ಯಕ್ಷಗಾನ ಕಲಾವಿದ ಶೀನಪ್ಪ ಭಂಡಾರಿ ನಿಧನ
ಪುತ್ತೂರು: ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ, ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ಸಂಘಟಕ, ತಾಲೂಕಿನ ಬನ್ನೂರು ನಿವಾಸಿ ಶೀನಪ್ಪ ಭಂಡಾರಿ (91) ಅವರು ಸೋಮವಾರ ರಾತ್ರಿ ನಿಧನರಾದರು.
ಅವರಿಗೆ ಯಕ್ಷಗಾನ ಕಲಾವಿದರಾದ ಶ್ರೀಧರ್ ಭಂಡಾರಿ, ಗಂಗಾಧರ ಭಂಡಾರಿ, ಶೇಖರ್ ಭಂಡಾರಿ ಸೇರಿ ಐವರು ಪುತ್ರರು ಹಾಗೂ ಏಳು ಪುತ್ರಿಯರು ಇದ್ದಾರೆ.
ಅರ್ಧ ಶತಮಾನಗಳಿಗೂ ಅಧಿಕ ಕಾಲ ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಶೀನಪ್ಪ ಭಂಡಾರಿಯವರು ಯಕ್ಷಗಾನ ಕಲಾವಿದರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸ್ತ್ರೀ ಪಾತ್ರದಿಂದ ಹಿಡಿದು ಬಣ್ಣದ ವೇಷದ ತನಕದ ಎಲ್ಲ ಪ್ರಕಾರಗಳನ್ನು ನಿಭಾಯಿಸಿದ ಅನುಭವಿ ಕಲಾವಿದರಾಗಿ ಚಿರಪರಿಚಿತರಾಗಿದ್ದರು.
ಕದ್ರಿ ಮೇಳ, ಮೂಲ್ಕಿ ಮೇಳ, ಧರ್ಮಸ್ಥಳ ಮೇಳದಲ್ಲಿ ಅನುಭವ ಸಂಪಾದಿಸಿ ಪುಂಡು ವೇಷಧಾರಿಯಾಗಿ ಮಿಂಚಿದ್ದ ಶೀನಪ್ಪ ಭಂಡಾರಿಯವರು ಸ್ತ್ರೀ ಪಾತ್ರಕ್ಕೂ ಸೈ ಎನಿಸಿದ್ದರು. 1950ರ ದಶಕದಲ್ಲಿ ಬಳ್ಳಂಬೆಟ್ಟು ಶಾಸ್ತಾರ ಮೇಳವನ್ನು ಸಂಘಟಿಸಿ 8 ವರ್ಷಗಳ ಕಾಲ ಮುನ್ನಡೆಸಿದ್ದರು. ಮತ್ತೆ ಧರ್ಮಸ್ಥಳ ಮೇಳಕ್ಕೆ ಸೇರಿ ಮುಖ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಯಕ್ಷಗಾನದ ನಾನಾ ಪ್ರಕಾರಗಳಲ್ಲಿ ತನ್ನ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದ ಅವರು ಇತ್ತೀಚಿನ ಕೆಲ ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಕಲಾ ಕ್ಷೇತ್ರದಿಂದ ದೂರ ಉಳಿದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

