತಿ ಗಣ್ಯ ವ್ಯಕ್ತಿಗಳಿಗೆ, ಕಟೀಲು ಮೇಳದಲ್ಲಿ ಬಳಸಲು ಮತ್ತು ನವರಾತ್ರಿಯ ಲಲಿತಾ ಪಂಚಮಿಯಂದು ಮಹಿಳೆ ಮತ್ತು ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.