ಬೆಳ್ತಂಗಡಿ: ವಿವಿಧ ಕಾಮಗಾರಿಗೆ ಶಾಸಕ ಬಂಗೇರ ಚಾಲನೆ
ಬೆಳ್ತಂಗಡಿ : ರಾಜ್ಯದ ಬಿಜೆಪಿ ಸರ್ಕಾರ ತಾಲೂಕಿಗೆ ವಿವಿಧ ಯೋಜನೆಗಳಡಿಯಲ್ಲಿ ಮಂಜೂರು ಮಾಡಿದ ರು. 67 ಲಕ್ಷ ಅನುದಾನದ ನೆರವಿನಿಂದ ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ, ಕಾಂಕ್ರಿಟೀಕರಣ ಮುಂತಾದ ಕಾಮಗಾರಿಗಳಿಗೆ ಶಾಸಕ ಕೆ. ವಸಂತ ಬಂಗೇರ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕಲ್ಯಾಣ ಇಲಾಖೆ ಎಸ್.ಸಿ.ಪಿ. ಯೋಜನೆಯಡಿ ಮಾಲಾಡಿ ಗ್ರಾಮದ ಕಜೆ ಪ. ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ ರು. 6.34 ಲಕ್ಷ, ಓಡಿಲ್ನಾಳ ಗ್ರಾಮ ಬದ್ರಕಜೆ ಪ.ಪಂ. ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ ರು. 5.70 ಲಕ್ಷ, ನಾವೂರು ಗ್ರಾಮದ ಕಿರ್ನಡ್ಕ ಪ.ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ 5.05 ಲಕ್ಷ, ಮಲೆನಾಡು ವಿಶೇಷ ಘಟಕ ಯೋಜನೆಯಡಿ ಕಡಿರುದ್ಯಾವರ ಗ್ರಾಮದ ಎರ್ಮಾಲ ಪಲ್ಕೆ ಅಡ್ಕದ ಕೆರೆ ರಸ್ತೆ ಡಾಂಬರೀಕರಣಕ್ಕೆ ರು. 6 ಲಕ್ಷ, ಮಲೆನಾಡು ಸಾಮಾನ್ಯ ಯೋಜನೆಯಡಿ ತೋಟತ್ತಾಡಿ ಗ್ರಾಮದ ಗುತ್ತು ಎಂಬಲ್ಲಿ ಕಿರುಸೇತುವೆ ರಚನೆಗೆ ರು. 5 ಲಕ್ಷ, ಪುದುವೆಟ್ಟು ಗ್ರಾಮದ ಮೇಲಿನಡ್ಕ- ಬೊಳ್ಮನಾರು ರಸ್ತೆ ಡಾಂಬರೀಕರಣಕ್ಕೆ ರು. 5 ಲಕ್ಷ, ಮಲೆನಾಡು ವಿಶೇಷ ಘಟಕ ಯೋಜನೆಯಡಿ ಧರ್ಮಸ್ಥಳ ನೇರ್ತನೆ ಎಸ್.ಸಿ. ಕಾಲನಿ ರಸ್ತೆ ಕಾಮಗಾರಿಗೆ ರು. 6 ಲಕ್ಷ, ಮಲೆನಾಡು ಸಾಮಾನ್ಯ ಯೋಜನೆಯಡಿ ಮೇಲಂತಬೆಟ್ಟು ಗ್ರಾಮದ ನಡಕ್ಕರ- ಕಕ್ಕರ್ಮೆವರಗೆ ಕೂಡು ರಸ್ತೆ ರಚನೆಗೆ ರು. 5 ಲಕ್ಷ, ಸವಣಾಲು ಗ್ರಾಮದ ದುರ್ಗಾ ಕಾಳಿಕಾಂಬ ದೇವಸ್ಥಾನ ರಸ್ತೆ ಡಾಂಬರೀಕರಣಕ್ಕೆ ರು. 5 ಲಕ್ಷ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ತಾ.ಪಂ. ಸದಸ್ಯ ವಿನ್ಸೆಂಟ್ ಡಿಸೋಜ, ತಾ.ಪಂ. ಮಾಜಿ ಅಧ್ಯಕ್ಷ ಟಿ.ಜೆ. ಜೋಯ್, ಮಾಲಾಡಿ ಗ್ರಾಮ ಪಂ. ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಫೆಡ್ರಿಕ್ ಡಿ'ಸೋಜ, ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಸದಸ್ಯರಾದ ಸುಧಾಕರ ಆಳ್ವ, ಕೃಷ್ಣಪ್ಪ ಪೂಜಾರಿ, ಉಮೇಶ್, ಚಂದ್ರಹಾಸ ಶೆಟ್ಟಿ ಮದ್ದಡ್ಕ, ಸಹಾಯಕ ಅಭಿಯಂತರ ಶುಭಾಶ್ಚಂದ್ರ, ಎಂಜಿನಿಯರ್ ಶಿವಪ್ರಸಾದ್ ಅಜಿಲ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

