ಚುನಾವಣೆ ನೀತಿಸಂಹಿತೆ ರಗಳೆಗಳು...
ಮಂಗಳೂರು: ಚುನಾವಣೆ ನೀತಿ ಸಂಹಿತೆ ವಿಚಾರಗಳೇ ಮತಗಟ್ಟೆಗಳ ಬಳಿ ಗೊಂದಲದ ವಾತಾವರಣ ಕ್ಕೆ ಕಾರಣವಾಗಿದೆ.
ಸೇಂಟ್ ಆಗ್ನೆಸ್ ಕಾಲೇಜು ಗೇಟ್ ಬಳಿ ಒಳಗೆ ರಾಜಕೀಯ ಪಕ್ಷಗಳು ಬೂತ್ ನಿರ್ಮಿಸಿವೆ ಎಂಬ ಕಾರಣಕ್ಕೆ ಚುನಾವಣೆ ಅಧಿಕಾರಿ ಸೂಚನೆ ಮೇರೆಗೆ ನಗರ ಎಸಿಪಿ ಕವಿತಾ ನೇತೃತ್ವದಲ್ಲಿ ಪೊಲೀಸರು ಬೂತ್‌ಗಳನ್ನು ತೆಗೆಸಿದ್ದಾರೆ. ಆದರೆ ಸರಿಯಾದ ಫುಟ್ ಪಾತ್‌ಇಲ್ಲದೆ ರಸ್ತೆಯಲ್ಲಿಯೇ ಬೂತ್ ಹಾಕಿದರು.
ಮತಗಟ್ಟೆಯಿಂದ 200 ಮೀಟರ್ ದೂರ ಎಂದರೆ ಮತದಾರರಿಗೆ ಬೂತ್‌ಗಳು ಇರುವುದೇ ಗೊತ್ತಾಗುವುದಿಲ್ಲ. ಆದ್ದರಿಂದ ಗೇಟ್ ಬಳಿಯೇ ಬೂತ್ ಮಾಡಿಸುವಂತೆ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಎಸಿಪಿ ಬಳಿ ವಿನಂತಿಸಿದರು. 'ನಾವು ಭದ್ರತೆ ಒದಗಿಸುವುದು ಮಾತ್ರ, ಏನಿದ್ದರೂ ಮತಗಟ್ಟೆ ಅಧಿಕಾರಿಯೇ ತೀರ್ಮಾನ ತೆಗೆದುಕೊಳ್ಳಬೇಕು' ಎಂದು ಎಸಿಪಿ ಕವಿತ ವಿವರಿಸಿದರು.
ಮತಗಟ್ಟೆ ಅಧಿಕಾರಿ ಎಚ್.ಜಿ. ಲತಾ ತಕ್ಷಣ ಚುನಾವಣೆ ವೀಕ್ಷ ಎ.ಕೆ.ಪೊನ್ನಪ್ಪ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದರು. ಬಳಿಕ ಗೇಟ್ ಬಳಿ ಬೂತ್‌ಗಳಿಂದಾಗಿ ಗದ್ದಲ ಉಂಟಾಗುವ ಸಾಧ್ಯತೆ ಇದೆ. ಗೇಟ್‌ನಿಂದ 30 ಮೀಟರ್ ದೂರದಲ್ಲಿ ಬೂತ್ ಅನುಮತಿ ನೀಡಿದರು.
ಚಿಹ್ನೆ ರಗಳೆ: ನೂರು ಮೀಟರ್ ದೂರದಲ್ಲಿ ರಾಜಕೀಯ ಪಕ್ಷಗಳು ಬೂತ್ ಮಾಡುವಂತಿಲ್ಲ, ಚುನಾವಣೆ ಚಿಹ್ನೆಗಳು ಇರುವಂತಿಲ್ಲ ಎನ್ನುವುದು ನಿಯಮ. ಆದರೆ ನಗರ ಪ್ರದೇಶದಲ್ಲಿ ನೂರು ಮೀಟರ್ ದೂರ ಎಂದರೆ ಬೀದಿಗಳೇ ಬದಲಾಗುತ್ತದೆ ! ಶಾಲೆಯೊಳಗೆ ಫ್ಯಾನ್‌ಗಳಿರುತ್ತವೆ. ಮತಗಟ್ಟೆ ಶಾಲೆ ಬಳಿಯೇ ರಿಕ್ಷಾ ನಿಲ್ದಾಣಗಳಿರುತ್ತವೆ. ಹೊಯ್ಗೆ ಬಜಾರ್ ಮತಗಟ್ಟೆ ಬಳಿ ಕೇವಲ 20 ಮೀಟರ್ ದೂರದಲ್ಲಿಯೇ ಜನ ನಿಬಿಡ ರಸ್ತೆ ಇದೆ. 50 ಮೀಟರ್ ದೂರದಲ್ಲಿ ರಿಕ್ಷಾ ತಂಗುದಾಣ ಇದೆ. ಅಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರ ಚುನಾವಣೆ ಚಿಹ್ನೆ ಆಟೋ ರಿಕ್ಷಾ ! ಹಾಗೆಂದು ನಿಲ್ದಾಣಮತ್ತು ರಸ್ತೆಯಲ್ಲಿ ರಿಕ್ಷಾಕ್ಕೆ ಪ್ರವೇಶ ನಿರ್ಬಂಧಿಸಿರಲಿಲ್ಲ !
ಭದ್ರತೆಯೂ ಅಷ್ಟಕಷ್ಟೆ: ಮತಗಟ್ಟೆ ಪ್ರದೇಶದಲ್ಲಿ ಎಲ್ಲರೂ ಮೊಬೈಲ್ ಬಳಸುತ್ತಿದ್ದರು. ಮತದಾರರು ಬೆನ್ನಲ್ಲಿ ದೊಡ್ಡ, ದೊಡ್ಡ ಬ್ಯಾಗ್ ಹಾಕಿಕೊಂಡೇ ಮತದಾನ ಮಾಡಲು ಹೋಗುತ್ತಿದ್ದರೂ ಯಾರೂ ತಪಾಸಣೆ ಮಾಡಿದ್ದು ಕಂಡು ಬರಲಿಲ್ಲ. ಅಂಗವಿಕಲರಿಗೆ ಶೀಘ್ರ ಮತದಾನ ಮಾಡಲು ಎಲ್ಲೆಡೆ ವ್ಯವಸ್ಥೆ ಮಾಡಿರಲಿಲ್ಲ.
ಮುಕ್ಕಚ್ಚೇರಿ ವಾರ್ಡ್ ಬಳಿ ಪ್ರಚಾರ ಮಾಡುತ್ತಿದ್ದ ಜೆಡಿಎಸ್, ಕಾಂಗ್ರೆಸ್ ನಡುವೆ ಮಾತಿನ ಸಮರ ನಡೆದಾಗ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ಬೀಸಿ ಚದುರಿಸಿದರು.
ಬೂತ್‌ಗಳಲ್ಲಿ ರಾಜಕೀಯ ಪಕ್ಷಗಳು ಚುನಾವಣೆ ಚಿಹ್ನೆ ಬಳಕೆ ಇಲ್ಲ. ಆದರೆ ಉಳ್ಳಾಲ ಪುರಸಭೆ ವಾರ್ಡ್‌ಗಳ ಬೂತ್‌ಗಳಲ್ಲಿ ನಿರ್ಬಂಧ ಸಡಿಸಲವಾಗಿತ್ತು. ಅಲ್ಲಲ್ಲಿ ರಾಜಕೀಯ ಧ್ವಜ, ಬಾವುಟಗಳು ರಾರಾಜಿಸುತ್ತಿದ್ದವು.
ಸಿಪಿಎಂ ಪ್ರತಿಭಟನೆ: ಜೆಪ್ಪಿನಮೊಗರು ವಾರ್ಡ್‌ನಲ್ಲಿ ಸಂಜೆ 4ರ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಿಪಿಎಂ ಕಾರ್ಯಕರ್ತರು ಘೋಷಣೆ ಕೂಗಿದರು.
ಕಾಂಗ್ರೆಸ್ ಕಾರ್ಯಕರ್ತರು ಬಸ್‌ಗಳಲ್ಲಿ, ವಾಹನಗಳಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತರುತ್ತಿದ್ದಾರೆ ಎಂಬುದು ಸಿಪಿಎಂ ಆರೋಪ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗದಿದ್ದಾರೆ ಸಂಜೆ 4ಕ್ಕೆ ವಾಹನ ತಡೆದು ಪ್ರತಿಭಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

