ಶಾಲೆಯಲ್ಲಿ ತುಳು ಕಲಿಕೆಗೆ ಒತ್ತು
ಮಂಗಳೂರು: ಶಾಲೆಯಲ್ಲಿ ತುಳು ಕಲಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಸಂಘ ಸಂಸ್ಥೆಗಳು, ಹೆತ್ತವರು ಇದಕ್ಕೆ ಒತ್ತು ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದ್ದಾರೆ.
ಅವರು ಗುರುವಾರ ಮಂಗಳೂರು ಪುರಭವನದಲ್ಲಿ 'ದಿ ಟೈಮ್ಸ್ ಆಫ್ ಕುಡ್ಲ' ತುಳು ವಾರ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಪಂಚದ್ರಾವಿಡ ಭಾಷೆಗಳಲ್ಲಿ ತುಳು ಒಂದು. ಸುಮಾರು ಒಂದು ಕೋಟಿ ತುಳುವರಿದ್ದು, ತುಳು ವಿಚಾರಕ್ಕೆ ಬಂದಾಗ ತುಳುವರು ಗರಂ ಆಗಬೇಕು. ಯಾವುದೇ ಭಾಷೆ ಕಲಿಯಲಿ ಮನೆಯಲ್ಲಿ ತುಳು ಮಾತನಾಡಬೇಕು ಎಂದು ಹೇಳಿದರು.
ಶಾಸಕ ಜೆ.ಆರ್. ಲೋಬೋ ಮಾತನಾಡಿ, 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಗೆ ಪ್ರಯತ್ನಿಸುವುದಾಗಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ. ತುಳು ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಈ ಪತ್ರಿಕೆ ನೆರವಾಗಬೇಕಿದ್ದು, ಇದನ್ನು ಪೋಷಿಸುವ ಕೆಲಸವಾಗಬೇಕು. ಸಮಾಜವನ್ನು ರೂಪಿಸುವ ಜವಾಬ್ದಾರಿ ಪತ್ರಿಕೆಗಳ ಮೇಲಿದ್ದು, ಇದು ದಿನಪತ್ರಿಕೆಯಾಗಿ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನವನೀತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪುತ್ತೂರು ತುಳು ಕೂಟ ಅಧ್ಯಕ್ಷ ಕುಂಬ್ರ ದುರ್ಗಾ ಪ್ರಸಾದ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಹಿರಿಯ ಪತ್ರಕರ್ತ ಸರ್ವೋತ್ತಮ ಅಂಚನ್, ಪತ್ರಿಕೆ ಪ್ರಧಾನ ಸಂಪಾದಕ ವಾಮನ ಇಡ್ಯಾ ಹಾಜರಿದ್ದರು.
--
ಹಾಸ್ಯ ಸ್ಪರ್ಧೆ: ತೀರ್ಪುಗಾರರಾಗಿ ಇಂದು ಡೀವಿ, ನಳಿನ್
ಮಂಗಳೂರು: ಬಡಗಎಡಪದವಿನ ಶ್ರೀಭೂತನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 'ಬಲೆ ತೆಲಿಪಾಲೆ' ಹಾಸ್ಯ ಸ್ಪರ್ಧೆ ಸಮಾರೋಪ ಜೂ.21ರಂದು ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಆಡಿಷನ್ನಲ್ಲಿ ಗಣ್ಯ ತೀರ್ಪುಗಾರರಾಗಿ ಆಗಮಿಸುವರು.
ರಾತ್ರಿ 7.30ಕ್ಕೆ ನಮ್ಮ ಟಿವಿ ಸಹಯೋಗದಲ್ಲಿ ಟಿವಿ ಕಾರ್ಯಕ್ರಮ ಸೆಟ್ನಲ್ಲಿ ಆಡಿಷನ್ ನಡೆಯಲಿದ್ದು, ಸ್ಪರ್ಧಿಗಳು ತಮಗೆ ನೀಡುವ 5 ನಿಮಿಷದಲ್ಲಿ ಹಾಸ್ಯ ಪ್ರತಿಭೆಯನ್ನು ಪ್ರೇಕ್ಷಕರ ಮುಂದಿಡಬೇಕು.
ಸ್ಪರ್ಧಿಗಳ ಜತೆ ಡೀವಿ ಹಾಗೂ ನಳಿನ್ ಮಾತನಾಡಿ ವಿನೋದಮಯ ಪ್ರತಿಕ್ರಿಯೆ ನೀಡುವರು. ಈ ಕಾರ್ಯಕ್ರಮದ ರಸನಿಮಿಷ ಪ್ರತಿ ರಾತ್ರಿ 10ರಿಂದ 10.30ರ ವರೆಗೆ ನಮ್ಮ ಟಿವಿಯಲ್ಲಿ ಪ್ರಸಾರವಾಗುತ್ತದೆ. ಕಳೆದ 2 ತಿಂಗಳಿಂದ ಆಡಿಷನ್ ಕ್ವಾರ್ಟರ್ ಫೈನಲ್ಗಾಗಿ ನಡೆಯುತ್ತಿದೆ. 33 ತಂಡಗಳು ಪಾಲ್ಗೊಳ್ಳುತ್ತಿದ್ದು, ಅಂತಿಮ ಸ್ಪರ್ಧೆಯಲ್ಲಿ 16 ತಂಡ ಭಾಗವಹಿಸುತ್ತಿದೆ ಎಂದು ಸಂಘಟಕ ವಿಜಯನಾಥ ವಿಠಲ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

