ಬಂಟ್ವಾಳ ಪುರಸಭೆ 'ಕೈ'ವಶ: ಎಸ್ಡಿಪಿಐ, ಜೆಡಿಎಸ್ಗೆ ಖಾತೆ
ಬಂಟ್ವಾಳ: ಭಾರಿ ಕುತೂಹಲ ಮೂಡಿಸಿದ್ದ ಬಂಟ್ವಾಳ ಪುರಸಭಾ ಚುನಾವಣೆಯಲ್ಲಿ 23 ಸ್ಥಾನಗಳ ಪೈಕಿ 13 ಸ್ಥಾನ ಗೆದ್ದಿರುವ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಆಡಳಿತ ಕೈವಶ ಮಾಡಿಕೊಂಡಿದೆ.
ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಕೇವಲ 5 ಸ್ಥಾನ ಗಳಿಸುವುದರೊಂದಿಗೆ ಸಂಪೂರ್ಣ ಬಲ ಕಳೆದುಕೊಂಡಿದ್ದು, ಮತದಾರ ನೀಡಿದ ಶಾಕ್ಗೆ ಒಳಗಾಗಿದೆ. ಮೊದಲ ಬಾರಿಗೆ ಬಂಟ್ವಾಳ ಪುರಸಭೆಯ 12 ಸ್ಥಾನಗಳಿಗೆ ಸ್ಪರ್ಧಿಸಿದ್ದ ಎಸ್ಡಿಪಿಐ ಮೂರು ಸ್ಥಾನಗಳಲ್ಲಿ ಗೆಲವು ಸಾಧಿಸಿ ದಾಖಲೆ ನಿರ್ಮಿಸಿದ್ದರೆ, ಜೆಡಿಎಸ್ ಒಂದು ಸ್ಥಾನ ಗೆದ್ದು ಖಾತೆ ತೆರೆದಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಒರ್ವ ಪಕ್ಷೇತರ ಅಭ್ಯರ್ಥಿ ಅನಿರೀಕ್ಷಿತವೆಂಬಂತೆ ಜಯ ಸಾಧಿಸಿದ್ದಾರೆ. ಉಳಿದಂತೆ ಕೆಜೆಪಿ, ಸಿಪಿಐ, ಸಿಪಿಎಂ ಹಾಗೂ ಕಳೆದ ಬಾರಿ ಎರಡು ಸ್ಥಾನ ಗೆದ್ದುಕೊಂಡಿದ್ದ ಮುಸ್ಲಿಂ ಲೀಗ್ ಈ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದೆ.
ಗೆಲವು ಸಾಧಿಸಿದವರು: ಕಾಂಗ್ರೆಸ್ ಪಾಳಯ: 1- ವಾಸು ಪೂಜಾರಿ, 2- ಗಂಗಾಧರ, 3-ವಸಂತಿ ಸಿ., 8-ಜಗದೀಶ ಕುಂದರ್, 11- ಸದಾಶಿವ ಬಂಗೇರ, 14- ಮಹಮ್ಮದ್ ನಂದರಬೆಟ್ಟು, 15-ಯಾಸ್ಮೀನ್, 16-ಮೊಹಮ್ಮದ್ ಶರೀಫ್, 18- ಪ್ರಭಾ ಆರ್.ಸಾಲ್ಯಾನ್, 19- ರಾಮಕೃಷ್ಣ ಆಳ್ವ, 20- ಚಂಚಲಾಕ್ಷಿ, 21-ಸಂಜೀವಿ, 23-ಜೆಸಿಂತಾ
ಬಿಜೆಪಿ ಪಾಳಯ: ವಾರ್ಡ್ 4- ದೇವದಾಸ್ ಶೆಟ್ಟಿ, 6- ಗೋವಿಂದ ಪ್ರಭು, 9- ಭಾಸ್ಕರ ಟೈಲರ್, 13- ಸುಗುಣ ಕಿಣಿ, 22- ಸಂಧ್ಯಾನಾಯ್ಕ್. ಎಸ್ಡಿಪಿಐ ಪಾಳಯ: ವಾರ್ಡ್ 7-ಮಾನೀಶ್ ಅಲಿ ಮೊಹಮ್ಮದ್, 12- ಇಕ್ಬಾಲ್, 17- ಮುಮ್ತಾಝ್, ಜೆಡಿಎಸ್: ವಾರ್ಡ್ 10- ಬಿ.ಮೋಹನ್, ಪಕ್ಷೇತರ: ವಾರ್ಡ್ 5- ಪ್ರವೀಣ್ ಬಿ.
ನಿಕಟಪೂರ್ವ ಅಧ್ಯಕ್ಷಗೆ ಸೋಲು...: ಪುರಸಭೆಯ ನಿಕಟಪೂರ್ವ ಅಧ್ಯಕ್ಷ ದಿನೇಶ್ ಭಂಡಾರಿ 5ನೇ ವಾರ್ಡ್ನಲ್ಲಿ ಅನಿರೀಕ್ಷಿತ ಸೋಲು ಕಂಡಿದ್ದಾರೆ. ಈ ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪ್ರವೀಣ್ ಹಾಗೂ ದಿನೇಶ್ ಭಂಡಾರಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟು ಪುರಸಭಾ ವ್ಯಾಪ್ತಿಯಲ್ಲಿಯೇ ಹೆಚ್ಚಿನ ಕುತೂಹಲದ ಕಣವಾಗಿತ್ತು. ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವುದರೊಂದಿಗೆ ಇಲ್ಲಿ ಕಾಂಗ್ರೆಸ್ ಹೆಣೆದಿದ್ದ ಕಾರ್ಯತಂತ್ರ ಗೆದ್ದಿದೆ. ಕಳೆದ ಅವಧಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದು ಜನಮನ್ನಣೆ ಗಳಿಸಿದ್ದ ದಿನೇಶ್ ಭಂಡಾರಿ ಸೋಲು ಪಕ್ಷದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಆಘಾತ ತಂದಿದೆ.
6ನೇ ಬಾರಿ ಗೆಲವು: ಬಂಟ್ವಾಳ ಪುರಸಭೆಯ ಇತಿಹಾಸದಲ್ಲೇ ಗೋವಿಂದ ಪ್ರಭು ನಿರಂತರವಾಗಿ ಆರು ಬಾರಿ ಗೆಲವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರನಾಗಿ ಗಮನ ಸೆಳೆದಿದ್ದಾರೆ. ವಾರ್ಡ್ ಸಂಖ್ಯೆ 6ರಲ್ಲಿ ಎರಡನೇ ಬಾರಿಗೆ ಆಯ್ಕೆಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

