ದಕ್ಷಿಣ ಕನ್ನಡ

ಅಹ್ಮದಾಬಾದ್, ಮುಂಬೈ,ಎರ್ನಾಕುಲಂಗೆ ವಿಶೇಷ ರೈಲು

Published On :

ಮಂಗಳೂರು: ಏಪ್ರೀಲ್‌ನಿಂದ ಜೂನ್‌ವರೆಗೆ ಬೇಸಗೆಯಲ್ಲಿ ಪ್ರಯಾಣಿಕರ ದಟ್ಟಣೆ ಹಿನ್ನಲೆಯಲ್ಲಿ ಮಂಗಳೂರು ಜಂಕ್ಷನ್ ಮತ್ತು ಅಹಮ್ಮದಾಬಾದ್ ನಡುವೆ ವಾರಕ್ಕೊಮ್ಮೆ ವಿಶೇಷ ರೈಲು, ಸಿಎಸ್‌ಟಿ ಮುಂಬಯಿ-ಎರ್ನಾಕುಲಂ ಜಂಕ್ಷನ್ ಮಧ್ಯೆ ವೀಕ್ಲಿ ವಿಶೇಷ ರೈಲು ಓಡಾಟ ನಡೆಸಲು ನೈಋತ್ಯ ರೇಲ್ವೆ ತೀರ್ಮಾನಿಸಿದೆ.
 ರೈಲು ನಂ. 09420 ಅಹ್ಮದಾಬಾದ್-ಮಂಗಳೂರು ಜಂಕ್ಷನ್ ವೀಕ್ಲಿ ಸೂಪರ್ ಫಾಸ್ಟ್ ಎಸಿ ಸ್ಪೆಷಲ್ ರೈಲು ಅಹ್ಮದಾಬಾದ್‌ನಿಂದ ಏ.3 ರಿಂದ ಜೂ.5ರ ವರೆಗೆ ಪ್ರತಿ ಬುಧವಾರ ಸಂಜೆ 4.35ಕ್ಕೆ ಹೊರಟು ಗುರುವಾರ ರಾತ್ರಿ 7.10ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಇದೇ ರೈಲು(ನಂ.09419)ಮಂಗಳೂರು ಜಂಕ್ಷನ್‌ನಿಂದ ಏ.4ರಿಂದ ಜೂ.6ರ ಅವಧಿಯಲ್ಲಿ ಪ್ರತಿ ಗುರುವಾರ ರಾತ್ರಿ 10.40ಕ್ಕೆ ಹೊರಡಲಿದ್ದು, ಶುಕ್ರವಾರ ರಾತ್ರಿ 11.15ಕ್ಕೆ ಅಹ್ಮದಾಬಾದ್ ತಲುಪಲಿದೆ. ಈ ರೈಲು ನದಿಯಾಡ್, ಆನಂದ್, ವಡೋದರ, ಭರೂಚ್, ಸೂರತ್, ನವಸರಾಯಿ, ವಲ್ಸದ್, ವಾಪಿ, ವಸೈ ರೋಡ್, ಪನ್ವೇಲ್, ರೋಹ, ಚಿಪ್ಲೂನ್, ರತ್ನಗಿರಿ, ಕನಕವಲ್ಲಿ, ಕುಡಲ್, ತಿವಿಮ್, ಕರ್ಮಾಲಿ, ಮಡ್ಗಾಂವ್, ಕಾರವಾರ, ಕುಮಟಾ, ಭಟ್ಕಳ್ ಮತ್ತು ಉಡುಪಿಗಳಲ್ಲಿ ನಿಲುಗಡೆ ಹೊಂದಿದೆ.  
 ರೈಲು ನಂ. 01065 ಸಿಎಸ್‌ಟಿ ಮುಂಬಯಿ-ಎರ್ನಾಕುಲಂ ಜಂಕ್ಷನ್ ಸ್ಪೆಷಲ್ ರೈಲು ಮುಂಬಯಿನಿಂದ ಏ.3ರಿಂದ ಜೂ.5ರ ವರೆಗೆ ಪ್ರತಿ ಬುಧವಾರ  ಸಂಜೆ 4.05ಕ್ಕೆ ಹೊರಡಲಿದ್ದು, ಗುರುವಾರ ರಾತ್ರಿ 9ಕ್ಕೆ ಎರ್ನಾಕುಲಂ ಜಂಕ್ಷನ್ ತಲುಪಲಿದೆ. ರೈಲು ನಂ.01066 ಎರ್ನಾಕುಲಂನಿಂದ ಏ.4ರಿಂದ ಜೂ.6ರ ವರೆಗೆ ಪ್ರತಿ ಗುರುವಾರ ರಾತ್ರಿ 11.30ಕ್ಕೆ ಹೊರಟು ಶನಿವಾರ ಬೆಳಗ್ಗೆ 2 ಗಂಟೆಗೆ ತಲುಪಲಿದೆ. ಈ ರೈಲು ದಾದರ್, ಥಾಣೆ, ಪನ್ವೇಲ್, ರೋಹ, ಖೇದ್, ಚಿಪ್ಲೂಣ್, ಸಂಗಮೇಶ್ವರ್, ರತ್ನಗಿರಿ, ಸಿಂಧುದುರ್ಗ, ಸಾವಂತವಾಡಿ, ಥಿವಿಮ್, ಕರ್ಮಾಳಿ, ಮಡ್ಗಾಂವ್, ಕಾರವಾರ, ಭಟ್ಕಳ್, ಮೂಕಾಂಬಿಕಾ ರೋಡ್, ಕುಂದಾಪುರ, ಉಡುಪಿ, ಮಂಗಳೂರು ಜಂಕ್ಷನ್, ಕಾಸರಗೋಡು, ಕಾಞಂಗಾಡ್, ಪಯ್ಯನ್ನೂರು, ಕಣ್ಣೂರು, ತಲಶ್ಶೇರಿ, ವಡಕರ, ಕೋಯಿಕ್ಕೋಡ್, ತ್ರಿರೂರ್, ಕುಟ್ಟಿಪುರಂ, ಶೋರ್ನೂರ್, ತ್ರಿಶೂರ್, ಅಲುವಾ ಬಳಿಕ ಎರ್ನಾಕುಲಂ ನಗರದಲ್ಲಿ ನಿಲುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.