ದಕ್ಷಿಣ ಕನ್ನಡ

ಎಂಜಿನಿಯರಿಂಗ್ ವಿದ್ಯಾರ್ಥಿಯ ಕಿರುಚಿತ್ರ ಕನಸು ನನಸು

Published On :

ವಿಟ್ಲ: ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ತನ್ನ ಕಾಲೇಜಿನ ವಿದ್ಯಾರ್ಥಿಗಳ ತಂಡ ಕಟ್ಟಿಕೊಂಡು ಕಿರುಚಿತ್ರ ಮಾಡುವ ಕನಸನ್ನು ನನಸಾಗಿಸಿದ್ದಾನೆ.
 ಪುತ್ತೂರಿನ ಕಬಕ ಸಮೀಪದ ವಿದ್ಯಾಪುರ ನಿವಾಸಿ, ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಶಿವಪ್ರಸಾದ್ ಇದೀಗ 'ಪ್ಲೇಸ್ಡ್ ಇನ್‌' ಎನ್ನುವ ಕಿರುಚಿತ್ರ ಹೊರತಂದಿದ್ದಾರೆ.
ಕಾಲೇಜಿನ ಒತ್ತಡ ಮತ್ತು ಕೆಲವು ಬೇರೆ ತೊಂದರೆಗಳಿಂದ ತನ್ನ ಕನಸನ್ನು ನನಸಾಗಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಹೇಗಾದರೂ ಮಾಡಿ ಚಿತ್ರ ಮಾಡಲೇಬೇಕೆಂದು ಕಾಲೇಜಿನ ವಿದ್ಯಾರ್ಥಿಗಳ ತಂಡ ಕಟ್ಟಿಕೊಂಡು ಪಾಂಚಜನ್ಯ ಫಿಲ್ಮ್ಸ್ ಬ್ಯಾನರ್ ಅಡಿ ಯಾವುದಾದರೂ ಸಾಮಾಜಿಕ ಸಂದೇಶ ಸಾರುವ ಕಿರುಚಿತ್ರ ತೆಗೆಯಬೇಕೆಂದು ಹೊರಟದ್ದು ಇವರ ಯಶೋಗಾಥೆಗೆ ಕಾರಣವಾಯಿತು.
 ಪದವಿ ಪಡೆದ ವಿದ್ಯಾರ್ಥಿಯ ವ್ಯಥೆ: ಡಿಗ್ರಿಗಳನ್ನು ಪಡೆದು ಕಾಲೇಜಿನಿಂದ ಹೊರ ಬರುವಾಗ ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಕೆಲಸ ಗಿಟ್ಟಿಸಿಕೊಳ್ಳವ ಹರ ಸಾಹಸವೇ ಚಿತ್ರದ ಕತೆ. ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ವಿಫಲನಾದ ವಿದ್ಯಾರ್ಥಿಯ ಮನಸ್ಥಿತಿಯನ್ನು ವಿವರಿಸುವಂತಹ ಚಿತ್ರಕಥೆಯನ್ನು ಸಿದ್ಧಪಡಿಸಿ ಮುಖ್ಯ ಪಾತ್ರದಲ್ಲಿ ತಾನೇ ಕಾಣಿಸಿಕೊಂಡು ನಿರ್ದೇಶನದ ಕಾರ್ಯವನ್ನೂ ಶಿವಪ್ರಸಾದ್ ತಾವೇ ಮಾಡಿದ್ದಾರೆ. ಸುಮಾರು 20 ನಿಮಿಷಗಳ ಕಾಲವಿರುವ ಚಿತ್ರದ ಸಂಭಾಷಣೆಯನ್ನು ಪ್ರಮೋದ್ ಬಾಳಿಗ, ರೆಜಿನ್‌ರಾಜ್ ಬರೆದಿದ್ದು, ಛಾಯಾಗ್ರಹಣವನ್ನು ಕೌಶಲ್ ಭಟ್ ಮಾಡಿದ್ದಾರೆ. ಸಂಭಾಷಣೆ, ಛಾಯಾಗ್ರಹಣ ಸೇರಿ ಸಂಕಲನವನ್ನು ರವೀಶ್ ಕೆಮ್ಮಾಯಿ, ಮೂಲ ಪರಿಕಲ್ಪನೆ ಮತ್ತು ಕಥೆಗೆ ಜೀವ ತುಂಬಲು ರವೀಶ್, ಪ್ರಮೋದ್ ಬಾಳಿಗ, ಶ್ರೀಕೃಷ್ಣ ಸಹಕಾರ ನೀಡಿದ್ದಾರೆ. ಅಕ್ಷಯ್ ನಾಯಕ್ ಸೌಂಡ್ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದಲ್ಲಿರುವ ಒಂದು ಹಾಡನ್ನು ಶ್ರೀಕೃಷ್ಣ ವಿಟ್ಲ ಬರೆದ್ದಿದ್ದು, ಉಮಾ ಸಿ., ಆಕಾಶ್ ಆಚಾರ್ಯ ಹಾಡಿದ್ದಾರೆ. ಚಿತ್ರದಲ್ಲಿ ಕುತೂಹಲ ಹೆಚ್ಚಿಸುವ ರೀತಿಯಲ್ಲಿ ಸಂಗೀತವನ್ನು ನೀಡುವ ಜೊತೆಗೆ ಕ್ಲಾರೆನ್ಸ್ ಅಲ್ಲೆನ್ ಕ್ರಾಸ್ತಾ ಹಾಡಿದ್ದಾರೆ. ಹಿನ್ನೆಲೆ ಧ್ವನಿಯನ್ನು ಸುದರ್ಶನ ಎಂ.ಎಲ್, ಪ್ರಶಾಂತ್ ಆಚಾರ್, ಪವನ್‌ರಾಜ್ ನೀಡಿದ್ದಾರೆ.
ತಾರಾಗಣದಲ್ಲಿ ಚೇತನ್ ಕುಮಾರ್, ಪ್ರಮೋದ್ ಬಾಳಿಗ, ರೆಜಿನ್‌ರಾಜ್, ವಿಶ್ವಾಸ್ ಸಾಯ, ಜಗನ್ನಿವಾಸ್ ರಾವ್ ಇದ್ದು, ಇವರ ಜೊತೆಗೆ ಕಾಲೇಜು ಉಪನ್ಯಾಸಕರಾದ ಪ್ರಶಾಂತ್ ರಾವ್, ಜಯಾ ಪೈ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಪುತ್ತೂರು ಬೈಪಾಸ್ ರಸ್ತೆ, ನೆಹರು ನಗರ, ಕಾಲೇಜಿನ ಆಸುಪಾಸು, ಕೆಮ್ಮಾಯಿಯಲ್ಲಿ ಚಿತ್ರೀಕರಣವನ್ನು ನಡೆಸಲಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ವಿವೇಕನಂದ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸ್ನೇಹಿತರು ಸಹಕಾರ ಸೀಡಿದ್ದಾರೆ. ಚಿತ್ರದ ಕತೆಯಿಂದ ಹಿಡಿದು ಸಂಕಲನ, ಸಂಗೀತ ಮತ್ತು ಡಬ್ಬಿಂಗ್‌ವರೆಗಿನ ಎಲ್ಲ ಕೆಲಸಗಳನ್ನು ವಿದ್ಯಾರ್ಥಿಗಳೇ ಮಾಡಿದ್ದು ಮತ್ತೊಂದು ವಿಶೇಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.