ಕೃತಿಯಲ್ಲಿ ವಾಸ್ತವ ಚಿತ್ರಣ ಕಟ್ಟಿ ಕೊಡುವ ವಿಶುಕುಮಾರ್: ಅನುಬೆಳ್ಳೆ
ಕಾಂತಾವರ: ಹೇಳಬೇಕಾದ್ದನ್ನು ನೇರ, ನಿಷ್ಠುರವಾಗಿ ಹೇಳುವ ಜಾಯಾಮಾನದ ವಿಶುಕುಮಾರ್ ಅವರು ತುಳು ಮತ್ತು ಕುಂದಾಪುರ ಕನ್ನಡ ಮಿಶ್ರಿತ ಭಾಷಾ ಶೈಲಿ, ವಾಸ್ತವ ಚಿತ್ರಣವನ್ನು ಕಟ್ಟಿಕೊಡುವ ಶೈಲಿಯೂ ಅವರ ವೈಶಿಷ್ಟ್ಯತೆ ಎಂದು ಕಾದಂಬರಿಕಾರ, ಉಪನ್ಯಾಸಕ ರಾಘವೇಂದ್ರ ಬಿ. ರಾವ್ (ಅನುಬೆಳ್ಳೆ) ಹೇಳಿದರು.
ಇಲ್ಲಿನ ಪಂಪಮಹಾ ಕವಿ ಸಭಾಭವನದಲ್ಲಿ ಭಾನುವಾರ ನಡೆದ ನುಡಿನಮನ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದ್ದ ಜನಜೀವನ ಹೇಗೆ ಹಾಳಾಗುತ್ತದೆ ಎನ್ನುವುದನ್ನು ವಿವರಿಸುವ ಮಹತ್ವದ ಕೃತಿಯೇ ವಿಶುಕುಮಾರ್ ಅವರ 'ಭೂಮಿ' ಕಾದಂಬರಿ. ಭೂ ಮಸೂದೆ ಕಾನೂನಿಂದಾಗಿ ಉಳುವವನೇ ಹೊಲದೊಡೆಯ ಎಂದು ಸಮರ್ಥಿಸುವುದರ ಜೊತೆಗೆ ಗೇಣಿ ಪಡೆದುಕೊಳ್ಳುತ್ತಿದ್ದ ಧಣಿಗಳ ಬವಣೆಯನ್ನು ಸಶಕ್ತವಾಗಿ ಚಿತ್ರಿಸಿರುವ ಕಾದಂಬರಿ ಇದು ಎಂದರು.
ದ.ಕ.ದ ಮುಖ್ಯ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದ ವಿಶುಕುಮಾರ್ರ ಭೂಮಿ ಕಾದಂಬರಿ ಕರ್ಮವೀರದಲ್ಲಿ ಧಾರಾವಾಹಿಯಾಗಿ ಬಂದ ನಂತರ 1977ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿತ್ತು. ಅವರ ಎಲ್ಲಾ ಕಥೆ, ಕಾದಂಬರಿಗಳಿಗೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾದಂತೆ ಭೂಮಿ ಯ ಬಗ್ಗೆಯೂ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಇದು ಕೇವಲ ಸರ್ಕಾರದ ವಿರೋಧವಾಗಿ ಬರೆದ ಕೃತಿಯಾಗಿರದೆ ಕಾನೂನು ಜಾರಿಯಿಂದಾಗಿ ಧಣಿ, ಒಕ್ಕಲು ಎರಡೂ ಬಣಗಳ ಮಧ್ಯೆ ಆದ ಪಲ್ಲಟಗಳು, ಕಷ್ಟನಷ್ಟಗಳನ್ನು ಬಹಳ ಸೂಕ್ಷ್ಮವಾಗಿ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ ಎಂದು ಹೇಳಿದರು. ಸಿ.ಕೆ. ಪಡಿವಾಳ್ ಇದ್ದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಬೇಲಾಡಿ ರಾಮಚಂದ್ರ ಆಚಾರ್ಯ ಸ್ವಾಗತಿಸಿ, ಸದಾನಂದ ನಾರಾವಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

