ದಕ್ಷಿಣ ಕನ್ನಡ

ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗೆ ಪೊಲೀಸರಿಂದ ಹಲ್ಲೆ: ಎಸ್ಪಿಗೆ ದೂರು

Published On :

ಉಡುಪಿ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯೊಬ್ಬರು ತಮ್ಮ ಮೇಲೆ ನಗರ ಠಾಣೆಯ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಎಸ್ಪಿ ಅವರಿಗೆ ದೂರು ನೀಡಿದ್ದಾರೆ.
 ದೂರು ನೀಡಿದವರು ಶ್ರೀಕರ (33) ಕಳೆದ 13 ವರ್ಷಗಳಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಬ್ರಹ್ಮಾವರ ಆಕಾಶವಾಣಿಯ ಬಳಿ ತಮ್ಮ ಕರ್ತವ್ಯ ಮುಗಿಸಿ, ರಾತ್ರಿ ಸುಮಾರು 11.30ಕ್ಕೆ ಉಡುಪಿಯ ಜನಾರ್ದನ ಹೊಟೇಲ್ ಬಳಿ 4 ಮಂದಿ ಗೆಳೆಯರೊಂದಿಗೆ ನಿಂತಿದ್ದಾಗ ಅಲ್ಲಿಗೆ ಬಂದ ನಗರ ಠಾಣೆಯ ಸಿಬ್ಬಂದಿ ಅಲ್ಲಿಂದ ತೆರಳುವಂತೆ ಹೇಳಿದರು. ಆಗ ಮಾತಿಗೆ ಮಾತು ಬೆಳೆದು, ನಗರ ಠಾಣೆಯ ಹೊಯ್ಸಳ ವಾಹನ ಸ್ಥಳಕ್ಕಾಗಮಿಸಿ, ತನ್ನನ್ನು ಅದರಲ್ಲಿ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಲಾಠಿಯಿಂದ ಮತ್ತು ಕೈಯಿಂದ ಮೈಮೇಲೆ ಗಾಯಗಳಾಗುವಂತೆ ಹೊಡೆದಿದ್ದಾರೆ ಎಂದು ಶ್ರೀಕರ ಅವರು ಎಸ್ಪಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
 ಅಲ್ಲದೇ ಪರಿಶಿಷ್ಟ ಜಾತಿಯವನಾದ ತನ್ನ ಬಗ್ಗೆ ನಗರ ಠಾಣೆ ಪೊಲೀಸರು ಅವಮಾನಕರ ರೀತಿಯಲ್ಲಿ ಮಾತನಾಡಿ, ಜಾತಿನಿಂದನೆ ಮಾಡಿದ್ದಾರೆ. ಭಾನುವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಸೋಮವಾರ ತನಗೆ ಜಾಮೀನು ಸಿಕ್ಕಿದ್ದು, ಮಂಗಳವಾರ ತಾನು ಮನೆಯವರ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದೇನೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.