ಆಟೋ ಮರಕ್ಕೆ ಡಿಕ್ಕಿ: ಚಾಲಕ ಸಾವು
ಪುತ್ತೂರು: ಅಟೋರಿಕ್ಷಾವೊಂದು ಮರಕ್ಕೆ ಡಿಕ್ಕಿ ಹೊಡೆದು ಚಾಲಕ ತೀವ್ರ ಗಾಯಗೊಂಡ ಘಟನೆ ಕೆಯ್ಯೂರು ಗ್ರಾಮದ ಬೊಳಿಕ್ಕಿಲ ಎಂಬಲ್ಲಿ ನಡೆದಿದೆ. ಮಾಡಾವಿನಿಂದ ಸವಣೂರು ಕಡೆಗೆ ತೆರಳುತ್ತಿದ್ದ ಅಟೋರಿಕ್ಷಾ ಮಂಗಳವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಮಾಡಾವು ನಿವಾಸಿ ಸಮದ್(20)ಎಂಬವರು ತೀವ್ರ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ ಮಗುಚಿ ಮೂವರಿಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೊಕ್ಕಡದ ಮಾಸ್ತಿಕಲು ಮಜಲು ಎಂಬಲ್ಲಿಂದ ಸೌತಡ್ಕ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಬೈಕೊಂದು ಮಗುಚಿ ಬಿದ್ದು ಮೂವರು ಗಾಯಗೊಂಡ ಘಟನೆ ನಡೆದಿದೆ. ಮಾಸ್ತಿಕಲು ಮಜಲು ಎಂಬಲ್ಲಿ ಭೂತದ ನೇಮೋತ್ಸವ ನೋಡಿ ಹಿಂತಿರುಗುತ್ತಿದ್ದಾಗ ದಾರಿ ಮಧ್ಯೆ ಬೈಕ್ ಮಗುಚಿ ಆಗಿ ಉರುಳಿತೆನ್ನಲಾಗಿದೆ. ಬೈಕ್ ಸವಾರ ಹರೀಶ್ ಪಿಜಿನಡ್ಕ, ಗುರುವ , ಮತ್ತು ಬಾಲಕ ಪುನೀತ್ ಗಾಯಗೊಂಡು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿಕ್ಷಕಗೆ ವಂಚನೆ: ದೂರು
ಉಡುಪಿ: ನಗರದ ಬಟ್ಟೆಯಂಗಡಿಯ ಮಾಲೀಕ ಮತ್ತು ಅವರ ಮಗ ಶಿಕ್ಷಕರೊಬ್ಬರಿಗೆ ಲಕ್ಷಾಂತರ ರು. ವಂಚಿಸಿದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಬಲಪಾಡಿಯ ನಿವಾಸಿ ಶಿಕ್ಷಕ ರಮಣ ಭಟ್ 2000ರಲ್ಲಿ ನಗರದ ಎಸ್.ಎಂ.ಎಸ್.ಪಿ. ಕಾಂಪ್ಲೆಕ್ಸ್ನಲ್ಲಿರುವ ಬಟ್ಟೆಯಂಗಡಿಯ ಮಾಲೀಕ ಕೆ. ಹರಿದಾಸ ಉಪಾಧ್ಯಾಯ ಎಂಬರಲ್ಲಿ ರು. 9,26,500 ಹೂಡಿಕೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಉಪಾಧ್ಯಾ ಒಳ್ಳೆಯ ಬಡ್ಡಿ ನೀಡುವುದಾಗಿ ಪ್ರಾಮಿಸರಿ ನೋಟ್ ಬರೆದುಕೊಟ್ಟಿದ್ದರು. ಅಲ್ಲದೆ ಉಪಾಧ್ಯಾಯ ಅವರ ಮಕ್ಕಳಾದ ಕೆ. ನಾಗರಾಜ ಮತ್ತು ಕೆ. ಶ್ರೀಕಾಂತ ಸಾಕ್ಷಿದಾರರಾಗಿ ಸಹಿ ಮಾಡಿದ್ದರು. ಇದೀಗ ರಮಣ ಭಟ್ ಹಣ ಹಿಂತಿರುಗಿಸುವಂತೆ ಕೇಳಿದಾಗ ಉಪಾಧ್ಯಾಯ ಮತ್ತವರ ಮಕ್ಕಳು ವ್ಯವಹಾರದಲ್ಲಿ ನಷ್ಟ ಉಂಟಾಗಿರುತ್ತದೆ ಹಾಗೂ ಅವರ ಜಾಗವು ಸಿವಿಲ್ ನ್ಯಾಯಾಲಯದಲ್ಲಿ ಎಟ್ಯಾಚ್ ಆಗಿರುತ್ತದೆ ಎಂದು ಹೇಳಿ, ತಮಗೆ ಮೋಸ ಮಾಡಿರುತ್ತಾರೆ ಎಂದು ಉಡುಪಿ ನಗರ ಠಾಣೆಗೆ ದೂರು ನೀಡಿದ್ದ ಪ್ರಕರಣ ದಾಖಲಾಗಿದೆ.
ಕ್ವಾರಿ ಮಾಲೀಕ, ಕಾರ್ಮಿಕರ ನಡುವೆ ಜಟಾಪಟಿ
ವಿಟ್ಲ: ಕ್ವಾರಿ ಮಾಲೀಕರು ಮತ್ತು ಕಾರ್ಮಿಕರ ನಡುವೆ ಜಟಾಪಟಿ ನಡೆದು ವಿಟ್ಲ ಠಾಣೆಯಲ್ಲಿ ಕೇಸು ದಾಖಲಾದ ಘಟನೆ ಮಂಗಳವಾರ ರಾತ್ರಿ ಕುದ್ದುಪದವಿನಲ್ಲಿ ನಡೆದಿದೆ. ಕುದ್ದುಪದವು ನಿವಾಸಿಗಳಾದ ಅಲಿ, ಇಬ್ರಾಹಿಂ, ಮಹಮ್ಮದ್ ಆಲಿ, ಎಂಬವರು ಕೆಂಪು ಕಲ್ಲಿನ ಕೋರೆಯಲ್ಲಿ ಕಲ್ಲು ಲಾರಿಗೆ ತುಂಬಿಸುವ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಮಾಲಕರು ಸರಿಯಾಗಿ ಸಂಬಳ ನೀಡದ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ಕುದ್ದುಪದವು ಜಂಕ್ಷನ್ನಲ್ಲಿದ್ದ ಕೋರೆ ಮಾಲಕರಾದ ಇಸುಬು, ಇಬ್ರಾಹಿಂ ಅವರಲ್ಲಿ ಸಂಬಳ ಕೇಳಲು ಆಗಮಿಸಿದ್ದರು. ಈ ಸಂದರ್ಭ ಮಾತಿನ ಚಕಮಕಿ ನಡೆದು ಹೊಡೆದಾಟ ಮಾಡಿಕೊಂಡಿದ್ದಾರೆ. ವಿಟ್ಲ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

