ದಕ್ಷಿಣ ಕನ್ನಡ

ಅಮೆರಿಕ ಶಿಕ್ಷಣ ಅವಕಾಶಕ್ಕೆ ನೆರವು: ಜೂಡಿ ರೆಂಕಿ ಮಾಹಿತಿ

Published On :

ಕ.ಪ್ರ. ವಾರ್ತೆ, ಮಂಗಳೂರು, ಮಾ. 1-
ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಅಮೆರಿಕ-ಭಾರತ ಶಿಕ್ಷಣ ಪ್ರತಿಷ್ಠಾನದ ಮೂಲಕ ನೆರವು ನೀಡಲಾಗುವುದು ಎಂದು ಅಮೆರಿಕದ ವಾಣಿಜ್ಯ ಸೇವಾ ಕಾನ್ಸುಲರ್ ಜೂಡಿ ರೆಂಕಿ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಚೆನ್ನೈ ಅಮೆರಿಕ ಕಾನ್ಸುಲೇಟ್ ಕಚೇರಿ ವತಿಯಿಂದ ನಡೆಯುವ ಎರಡು ದಿನದ 'ಅಮೆರಿಕನ್ ಎಕ್ಸ್‌ಪೀರಿಯನ್ಸ್‌' ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕದ ಸ್ಥಿತಿಗತಿ, ಉನ್ನತ ಶಿಕ್ಷಣದ ಅವಕಾಶ, ಸ್ಕಾಲರ್‌ಶಿಪ್‌ಗಳ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.
ಭಾರತದಿಂದ ಸುಮಾರು ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಈಗಾಗಲೇ ಅಮೆರಿಕದ ವಿವಿಧ ವಿಶ್ವವಿದ್ಯಾಲಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿ ವೀಸಾ ಕೂಡ ಸರಳೀಕರಣಗೊಳಿಸಲಾಗಿದೆ.
ಅಮೆರಿಕದ ಸ್ಥಿತಿಗತಿಗಳು, ರಾಜಕೀಯ ಮೌಲ್ಯಗಳು, ಅಲ್ಲಿನ ವ್ಯವಹಾರಗಳ ಶೈಲಿ ಇವುಗಳೆಲ್ಲವನ್ನೂ ತಿಳಿದುಕೊಳ್ಳುವ ಸಲುವಾಗಿ ಅಮೆರಿಕ ಗ್ರಂಥಾಯದ ವ್ಯವಸ್ಥೆ ಮಾಡಲಾಗಿದೆ. ಇದು ಆನ್‌ಲೈನ್ ವ್ಯವಸ್ಥೆಯಾಗಿದ್ದು, ನೋಂದಾವಣೆಗೊಂಡವರು ಪುಸ್ತಕದ ಬಗ್ಗೆ ಸಂದೇಶ ಕಳುಹಿಸಿದರೆ ಕೊರಿಯರ್ ಮೂಲಕ ಕಳುಹಿಸಲಾಗುತ್ತದೆ. 15 ದಿನದ ನಂತರ ಕೊರಿಯರ್ ಮೂಲಕ ಪುಸ್ತಕವನ್ನು ವಾಪಸ್ ಕಳುಹಿಸದರೆ ಸಾಕು ಎಂದು ವಿವರಿಸಿದರು.

'ಅಮೆರಿಕ ಬ್ಯುಸಿನೆಸ್ ಕಾರ್ನರ್'
ಮಂಗಳೂರು:
ಅಮೆರಿಕ-ಭಾರತದ ನಡುವಿನ ವ್ಯಾಪಾರ ವಹಿವಾಟು ವೃದ್ಧಿಸಲು ಅಮೆರಿಕ ಆಸಕ್ತಿ ವಹಿಸಿದ್ದು, ಅವಕಾಶ ಮತ್ತು ಮಾಹಿತಿ ವಿನಿಮಯಕ್ಕೆ ಬ್ಯುಸಿನೆಸ್ ಕಾರ್ನರ್ ನೆರವಾಗಲಿದೆ ಎಂದು ಅಮೆರಿಕದ ವಾಣಿಜ್ಯ ಸೇವಾ ಕಾನ್ಸುಲರ್ ಜೂಡಿ ರೆಂಕಿ ಹೇಳಿದ್ದಾರೆ. ಶುಕ್ರವಾರ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ 'ಬ್ಯುಸಿನೆಸ್ ಕಾರ್ನರ್ ಘಟಕ' ಉದ್ಘಾಟಿಸಿ ಮಾತನಾಡಿದರು. ವ್ಯಾವಹಾರಿಕ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿವಿಧ ವಾಣಿಜ್ಯ ಸಂಘ ಸಂಸ್ಥೆಗಳಿಗೆ ಭೇಟಿ ಮಾಡಿ ವಿಶೇಷ ಸಮಿತಿ ರಚಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.