ಅಟ್ಟದಿಂದ ಬಿದ್ದ ವ್ಯಕ್ತಿ ಮೃತ್ಯು
ಸುಳ್ಯ: ಐವರ್ನಾಡು ಗ್ರಾಮದ ಕುಳ್ಳಂಪಾಡಿ ಚಿದಾನಂದ (65) ಗೌಡ ಅಟ್ಟದಿಂದ ಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ. 22ರಂದು ಚಿದಾನಂದ ಮನೆಯ ಅಟ್ಟದಿಂದ ಕೆಳಗೆ ಬಿದ್ದು ತೀವ್ರ ಜಖಂಗೊಂಡಿದ್ದರು. ಅವರನ್ನು ಪುತ್ತೂರಿಗೆ ತಂದು, ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಟ್ಟದಿಂದ ಬೀಳುವಾಗ ಏಣಿಯ ಒಂದು ಭಾಗ ಅವರ ಮೆದುಳಿಗೆ ಹೊಕ್ಕಿತ್ತು. ಅದನ್ನು ಆಪರೇಶನ್ ಮಾಡಿ ತೆಗೆದರೂ ಪ್ರಾಣಾಪಾಯ ಖಚಿತವಾಗಿದ್ದುದರಿಂದ ಆಪರೇಶನ್ ಮಾಡದೆ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಭಾನುವಾರ ಅವರನ್ನು ಐವರ್ನಾಡಿನ ಮನೆಗೆ ವಾಪಾಸ್ ಕರೆತಂದಾಗ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಅಬಕಾರಿ ದಾಳಿ: ಇಬ್ಬರ ಸೆರೆ
ಸುಳ್ಯ: ಕಳ್ಳಬಟ್ಟಿ ತಯಾರಿಸುತ್ತಿದ್ದವರ ಮನೆಗೆ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ತೊಡಿಕಾನ ಗ್ರಾಮದ ದೇವರಗುಂಡಿಯಲ್ಲಿ ಸಂಭವಿಸಿದೆ. ದೇವರಗುಂಡಿ ಲಕ್ಷ್ಮಣ ನಾಯ್ಕ ಹಾಗೂ ಕೇಪಣ್ಣ ನಾಯ್ಕ ಎಂಬವರು ಕಳ್ಳಬಟ್ಟಿ ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಮಂಗಳೂರು ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಎಸ್.ಐ.ಸಂದೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಲಕ್ಷ್ಮಣ ನಾಯ್ಕರ ಮನೆಯಿಂದ 4 ಲೀಟರ್ ಹಾಗೂ ಕೇಪಣ್ಣ ನಾಯ್ಕರ ಮನೆಯಿಂದ 5 ಲೀಟರ್ ಕಳ್ಳಬಟ್ಟಿ ಮತ್ತು ಅದನ್ನು ತಯಾರಿಸಲು ಬಳಸಿದ ಪಾತ್ರೆಗಳನ್ನು ವಶಪಡಿಸಿಕೊಂಡು, ಅವರಿಬ್ಬರನ್ನು ಬಂಧಿಸಿದರು.
ಬಂಧಿತರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

